-30 ರಂದು ನಗರದ 288 ಬೂತ್‌ಗಳ ಬಿಎಲ್‌ಎ ಸಭೆ

KannadaprabhaNewsNetwork |  
Published : Aug 19, 2026, 01:30 AM IST
ಪತ್ರಿಕಾಗೋಷ್ಠಿಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಗಿ ಕೃಷ್ಣ  ಮಾತನಾಡಿದರು. | Kannada Prabha

ಸಾರಾಂಶ

BLA meeting of 288 booths in the city on the 30th

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಸಂಬಂಧಿಸಿ ನಗರದ ಮತದಾರರಿಗೆ ಮತ್ತಷ್ಟು ನೆರವು ನೀಡುವ ಉದ್ದೇಶದಿಂದ ಆ.30 ರಂದು ಪೇಸ್ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರ ಭಕ್ತರ ಬಳಗದಿಂದ ನಗರದ ಎಲ್ಲ 288 ಬೂತ್‌ಗಳ ಬಿಎಲ್‌ಎ ಸಭೆಯನ್ನು ಏರ್ಪಡಿಸಲಾಗಿದೆ ಎಂದು ರಾಷ್ಟ್ರ ಭಕ್ತರ ಬಳಗದ ಮುಖ್ಯಸ್ಥ ಕೆ.ಈ. ಕಾಂತೇಶ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಇದೀಗ ಮುಗಿದಿದೆ. ಆದರೆ ಕರಡು ಮತದಾರರ ಪಟ್ಟಿ ಆ.24 ರಂದು ಪ್ರಕಟಗೊಳ್ಳಲಿದೆ. ಅದರಲ್ಲಿ ಹೆಸರಿಲ್ಲದ ಮತದಾರರನ್ನು ಗುರುತಿಸಿ ಮತ್ತೆ ಮರು ಸೇರ್ಪಡೆಗೊಳಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕಾಗಿ ರಾಷ್ಟ್ರ ಭಕ್ತರ ಬಳಗ ನಗರದ 288 ಬೂತ್‌ಗಳಲ್ಲಿಯೂ ಪ್ರತಿ ಬೂತ್‌ಗೆ ಇಬ್ಬರು ಮಹಿಳೆ ಕಾರ್ಯಕರ್ತರು ಮತ್ತು ಇಬ್ಬರು ಪುರುಷ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಅವರಿಗೆ ಸೂಕ್ತ ಸಲಹೆ ನೀಡಿ ತರಬೇತಿಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಬಿಎಲ್‌ಎ ಸಭೆಯನ್ನು ಆಯೋಜಿಸಿದೆ ಎಂದರು.

ಪ್ರತಿ ಬೂತ್‌ನಲ್ಲಿಯೂ ಇರುವ ನಮ್ಮ ಕಾರ್ಯಕರ್ತರು ಕರಡು ಪ್ರತಿ ಲಭ್ಯವಾದ ಕೂಡಲೇ ಅದರ ಆಧಾರದಲ್ಲಿ ಬಿಎಲ್‌ಒ ಜೊತೆಗೂಡಿ ಪ್ರತಿ ಮನೆಗೂ ಭೇಟಿ ನೀಡಿ ಮತಪಟ್ಟಿಯಿಂದ ಯಾರೂ ವಂಚಿತರಾಗಿದ್ದಾರೆ. ಅವರನ್ನು ಮರು ಸೇರ್ಪಡೆಗೊಳಿಸಲು ಯಾವ ದಾಖಲೆಗಳು ಬೇಕು ಎಂಬ ವಿವರಗಳನ್ನು ತಿಳಿದು ಅವರಿಗೆ ನೆರವು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಬೇಕಾದ ದಾಖಲೆಗಳನ್ನು ಮತ್ತು ಅನುಸರಿಸಬೇಕಾದ ನಿಯಮಗಳನ್ನು ತಿಳಿಸಲಿದ್ದಾರೆ. ಇದು ಯಾರು ಅರ್ಹ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಸೇರ್ಪಡೆಗೊಳಿಸಲು ಅನುಕೂಲವಾಗುತ್ತದೆ ಎಂದರು.

ಈಗಾಗಲೇ ರಾಜ್ಯದಲ್ಲಿ 5,54,32,314 ಮತದಾರರಲ್ಲಿ 1,08,75,304 ಮತಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಹಾಗೇ ನಗರದಲ್ಲಿಯೂ 2,77,098 ಮತಗಳಿದ್ದು, ಈಗ 56,463 ಮತಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇದರಲ್ಲಿ ಮೃತ ಪಟ್ಟವರು ಸ್ಥಳಾಂತರಗೊಂಡವರು ಎರಡು ಕಡೆ ಇರುವವರು ಇದ್ದಾರೆ. ಇದನ್ನೆಲ್ಲಾ ತೆಗೆದರು ಕೂಡ ಇನ್ನು ಅರ್ಹ ಮತದಾರರು ಇರುತ್ತಾರೆ. ಅವರನ್ನು ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯವನ್ನು ರಾಷ್ಟ್ರ ಭಕ್ತ ಬಳಗ ಮಾಡುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಟ್ಟನಹಳ್ಳಿ ಬಡಾವಣೆಗೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ
ಗುಟ್ಕಾ ನಿಷೇಧ: ಸಚಿವ ಯು.ಟಿ ಖಾದರ್ ಕ್ರಮ ಸ್ವಾಗತಾರ್ಹ