ಕನ್ನಡಪ್ರಭ ವಾರ್ತೆ, ಕಡೂರು
ಬಿಜೆಪಿ -ಜೆಡಿಎಸ್ ಎಂಬುದು ಸಹಜ ಮೈತ್ರಿ ಆಗಿದ್ದು, ನೇಗಿಲ ಹೊತ್ತ ರೈತನ ಚಿಹ್ನೆಯಿಂದ ಹುಟ್ಟಿಕೊಂಡ ಜನತಾ ಪಕ್ಷದ ಮೂಲ ಕೂಡ ಸಂಘ ಪರಿವಾರ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳಿದರು ಸಿ.ಟಿ. ರವಿ ಹೇಳಿದರು.ತಾಲೂಕಿನ ಸಖರಾಯಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಹಿಂದೆಯೂ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಅಂದರೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಜನತಾ ಪರಿವಾರ ರೈತನ ನೇಗಿಲು ಹೊತ್ತ ರೈತನ ಚಿಹ್ನೆಯಲ್ಲಿ ಇಂದಿರಾ ಗಾಂಧಿಯವರನ್ನು 1977ರಲ್ಲಿ ಸೋಲಿಸಿದ್ದೆವು. ಇದೀಗ ಅಂತಹ ಸ್ಥಿತಿ ಎದುರಾಗಿದ್ದು ಮೋದಿಯವರು ಮತ್ತೊಮ್ಮೆ ಪ್ರಧಾನಿಗಳಾಗಬೇಕು ಭಾರತ ವಿಶ್ವಗುರು ಆಗಬೇಕು ಎಂಬ ಆಶಯದಿಂದ ಕರ್ನಾಟಕದಲ್ಲಿ ಜನತಾದಳದೊಂದಿಗೆ ಮೈತ್ರಿ ಆಗಿದೆ. ಹಾಗಾಗಿ ಉಡುಪಿ- ಚಿಕ್ಕಮಗಳೂರು, ಕಡೂರು ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ -ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಗ್ರಹಚಾರ ಕೆಟ್ಟಾಗ ಎಲ್ಲವೂ ಗೊತ್ತಾಗುತ್ತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೈತ್ರಿ ಆಗಿದ್ದರೆ ಚಿತ್ರಣವೇ ಬೇರೆ ಆಗುತ್ತಿತ್ತು. ಆದರೆ ನಮ್ಮ ಟೈಮ್ ಸರಿ ಇಲ್ಲ ಎಂದು ಭಾವಿಸುತ್ತೇನೆ. ಮೈತ್ರಿ ಆಗಿದ್ದರೆ ವಿರೋಧ ಪಕ್ಷದಲ್ಲಿರುವ ನಾವು ಆಡಳಿತ ಪಕ್ಷದ ಸ್ಥಾನದಲ್ಲಿರುತ್ತಿದ್ದೆವು. ಕಾಂಗ್ರೆಸ್ ಅಧಿಕಾರದಲ್ಲಿ ಇರುತ್ತಿರಲಿಲ್ಲ. ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ನಲ್ಲಿ ಇರುತ್ತಿರಲಿಲ್ಲ. ಈ ಚುನಾವಣೆ ನಂತರ ಯಾರು ಕಾಂಗ್ರೆಸ್ ನಲ್ಲಿ ಇರುತ್ತಾರೆ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ನವರು ಅಧಿಕಾರದಲ್ಲಿ ಇರುವಾಗಲೇ ದಲಿತ ಸಿಎಂ ಬೇಕು ಎಂದು ಕಾಂಗ್ರೆಸ್ ನವರೇ ಕೇಳುತ್ತಿದ್ದಾರೆ ಎಂದರೆ ಸಿದ್ದರಾಮಯ್ಯ ನವರ ವಿರೋಧಿ ಅಲೆ ಅವರ ಪಕ್ಷದಲ್ಲೇ ಇದೆ ಎಂಬುದು ಸ್ಪಷ್ಟ ಎಂದು ಕುಟುಕಿದರು. ಇದು ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ನಡುವೆ ಚುನಾವಣೆ. ದೇಶಭಕ್ತರು ಮತ್ತು ದೇಶದ ವಿರೋಧಿಗಳ ನಡುವೆ ನಡೆಯುತ್ತಿರುವ ಈ ಚುನಾವಣೆ. ಕೆಫೆ ಬಾಂಬ್ ಪ್ರಕರಣದಲ್ಲಿ ಚಿಕ್ಕಮಗಳೂರಿನ ಆತನನ್ನು ತನಿಖೆಗಾಗಿ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಹೀಗೆ ಬಿಟ್ಟರೆ ಜಾತ್ರೆ ಹಬ್ಬಗಳಲ್ಲಿ ಬಾಂಬ್ ಹಾಕಿದರೆ ಅದಕ್ಕೆ ಹೊಣೆ ಯಾರು.? ಶಾಲಾ ಮಕ್ಕಳಿಗೆ ಬಾಂಬ್ ಹಾಕಿದ್ದರೆ ಏನಾಗುತಿತ್ತು ಎಂದು ಪ್ರಶ್ನಿಸಿದರು.