ಹರಿ, ಖರ್ಗೆ, ಯತೀಂದ್ರ ಮುಸಲ್ಮಾನರ ಸಂತತಿ

KannadaprabhaNewsNetwork |  
Published : Aug 19, 2026, 01:30 AM IST
ಪೋಟೋ: 18ಎಸ್‌ಎಂಜಿಕೆಪಿ06ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು.  | Kannada Prabha

ಸಾರಾಂಶ

BJP leader Kumar Bangarappa accused. Vijayendra, Raghavendra win in Shikaripura Assembly, Lok Sabha

-ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ । ಆರೆಸ್ಸೆಸನ್ನು ಏನೂ ಮಾಡಲು ಸಾಧ್ಯವಿಲ್ಲ । ಅದು ಅಷ್ಟು ಬೆಳೆದಿದೆಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್‌ನವರಿಗೆ ಹಗಲು ರಾತ್ರಿ ಆರ್‌ಎಸ್‌ಎಸ್‌ ಬಗ್ಗೆ ಚಿಂತೆ ಮಾಡದಿದ್ರೆ ನಿದ್ರೆ ಬರಲ್ಲ. ನಾಳೆ ಬೆಳಗ್ಗೆ ಏನು ಹೇಳಬೇಕು ಅಂತ ರಾತ್ರಿಯೆಲ್ಲ ಯೋಚಿಸ್ತಾರೆ. ಅವರೂ ಏನೇ ಮಾಡಿದರೂ ಆರ್‌ಆರ್‌ಎಸ್‌ಗೆ ಏನೂ ಮಾಡಲೂ ಸಾಧ್ಯವಿಲ್ಲ. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಎಲ್ಲರೂ ಪ್ರಯತ್ನ ಮಾಡಿ, ಮಣ್ಣು ತಿಂದು ಹೋಗಿದ್ದಾರೆ. ಯಾರ ಕೈಯಲ್ಲೂ ಆಗಿಲ್ಲ. ಇನ್ನು ಹರಿಪ್ರಸಾದ್ ಯಾವ ಲೆಕ್ಕ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹರಿಪ್ರಸಾದ್, ಖರ್ಗೆ, ಯತೀಂದ್ರ ಎಲ್ಲರೂ ಮುಸಲ್ಮಾನರ ಸಂತತಿ. ಈ ಸಂತತಿಯಿಂದ ಆರ್‌ಎಸ್‌ಎಸ್‌ ಅನ್ನು ಏನು ಮಾಡಲು ಸಾಧ್ಯವಿಲ್ಲ. ಅವರು ಪ್ರಯತ್ನ ಮಾಡಿದಾಗೆಲ್ಲಾ ಆರ್‌ಎಸ್‌ಎಸ್‌ ಹತ್ತು ಪಟ್ಟು ಹೆಚ್ಚು ಬೆಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಅಲ್ಲಿ ಸೋನಿಯಾ ಗಾಂಧಿ ವಂದೇ ಮಾತರಂ ಮಹತ್ವ ಗೊತ್ತಿಲ್ಲದೇ ಮಾತಾಡ್ತಾರೆ. ಇಲ್ಲಿ ರಾಜ್ಯಾಧ್ಯಕ್ಷ ಹರಿಪ್ರಸಾದ್ ಆರ್‌ಎಸ್‌ಎಸ್‌ ಬಗ್ಗೆ ಮಾತಾಡ್ತಾರೆ. ಎಲ್.ಕೆ.ಅಡ್ವಾಣಿ, ವಾಜಪೇಯಿ, ನರೇಂದ್ರ ಮೋದಿ ಎಲ್ಲರೂ ಆರ್‌ಎಸ್‌ಎಸ್‌ ಪ್ರಾಡೆಕ್ಟ್‌ ಕಾಶ್ಮೀರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು, ಇದೇ ಆರ್‌ಎಸ್‌ಎಸ್‌ ಕಾರ್ಯಕರ್ತರು. ಆರ್ಟಿಕಲ್ 370 ರದ್ದು ಮಾಡಿದ್ದು ಕೂಡ ಆರ್‌ಎಸ್‌ಎಸ್‌ನಿಂದ ಬೆಳೆದ ಮೋದಿ. ಆರ್‌ಎಸ್ಎಸ್‌ನ ಸ್ಫೂರ್ತಿಯಿಂದ ದೇಶ ಒಂದಾಗಿ ಹೋಗುತ್ತಿದೆ. ಆರ್‌ಎಸ್‌ಎಸ್‌ನಿಂದ ಬಂದ ಅಧಿಕಾರದಲ್ಲಿರುವವರು ದೇಶದ್ರೋಹಿಗಳನ್ನು ಹುಡುಕುತ್ತಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶದವರನ್ನು ಹುಡುಕಿ ಬಂಧಿಸುತ್ತಿದ್ದಾರೆ ಎಂದು ಹೇಳಿರುವ ಹರಿಪ್ರಸಾದ್‌ ಗೂಂಡಾಗಿರಿ, ಜೈಲಲ್ಲಿ ಇರಬೇಕಾದ ಅವರಿಗೆ ಏನ್ರೀ ಗೊತ್ತು ಆರ್‌ಎಸ್‌ಎಸ್‌ ಮಹತ್ವ ಎಂದು ಕಿಡಿಕಾರಿದರು.

