ಕನ್ನಡಪ್ರಭ ವಾರ್ತೆ ಕಾರ್ಕಳ
ಕೈಯಲ್ಲಿ ತಲವಾರು, ಗನ್, ಕಲ್ಲು ಹಿಡಿದುಕೊಂಡ ಜಿಹಾದಿಗಳ ಬಗ್ಗೆ ಮಾತನಾಡುವ ಧೈರ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ಆದರೆ ದೇಶಭಕ್ತ ಸಂಘಟನೆಯಾದ ಆರ್‌ಎಸ್‌ಎಸ್ ಕುರಿತು ಲಘು ಮಾತು ಆಡಲು ಮಾತ್ರ ಧೈರ್ಯ ತೋರುತ್ತಿದ್ದಾರೆ ಎಂದು ನವೀನ್ ನಾಯಕ್ ಟೀಕಿಸಿದರು.
ಭಾರತವು ಭಕ್ತಿ ಮತ್ತು ಶಕ್ತಿಯ ಆರಾಧನೆಯ ದೇಶ. ಆರ್‌ಎಸ್‌ಎಸ್ ಕಳೆದ ಶತಮಾನದಿಂದ ಪ್ರತಿಯೊಬ್ಬರಲ್ಲೂ ದೇಶಭಕ್ತಿ, ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಸ್ವಯಂಸೇವಕರ ಕೈಯಲ್ಲಿರುವ ಲಾಠಿ ದೌರ್ಜನ್ಯಕ್ಕಾಗಿ ಅಲ್ಲ, ಆತ್ಮರಕ್ಷಣೆ ಹಾಗೂ ಶಿಸ್ತಿನ ಸಂಕೇತವಾಗಿದೆ. ನೂರು ವರ್ಷಗಳ ಇತಿಹಾಸದಲ್ಲೂ ಆರ್‌ಎಸ್‌ಎಸ್ ಹಿಂಸೆಗೆ ಪ್ರಚೋದನೆ ನೀಡಿದ ಉದಾಹರಣೆ ಒಂದೂ ಇಲ್ಲ ಎಂದರು.ಆರ್‌ಎಸ್‌ಎಸ್ ವಿರುದ್ಧ ಅಸತ್ಯ ಪ್ರಚಾರ ಮಾಡುವವರು, ಅದನ್ನು ನಿರ್ಬಂಧಿಸಲು ಯತ್ನಿಸುವವರು ತಮ್ಮ ನಿಲುವು ಕುರಿತು ಪುನರ್ವಿಚಾರ ಮಾಡಲಿ. ರಾಷ್ಟ್ರ ಹಿತಕ್ಕಾಗಿ ಶ್ರಮಿಸುವ ಸಂಘಟನೆಗಳ ವಿರುದ್ಧ ಹೀನ ಪ್ರಯತ್ನಗಳು ಜನರಿಂದ ತಿರಸ್ಕೃತವಾಗುತ್ತವೆ ಎಂದರು.