ಜಮಖಂಡಿ ನಗರದ ಕನ್ನಡ ಸಂಘಕ್ಕೆ 60ರ ಸಂಭ್ರಮ ಹಿನ್ನೆಲೆ ರಾಷ್ಟ್ರಮಟ್ಟದ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದೆ. ಕರ್ನಾಟಕ, ತಮಿಳುನಾಡು, ಗುಜರಾತ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ ಸೇರಿವಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಕನ್ನಡ ಸಂಘಕ್ಕೆ 60ರ ಸಂಭ್ರಮ ಹಿನ್ನೆಲೆ ರಾಷ್ಟ್ರಮಟ್ಟದ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದೆ. ಕರ್ನಾಟಕ, ತಮಿಳುನಾಡು, ಗುಜರಾತ, ಮಹಾರಾಷ್ಟ್ರ, ಹರಿಯಾಣ, ರಾಜಸ್ಥಾನ ಸೇರಿವಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕ್ರೀಡಾಪಟುಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಸಂಘದ 60ನೇ ವರ್ಷದ ನಿಮಿತ್ತ ನಗರದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರಮಟ್ಟದ ಮಹಿಳಾ ಮತ್ತು ಪುರುಷರ ಕಬಡ್ಡಿ, ಕುಸ್ತಿ, ಸೈಕ್ಲಿಂಗ್ ಹಾಗೂ ವಾಲಿಬಾಲ್ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಬುಧವಾರ ಬೆಳಗ್ಗೆ ಪ್ರಾರಂಭವಾದ ಕಬಡ್ಡಿ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳ ಗಮನ ಸೆಳೆದವು.ಮಹಿಳಾ ಪಂದ್ಯಾವಳಿ ಫಲಿತಾಂಶ:

ತಮಿಳುನಾಡು ಎಂ.ಕೆ. ಸ್ಪೋರ್ಟ್ಸ್‌ ತಂಡ 28-25 ಅಂತರದಿಂದ ಬಾಗಲಕೋಟೆ ತಂಡವನ್ನು ಪರಾಭವಗೊಳಿಸಿದರೆ, ಚಂಡಿಗಡ ತಂಡ 38-26 ಅಂತರದಿಂದ ಮುಂಬೈನ ಆರ್ ಬಿಎಸ್ ಸಿ ತಂಡವನ್ನು, ಎಸ್ ಎಸ್ ಬಿ ರಾಜಸ್ಥಾನ ತಂಡ 30-12ರಿಂದ ತಮಿಳುನಾಡಿನ ನೇಲೈ ಸ್ಪೋರ್ಟ್ಸ್‌ ತಂಡವನ್ನು ಸೋಲಿಸಿದವು. ಭಾರತ ತಮಿಳುನಾಡು (27-21) ಮುಂಬೈನ ಆರ್ ಬಿಎಸ್ ಸಿ, ಗುಜರಾತಿನ ಸ್ವಾಮಿನಾರಾಯಣ (41-27) ತಮಿಳುನಾಡಿನ ಎಂ.ಕೆ. ಸ್ಪೋರ್ಟ್ಸ್‌, ಮುಂಬೈನ ಮಿಡ್‌ಲೈನ್‌ (32-13) ಬಾಗಲಕೋಟೆ, ಎಂಡಿಎಸ್ ತಂಡ (33-13) ತಮಿಳುನಾಡಿನ ಸೂರ್ಯ, ಹರಿಯಾಣದ ಅಲ್ಟಿಮೇಟ್ (29-18) ತಮಿಳುನಾಡಿನ ಎಂಕೆವಿಎಸ್, ಕರ್ನಾಟಕ (37-15) ಚಂಡಿಗಡ, ಹರಿಯಾಣದ ಎಸ್ಎಸ್ಎ (37-13) ಕರ್ನಾಟಕ, ರಾಜಸ್ಥಾನದ ಎಸ್ಎಸ್ಬಿ ತಂಡ (30-24) ಕರ್ನಾಟಕ ತಂಡವನ್ನು, ಮುಂಬೈ ಪೊಲೀಸ್ ತಂಡ (35-11) ತಮಿಳುನಾಡಿನ ನೇಳಾ ಸ್ಪೋರ್ಟ್ಸ್‌, ಸೌತ್ರೈ ಲ್ವೆ (35-15) ದುರ್ಗಾ ಶಕ್ತಿ, ಮುಂಬೈನ ಮಿಡಲೈನ್‌ (39-16) ಗುಜರಾತಿನ ಸ್ವಾಮಿ ನಾರಾಯಣ, ಕರ್ನಾಟಕ (30-17) ಭಾರತ ತಮಿಳುನಾಡು, ತಮಿಳುನಾಡಿನ ಸೂರ್ಯ (32-22) ಕರ್ನಾಟಕ, ಸವಣೂರಿನ ದುರ್ಗಾಶಕ್ತಿ (27-24) ತಮಿಳುನಾಡಿನ ಎಮ್ ಕೆವಿಎಸ್ ತಂಡವನ್ನು ಸೋಲಿಸಿದವು.

ಕನ್ನಡ ಸಂಘದ 60ನೇ ವರ್ಷಾಚರಣೆ ನಿಮಿತ್ತ ಏರ್ಪಡಿಸಿರುವ ರಾಷ್ಟ್ರಮಟ್ಟದ ಕ್ರೀಡಾ ಕೂಟಗಳಲ್ಲಿ ವಿವಿಧ ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ, ಕ್ರೀಡಾಭಿಮಾನಿಗಳು ಹರ್ಷವ್ಯಕ್ತಪಡಿಸುತ್ತಿದ್ದಾರೆ.

- ರಾಹುಲ್‌ ಕಲೂತಿ ಕನ್ನಡ ಸಂಘದ ಅಧ್ಯಕ್ಷ