ಗೃಹ ಖಾತೆ ಮರೆತ ಖರ್ಗೆ:

ಪ್ರಿಯಾಂಕ್ ಖರ್ಗೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಕೊಲೆ, ಆತ್ಮಹತ್ಯೆ ಲೆಕ್ಕವಿಲ್ಲದಷ್ಟು ನಡೀತಿದೆ. ತಮ್ಮ ಸಚಿವ ಸ್ಥಾನದ ಕೆಲಸವನ್ನೇ ಅವರು ಮರೆತು ಬಿಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜ್ಯದ ಶಾಂತಿ- ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಲಿ. ಇನ್ನು ಯತೀಂದ್ರ ಕೂಡ ವಿಷ ಸರ್ಪ ಎಂದು ಕರೆದಿದ್ದಾರೆ. ಅವರಪ್ಪ ಕೂಗಿ ಕೂಗಿ, ಮನೆಗೆ ಹೋಗಿದ್ದಾರೆ. ಈಗ ಯತೀಂದ್ರ ಕೂಗ್ತಿದ್ದಾನೆ. ಆರ್‌ಎಸ್‌ಎಸ್ ಹಿಂದೂ ಧರ್ಮದ ಬಗ್ಗೆ ಬೈದಿದ್ದೇ ಬೈದಿದ್ದು, ಮುಸಲ್ಮಾನರ ವೋಟಿಗಾಗಿ ಇವರು ಏನು ಬೇಕಾದ್ರೂ ಮಾಡುತ್ತಾರೆ ಎಂದು ಹರಿಹಾಯ್ದರು.

ವಂದೇ ಮಾತರಂ ವಿಚಾರದಲ್ಲಿ ಸೋನಿಯಾ ಗಾಂಧಿ ನಡವಳಿಕೆ ಇಡೀ ದೇಶದ ರಾಷ್ಟ್ರಭಕ್ತರಿಗೆ ನೋವು ತರಿಸಿದೆ. ಅನೇಕ ಕಾಂಗ್ರೆಸ್ ನಾಯಕರು ನೊಂದು ನನಗೆ ಕಾಲ್ ಮಾಡಿದ್ದಾರೆ. ವಂದೇ ಮಾತರಂ ಗೀತೆಯಿಂದ ಸ್ಫೂರ್ತಿ ಪಡೆದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದರು. ಅದೇ ಸ್ಫೂರ್ತಿಯಿಂದ ಸ್ವಾತಂತ್ರ್ಯ ತಂದುಕೊಟ್ಟರು. ಸ್ವಾತಂತ್ರ್ಯಕ್ಕೆ ಹೋರಾಡಿದ ಲಕ್ಷಾಂತರ ಜನರ ಆತ್ಮಕ್ಕೆ ಅವರ ನಡವಳಿಕೆ ನೋವು ತರಿಸಿದೆ ಎಂದರು.

