- ಮಟ್ಟಿಕಲ್ಲು, ಆನೆಕೊಂಡ ನಿವಾಸಿಗಳ ಸಭೆ, ನಿಮ್ಮೊಂದಿಗೆ ನಾವಿದ್ದೇವೆಂಬ ಭರವಸೆ - ನೊಂದ ಕುಟುಂಬಗಳಿಗೆ ಪ್ರತಾಪ ಸಿಂಹ, ಬಸನಗೌಡ ಪಾಟೀಲ ಯತ್ನಾಳ, ಸಿದ್ದೇಶ್ವರ, ಹರೀಶ್ ಸಾಂತ್ವನ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ಕೆಟಿಜೆ ನಗರದಲ್ಲಿ ಹಿಂದು ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಲ್ಲದೇ, ಸತೀಶ ಪೂಜಾರಿ ವಂಶವೃಕ್ಷ ನೀಡುವಂತೆ ಕೆಟಿಜೆ ನಗರ ಪೊಲೀಸ್ ಠಾಣೆ ಸಬ್ ಇನ್‌ಪೆಕ್ಟರ್ ನೋಟಿಸ್ ನೀಡಿರುವ ಹಿನ್ನೆಲೆ ಸತೀಶ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದ್ದ ಯತ್ನಾಳ ಇತರರು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಬಸವನಗೌಡ ಪಾಟೀಲ್ ಯತ್ನಾಳ ಈ ಸಂದರ್ಭ ಸತೀಶ ಪೂಜಾರಿ ಪತ್ನಿ, ತಂದೆ, ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಸ್ಥಳದಿಂದಲೇ ಡಿಜಿ, ಐಜಿಪಿಗೆ ಸಂಪರ್ಕಿಸಿ, ಅಮಾಯಕರನ್ನು ಬಿಡುಗಡೆ ಮಾಡಿಸುವಂತೆ ಹೇಳಲು ಪ್ರಯತ್ನಿಸಿದರು. ಅನಂತರ ನೀವು ಯಾರೂ ಆತಂಕಪಡಬೇಡಿ. ನಿಮ್ಮೊಂದಿಗೆ ನಾವು ಇರುತ್ತೇವೆ. ಆದಷ್ಟು ಬೇಗನೆ ಸತೀಶ ಪೂಜಾರಿ ಬಿಡುಗಡೆಗೆ ನಾವೆಲ್ಲರೂ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.ಅನಂತರ ಮಧು, ವೆಂಕಾಭೋವಿ ಕಾಲನಿಯಲ್ಲಿ ಎಂಜಿನಿಯರ್ ವಿಶಾಲ್ ಮತ್ತು ಆತನ ಸಹೋದರ, ದರ್ಶನ್ ಕೃಷ್ಣಮೂರ್ತಿ ಪವಾರ್ ಸೇರಿದಂತೆ ಅನೇಕ ಬಂಧಿತ ಯುವಕರ ಮನೆಗಳಿಗೆ ಭೇಟಿ ನೀಡಿ, ಧೈರ್ಯ ಹೇಳಿದರು. ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶಕ್ಕೂ ಭೇಟಿ ನೀಡಿದ್ದ ವೇಳೆ ಮಟ್ಟಿಕಲ್ಲು ಶ್ರೀ ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಸ್ಥಳೀಯರ ನಿವಾಸಿಗಳು ಮುಖಂಡರು, ಮಹಿಳೆಯರು, ತಾಯಂದಿರ ಜೊತೆಗೆ ಸುಮಾರು ಹೊತ್ತು ಸಭೆ ನಡೆಸಿದರು.
ಸ್ಥಳೀಯ ಮಹಿಳೆಯರು, ನಿವಾಸಿಗಳ ಅಳಲು ಆಲಿಸಿದ ಬಸವನಗೌಡ ಪಾಟೀಲ ಯತ್ನಾಳ, ಜಿ.ಎಂ.ಸಿದ್ದೇಶ್ವರ, ಪ್ರತಾಪ ಸಿಂಹ, ಬಿ.ಪಿ.ಹರೀಶ, ನಾವು ನಿಮ್ಮೊಂದಿಗೆ ಇರುತ್ತೇವೆ. ಭಯಪಡಬೇಡಿ ಎಂದರು. ಪಕ್ಷದ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಯಶವಂತ ರಾವ್ ಜಾಧವ್, ಎಸ್.ಎಂ. ವೀರೇಶ ಹನಗವಾಡಿ, ಬಿ.ಎಸ್. ಜಗದೀಶ, ಎಸ್.ಟಿ.ವೀರೇಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್. ಜಗದೀಶ, ಮಟ್ಟಿಕಲ್ಲು ಪ್ರದೀಪ, ಬಿ.ಎಂ.ಷಣ್ಮುಖಯ್ಯ ಆವರಗೊಳ್ಳ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ವಕೀಲರಾದ ರಾಘವೇಂದ್ರ ಮೊಹರೆ, ದಿವಾಕರ, ಆರ್.ಎಲ್. ಶಿವಪ್ರಕಾಶ ಇತರರು ಇದ್ದರು.ಇದೇ ವೇಳೆ ಬಿಜೆಪಿ ಹಿರಿಯ ಮುಖಂಡ ಎಂ.ಪಿ. ಕೃಷ್ಣಮೂರ್ತಿ ಪವಾರ್ ಅವರ ಪುತ್ರ ದರ್ಶನ್ ಪವಾರ್‌ಗೆ ಪೊಲೀಸರು ಬಂಧಿಸಿ, ಕರೆದೊಯ್ದಿದ್ದ ಹಿನ್ನೆಲೆಯಲ್ಲಿ ಪವಾರ್ ನಿವಾಸಕ್ಕೂ ಮುಖಂಡರು ತೆರಳಿ, ಧೈರ್ಯ ಹೇಳಿದರು.
- - --29ಕೆಡಿವಿಜಿ14:
ದಾವಣಗೆರೆ ಕೆಟಿಜೆ ನಗರದಲ್ಲಿ ಹಿಂದು ಜಾಗರಣಾ ವೇದಿಕೆಯ ಸತೀಶ ಪೂಜಾರಿ ಬಂಧನದ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿ, ಪತ್ನಿ, ತಂದೆ, ಕುಟುಂಬ ವರ್ಗಕ್ಕೆ ಬಸವನಗೌಡ ಪಾಟೀಲ್ ಯತ್ನಾಳ, ಜಿ.ಎಂ.ಸಿದ್ದೇಶ್ವರ, ಪ್ರತಾಪ ಸಿಂಹ ಇತರರು ಧೈರ್ಯ ಹೇಳಿದರು.-29ಕೆಡಿವಿಜಿ15:
ದಾವಣಗೆರೆ ಮಟ್ಟಿಕಲ್ಲು ಶ್ರೀ ಮರಡಿ ಬಸವೇಶ್ವರ ದೇವಸ್ಥಾನ ಬಳಿ ಬಸವನಗೌಡ ಪಾಟೀಲ್ ಯತ್ನಾಳ, ಜಿ.ಎಂ. ಸಿದ್ದೇಶ್ವರ, ಪ್ರತಾಪ ಸಿಂಹ ಇತರರು ಮಟ್ಟಿಕಲ್ಲು, ಆನೆಕೊಂಡ ಬಡಾವಣೆಯ ಮಹಿಳೆಯರು, ನಿವಾಸಿಗಳ ಸಭೆಯಲ್ಲಿ ಮಾತನಾಡಿದರು.