ಸಿದ್ದಾಪುರ: ತಾಲೂಕಿನ ಕೋಲಸಿರ್ಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಜರುಗಿತು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದಸ್ಯತ್ವ ಅಭಿಯಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರನ್ನು ಕೋಲಸಿರ್ಸಿ ಬಿಜೆಪಿ ಘಟಕದಿಂದ ಗೌರವಿಸಿ ಅಭಿನಂದಿಸಲಾಯಿತು.ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್, ಕೆ.ಆರ್. ವಿನಾಯಕ, ಮಾರುತಿ ನಾಯ್ಕ ಹೊಸೂರು, ಎಸ್.ಕೆ. ಮೇಸ್ತಾ, ತೋಟಪ್ಪ ನಾಯ್ಕ, ವಾಸು ನಾಯ್ಕ ಕೋಲಸಿರ್ಸಿ, ಜಿ.ಬಿ. ನಾಯ್ಕ, ಅಣ್ಣಪ್ಪ ನಾಯ್ಕ ದೊಡ್ಮನೆ, ಚಂದ್ರಹಾಸ ನಾಯ್ಕ, ಆನಂದ ನಾಯ್ಕ, ಗಣಪತಿ ಗೊಂಡ, ಮಹಾಬಲೇಶ್ವರ ನಾಯ್ಕ, ಗೋಪಾಲ ಕೆ.ಎನ್., ಮಧುಕರ ನಾಯ್ಕ, ರಾಘವೇಂದ್ರ ಎನ್. ನಾಯ್ಕ ಇತರರಿದ್ದರು. ವಜ್ರಳ್ಳಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
ಗುಳ್ಳಾಪುರದಲ್ಲಿ ನಡೆದ ಅಭಿಯಾನ ಸಭೆಯಲ್ಲಿ ಶಾಂತಾರಾಮ ಸಿದ್ದಿ, ಚಂದ್ರಕಲಾ ಭಟ್ಟ, ಜಿ.ಎನ್. ಗಾಂವ್ಕರ, ಪ್ರಸಾದ ಹೆಗಡೆ, ಶಕ್ತಿ ಕೇಂದ್ರದ ಪ್ರಮುಖರಾದ ಮಹಾಬಲೇಶ್ವರ ಭಟ್ಟ, ನಾರಾಯಣ ಭಟ್ಟ, ವಿಶ್ವೇಶ್ವರ ಭಟ್ಟ ಮತ್ತು ಧನಂಜಯ ಪಿಳ್ಳೆ, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೇಹಳ್ಳಿಯಲ್ಲಿ ಮಂಡಳ ಉಪಾಧ್ಯಕ್ಷ ಗಣಪತಿ ಮುದ್ದೇಪಾಲ, ಸದಸ್ಯತ್ವ ಅಭಿಯಾನದ ಮಹಾಶಕ್ತಿ ಕೇಂದ್ರ ಸಹಯೋಗಿ ಪಕ್ಷದ ಹಿರಿಯ ನಾಯಕ ಗಣಪತಿ ಬೋಳಗುಡ್ಡೆ, ಶಕ್ತಿಕೇಂದ್ರದ ಪ್ರಮುಖ ಶ್ರೀಪತಿ ಮುದ್ದೇಪಾಲ, ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.