ಸೋನಿಯಾ ಗಾಂಧಿಗೂ ಮತ್ತು ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧವಿಲ್ಲ, ಆಗ ಅವರು ಇಟಲಿಯಲ್ಲಿ ಇದ್ದರು. ಏನು ಮಾಡುತ್ತಿದ್ದರು ಅಂತ ನಾನು ಮಾತಾಡಲ್ಲ. ವೈಯಕ್ತಿಕ ಟೀಕೆ ಮಾಡಲು ನಾನು ಇಷ್ಟಪಡಲ್ಲ. ದೇಶಕ್ಕೆ ಬಂದು ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್ ಹೊತ್ತ ಮೇಲಾದ್ರೂ ಅದನ್ನು ತಿಳಿದುಕೊಳ್ಳಬೇಕಿತ್ತು.

ಕಾಂಗ್ರೆಸ್ ಹಾಗೂ ವಂದೇ ಮಾತರಂ ಇತಿಹಾಸ ಓದಬೇಕಿತ್ತು. ಅವರ ನಡವಳಿಕೆ ನೋಡಿ ಇಂತಹವರ ಕೈಗೆ ಕಾಂಗ್ರೆಸ್ ಸಿಕ್ಕಿದೆ ಎಂದು ನೋವಾಗಿದೆ.

ಕ್ಷಮೆ ಕೇಳಿದ್ರೇ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ನೆಮ್ಮದಿ ಸಿಗುತ್ತೇ. ಎಲ್ಲವೂ ರಾಜಕಾರಣ ಅಲ್ಲ. ಅವರು ಮಾಡಿದ್ದು ತಪ್ಪು ಅಂತ ಕಾಂಗ್ರೆಸ್ ನಾಯಕರು ಹೇಳಲಿ. ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನೆ ಇದ್ದಾರೆ. ವಂದೇ ಮಾತರಂಗೆ ಗೊತ್ತಿದ್ದು ಅಪಮಾನ ಮಾಡೋದು ರಾಷ್ಟ್ರದ್ರೋಹ ಎಂದು ಕುಟುಕಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ವೆಂಕಟೇಶ್ ರಾವ್.ಎಂ.ಎಸ್. ಸೂರ್ಯನಾರಾಯಣ, ಇ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್ ಜಾಧವ್, ಶ್ರೀಕಾಂತ್, ಯಜ್ಞ ನಾರಾಯಣ್, ಸತ್ಯನಾರಾಯಣ್, ಸಂತೋಷ್ ಇದ್ದರು.

....ಕೋಟ್‌...

ಕೇಂದ್ರ ಬಿಜೆಪಿಯಲ್ಲಿ ಕೆಲ ಬದಲಾವಣೆ ಆಗಿದೆ. ಅನೇಕ ನಾಯಕರು ಬಲಿದಾನ ಮಾಡಿ ಕಟ್ಟಿದ ಪಕ್ಷ ಬಿಜೆಪಿ. ರಾಷ್ಟ್ರೀಯತೆ, ಹಿಂದುತ್ವ, ಸಾಮೂಹಿಕ ನಾಯಕತ್ವದಡಿ ಬೆಳೆದು ಬಂದಿದೆ. ಬಿಜೆಪಿಗೆ ಭವಿಷ್ಯವಿದೆ. ಪಕ್ಷದ ಶುದ್ಧೀಕರಣ ಇವತ್ತಿಲ್ಲ ನಾಳೆ ಆಗುತ್ತೆ. ಅದರಲ್ಲಿ ಯಾವ ಅಪನಂಬಿಕೆ ಬೇಡ.

-ಕೆ.ಎಸ್‌. ಈಶ್ವರಪ್ಪ, ಮಾಜಿ ಡಿಸಿಎಂ.

-----------------

ಪೋಟೋ: 18ಎಸ್‌ಎಂಜಿಕೆಪಿ06

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಟ್ಟನಹಳ್ಳಿ ಬಡಾವಣೆಗೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ
ಗುಟ್ಕಾ ನಿಷೇಧ: ಸಚಿವ ಯು.ಟಿ ಖಾದರ್ ಕ್ರಮ ಸ್ವಾಗತಾರ್ಹ