ಹೊಸಕೋಟೆ: ನಗರಸಭೆಯ ಅಧ್ಯಕ್ಷರು ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ. ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಕೇವಲ ಫೇಸ್ಬುಕ್ ವಾಟ್ಸಾಪ್‌ಗೆ ಅಧ್ಯಕ್ಷರು ಸೀಮಿತರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆಆರ್‌ಬಿ ಶಿವಾನಂದ್ ಅವರು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಎಂದು ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್ ತಿಳಿಸಿದರು.
ಟೀ ಕಾಫಿ ಕುಡಿಯಲು ಹೋಗಲ್ಲ: ಯಾವುದೇ ಶಾಲಾ ಕಾಲೇಜುಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಿ ದೂರವಾಣಿ ಕರೆ ಮಾಡಿದಾಗ ಅಲ್ಲಿಗೆ ಹೋದಾಗ ಸಮಸ್ಯೆ ಬಗೆಹರಿಸುತ್ತೇನೆ. ಸೌಜನ್ಯವಾಗಿ ಅವರು ಟೀ ಕಾಫಿ ಕೊಟ್ಟಾಗ ಕುಡಿಯುವುದು ವಾಡಿಕೆ. ಟೀ ಕಾಫಿ ಕುಡಿಯಲು ನಮ್ಮ ಬಳಿ ಹಣ ಇಲ್ಲ ಎಂದು ಯಾವತ್ತು ಹೋಗಲ್ಲ ಎಂದರು.
೫೦೦ ಬೀದಿ ದೀಪಗಳ ವ್ಯವಸ್ಥೆ ಶೀಘ್ರ:ಹೊಸಕೋಟೆ ನಗರದಲ್ಲಿ ಬೀದಿ ದೀಪಗಳನ್ನು ಅಳವಡಿಕೆ ಮಾಡಲು ಐದುನೂರು ಬೀದಿ ದೀಪಗಳಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಗರದಲ್ಲಿ ಆಯ್ದ ಕಡೆ ಬೀದಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಕೆಆರ್‌ಬಿ ಶಿವಾನಂದ್ ಬೀದಿ ದೀಪ ಹಾಕಿಸಲು ಯೋಗ್ಯತೆ ಇಲ್ಲ ಎಂದು ಮಾತನಾಡಿದ್ದಾರೆ. ಅವರ ಮಾತನ್ನು ನಾನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಅವರು ಮಾತನಾಡಿದ ರೀತಿಗೆ ನಾನು ಉದ್ವೇಗಕ್ಕೆ ಒಳಗಾಗಿ ಮಾತನಾಡಲ್ಲ. ನಗರದ ಪ್ರಥಮ ಪ್ರಜೆಯಾಗಿರುವ ನಾನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ಪಕ್ಷಭೇದ ಮಾಡದೆ ಪಕ್ಷಾತೀತವಾಗಿ ಎಲ್ಲರ ಸಮಸ್ಯೆಗೆ ಸ್ಪಂದಿಸಬೇಕು. ಆ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ವಿನಾಕಾರಣ ಯಾರು ಕೂಡ ನನ್ನ ಮೇಲೆ ಆರೋಪ ಮಾಡಬಾರದು ಎಂದು ಹೇಳಿದರು.ಫೋಟೋ: 12 ಹೆಚ್‌ಎಸ್‌ಕೆ 1
ಹೊಸಕೋಟೆ ನಗರಸಭೆ ಕಚೇರಿಯಲ್ಲಿ ನಗರಸಭಾಧ್ಯಕ್ಷೆ ಆಶಾರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾಹಿತಿ ನೀಡಿದರು.