ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ನಡೆದ ಲವ್ ಜೀಹಾದ್ ಪ್ರಕರಣದಲ್ಲಿ ನೊಂದ ಮಹಿಳೆಯ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ನಡೆದ ಲವ್ ಜೀಹಾದ್ ಪ್ರಕರಣದಲ್ಲಿ ನೊಂದ ಮಹಿಳೆಯ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ, ಮಹಿಳೆಯರ ಮೇಲಾಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರ ತವರು ಜಿಲ್ಲೆಯಲ್ಲಿ ಹಿಂದು ಮಹಿಳೆಯ ಮೇಲೆ ಲವ್ ಜೀಹಾದ್ ನಡೆದಿದ್ದು, ಜಾತಿ ದೌರ್ಜನ್ಯ ಹಾಗೂ ಮತಾಂದತೆಯರು ಮತಾಂತರ ನಡೆದರು ಇನ್ನೂ ಸರಿಯಾದ ರೀತಿಯಲ್ಲಿ ಪೊಲೀಸ್ ಕ್ರಮ ಆಗದಿರುವುದು ಪೊಲೀಸ್ ವಿಫಲತೆ ಹಾಗೂ ಸರ್ಕಾರದ ಕಾನೂನು ಸುವ್ಯಸವಸ್ಥೆ ಹಾಳಾಗಿದೆ. ಇಂತಹ ಕೃತ್ಯಗಳು ದಿನದಿನಕ್ಕೆ ಹೆಚ್ಚಾಗುತಿದ್ದು, ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹಿಸುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಸಂಜಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ನಾಯಕರಾದ ವಿರೂಪಾಕ್ಷ ಮಾಮನಿ, ಪಂಚನಗೌಡ ದ್ಯಾಮನಗೌಡರ, ಮಲ್ಲೇಶ ಸುಳೆಭಾವಿ, ಸುಭಾಷ್ ಗದಿಗೌಡ್ರ, ಶೇಖರ ಗೊಕಾವಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ನಯನ ಬಸ್ಮೆ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ದಾವಲಸಾಬ್ ಚಪ್ಟಿ, ಮಂಜು ಪಮ್ಮಾರ, ಶ್ರಿಕಾಂತ ಮಲಗೌಡರ, ಅಶೋಕ ಗೋಮಾಡಿ, ಬಾಬು ಭಜಂತ್ರಿ, ಗುರು ಮೆಳವೆಂಕಿ, ಉವಪ್ಪ ಭಜಂತ್ರಿ, ಯಲ್ಲಪ್ಪ ಕಾಳಪ್ಪನವರ ನೂರಾರು ಮುಖಂಡರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.