ಅಮೆರಿಕದಲ್ಲಿ 35,000 ರು. ನೀಡಿ ಕೋವಿಡ್ ಇಂಜೆಕ್ಷನ್ ಪಡೆದರು. ಆದರೆ ಮೋದಿಯವರು ಭಾರತದ 140 ಕೋಟಿ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಿದರು. ಯಾರನ್ನು ಯಾವ ಪಕ್ಷ ಎಂದು ಯಾರನ್ನು ಕೇಳಿಲ್ಲ. ಅದು ಕೇಂದ್ರ ಸರ್ಕಾರದ್ದು ಮೋದಿಯವರು ನಮ್ಮ ದೇಶದ 84 ಕೋಟಿ ಜನರಿಗೆ ಬ್ಯಾಂಕ್ ಖಾತೆ ಮಾಡಿಸಿಕೊಟ್ಟರು. ಉಚಿತ ಗ್ಯಾಸ್, ವಿಶ್ವಕರ್ಮ ಯೋಜನೆ ಯಲ್ಲಿ 81 ಸಾವಿರ ರು. ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿದೆ. ಮೋದಿ ಗ್ಯಾರಂಟಿ ಬದುಕನ್ನು ಬದಲಾಯಿಸುವುದು. ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿರುವುದಕ್ಕೆ ನಮ್ಮ ತಕರಾರು ಇಲ್ಲ. ಕುಡಿಯುತ್ತಿದ್ದವರಿಗೆ ಒಂದು ಕ್ವಾಟರ್ ಗೆ 50 ರು. ಹೆಚ್ಚಿಸಿದರು. 15 ರು.ನ ಒಂದು ಪಹಣಿಗೆ ರು..40 ಮಾಡಿದ್ದಾರೆ. ಇದನ್ನು ಪಿಕ್ ಪಾಕೆಟ್ ಎನ್ನುತ್ತಾರೆ ಎಂದರು.
ಹಿಂದಿನ ಸರ್ಕಾರ 10,000 ಕೊಟ್ಟರೆ ಕೊಳವೆಬಾವಿ ಗೆ ವಿದ್ಯುತ್ ಸಂಪರ್ಕ, ಕಂಬವನ್ನು ನೀಡುತಿತ್ತು. ಈ ಸರ್ಕಾರದಲ್ಲಿ ಮೂರುವರೆ ಲಕ್ಷ ರು. ಕೊಡಬೇಕಿದ್ದು ಇದರಲ್ಲಿ ಕಂಬ ತಂತಿ ಟಿಸಿ ಎಲ್ಲವೂ ನಿಮ್ಮಹಣದಿಂದ ನೀಡುತಿದ್ದಾರೆ.ಈ ಮಳೆ ಹೋಗಲು ಈ ಸರ್ಕಾರ ಬರಲು ಕಾಕತಾಳಿಯವೋ ಏನೋ ಗೊತ್ತಿಲ್ಲ. 6 ತಿಂಗಳಿಂದ ಹಾಲಿನ ಸಬ್ಸಿಡಿ ಅನ್ನು ಇದುವರೆಗೂ ಸಂದಾಯ ಮಾಡಿಲ್ಲ. ಅತಿ ಹೆಚ್ಚಿನ ಸಾಲ ಈ ಬಾರಿ ಮಾಡಿದ್ದಾರೆ. ನಮ್ಮ ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಅವರು ಜನರ ಸೇವೆ ಮಾಡುವ ಪೂಜಾರಿಯಾಗಿದ್ದಾರೆ. ಈ ಬಾರಿ ಪೂಜಾರಿ ಎಂಬ ಘೋಷಣೆ ಮೂಲಕ ಮೈತ್ರಿಯ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.
ಈ ಮಹಾ ಶಕ್ತಿ ಕೇಂದ್ರದಲ್ಲಿ 26 ಬೂತುಗಳಿದ್ದು, ಕಳೆದ ಬಾರಿ 15 ಬೂತ್ ಗಳಲ್ಲಿ ಬಿಜೆಪಿ ಲೀಡ್ ಬಂದಿದ್ದು 15 ಸಾವಿರ ಓಟುಗಳು ಬಿಜೆಪಿಗೆ ಬರುವಂತೆ ಕೆಲಸ ಮಾಡಬೇಕು. ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವಂತೆ ಕೆಲಸ ಮಾಡಬೇಕು ಎಂದು ಕೋರಿದರು.