ನಗರದ ತಾಳತ್ತಮನೆಯ ದಿವಂಗತ ಕೆ.ಎಂ. ಜೇಮ್ಸ್ ಮತ್ತು ದಿವಂಗತ ಫಿಲೋಮಿನಾ ಜೇಮ್ಸ್ ಅವರ ಪುತ್ರ ಪ್ರವೀಣ್ ಡ್ಯಾನಿಯಲ್ ಅವರು ಭಾರತ ಸೇನೆಯಲ್ಲಿ 22 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ್ದಾರೆ.

ಮಡಿಕೇರಿ: ನಗರದ ತಾಳತ್ತಮನೆಯ ದಿವಂಗತ ಕೆ.ಎಂ. ಜೇಮ್ಸ್ ಮತ್ತು ದಿವಂಗತ ಫಿಲೋಮಿನಾ ಜೇಮ್ಸ್ ಅವರ ಪುತ್ರ ಪ್ರವೀಣ್ ಡ್ಯಾನಿಯಲ್ ಅವರು ಭಾರತ ಸೇನೆಯಲ್ಲಿ 22 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ್ದಾರೆ.

ಇವರು ಭೋಪಾಲ್, ಸಿಕ್ಕಿಂ, ಮವ್ವ್, ಸಿಕಂದರಾಬಾದ್ , ರಾಜಸ್ಥಾನ, ಅಂಡಮಾನ್, ಜಮ್ಮು ಕಾಶ್ಮೀರ ಹಾಗೂ ದೇಶದ ಇತರ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಗ್ರಾಮಸ್ಥರು, ಕುಟುಂಬಸ್ಥರು, ಬಂದು ಮಿತ್ರರು ಆದರದಿಂದ ಸ್ವಾಗತಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಮಾಜಿ ಸೈನಿಕರ ಸಂಘದ ಜಂಟಿ ಕಾರ್ಯದರ್ಶಿ ಗುರು ಬಸಯ್ಯ ಇವರು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಮದೆನಾಡು ಗ್ರಾಮ ಪಂಚಾಯಿತಿಯ ಸದಸ್ಯರಾದ ಅಗಸ್ಟೀನ್ ಜಯರಾಜ್, ಕುಟುಂಬಸ್ಥರು, ಬಂಧು ಮಿತ್ರರು, ಗ್ರಾಮ ನಿವಾಸಿಗಳು ಉಪಸ್ಥಿತರಿದ್ದರು.