22ಕ್ಕೆ ಯಕ್ಷಗಾನ ಭೀಷ್ಮ ಪರ್ವ, ಗಧಾಯುದ್ಧ ಪ್ರದರ್ಶನ

KannadaprabhaNewsNetwork |  
Published : Aug 19, 2026, 01:30 AM IST
ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಬೆಳೆ ಸಂಪೂರ್ಣ ಒಣಗಿರುವುದು. | Kannada Prabha

ಸಾರಾಂಶ

Yakshagana Bhishma Parva, donkey fight performance on the 22nd

ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿ ಸಂಸ್ಥೆ, ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ಆ.22 ರಂದು ಸಂಜೆ 5 ಗಂಟೆಗೆ ಯಕ್ಷಗಾನ ಭೀಷ್ಮ ಪರ್ವ ಮತ್ತು ಗಧಾಯುದ್ದ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಸಂಚಾಲಕ ಉಮೇಶ್ ಆರಾಧ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭೀಷ್ಮ ಪರ್ವ ಮತ್ತು ಗಧಾಯುದ್ಧ ಯಕ್ಷಗಾನ ಪ್ರಸಂಗಗಳನ್ನು ಕುಮುಟ ತಾಲೂಕಿನ ಯಾಜಿ ಯಕ್ಷಮಿತ್ರ ಮಂಡಳಿ, ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯುತ್ತದೆ ಎಂದರು.

ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಕೋಶಾಧ್ಯಕ್ಷ ಕೆ.ಈ. ಕಾಂತೇಶ್, ಪ್ರಮುಖರಾದ ಕೆ.ವೆಂಕಟೇಶ್ ರಾವ್, ಎಂ.ಎಸ್. ಸೂರ್ಯನಾರಾಯಣ, ಎಚ್.ಎನ್. ಛಾಯಾಪತಿ, ಸಂತೋಷ್ ಕುಮಾರ್.ಹೆಚ್.ಆರ್ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಯಕ್ಷ ಸಾಧಕರಾದ ಪ್ರಸಿದ್ಧ ಭಾಗವತರಾದ ಕೇಶವ ಹೆಗ್ಗಡೆ ಕೊಳಲಿ, ಯಕ್ಷಗಾನ ಕಲಾವಿದರಾದ ಬಳ್ಕೂರು ಕೃಷ್ಣಯಾಜಿ, ಆನಂದ ಶೆಟ್ಟಿ, ಕಿರಣ ಪೈ ಅವರನ್ನು ಸನ್ಮಾನಿಸಲಾಗುವುದು.

ಗೋಷ್ಠಿಯಲ್ಲಿ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕೋಶಾಧ್ಯಕ್ಷ ಕೆ.ಈ.ಕಾಂತೇಶ್, ಬಿಒಐ ಸಮಿತಿಯ ಜಿಲ್ಲಾಧ್ಯಕ್ಷ ಕೆ.ವೆಂಕಟೇಶ್ ರಾವ್, ಕಾರ್ಯಕ್ರಮ ಸಂಚಾಲಕ ಎಂ.ಎಸ್.ಸೂರ್ಯನಾರಾಯಣ, ಪ್ರಮುಖರಾದ ಇ. ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರೀ, ಮೋಹನ್ ಜಾಧವ್, ಶ್ರೀಕಾಂತ್, ಯಜ್ಞ ನಾರಾಯಣ್, ಸತ್ಯನಾರಾಯಣ್, ಸಂತೋಷ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕವೀರರಾಗದೆ ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ: ಪ್ರೊ.ಕೆ.ಶಿವಚಿತ್ತಪ್ಪ
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