ಬಿಜೆಪಿ ಪಕ್ಷ ಪ್ರಚಾರಷ್ಟೇ, ಕೆಲಸಕ್ಕಲ್ಲ: ಡಿ.ಸುಧಾಕರ್

KannadaprabhaNewsNetwork |  
Published : Feb 11, 2024, 01:48 AM IST
ಚಿತ್ರ 1,2 | Kannada Prabha

ಸಾರಾಂಶ

ಹಿರಿಯೂರು ನಗರದ ನೆಹರೂ ಮೈದಾನದಲ್ಲಿ ಐಮಂಗಲ ಮತ್ತು ಕಸಬಾ ಹೋಬಳಿಗಳ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಕುರಿತು ಸಮಾವೇಶ ನಡೆಯಿತು. ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಬಿಜೆಪಿ ಬರೀ ಪ್ರಚಾರ ಪಡೆಯುವ ಮತ್ತು ಕಾಂಗ್ರೆಸ್ ಕೆಲಸ ಮಾಡುವ ಪಕ್ಷವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ಐಮಂಗಲ ಮತ್ತು ಕಸಬಾ ಹೋಬಳಿಗಳ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡಿ, ನಾವು ನುಡಿದಂತೆ ನಡೆದಿದ್ದು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ವಿರೋಧ ಪಕ್ಷಗಳು ಇವೆಲ್ಲಾ ಜಾರಿ ಮಾಡಲು ಅಸಾಧ್ಯ ಎಂಬ ಅಪಪ್ರಚಾರ ಮಾಡಿದರು. ಆದರೆ ಜನ ಅವರ ಸುಳ್ಳುಗಳನ್ನು ನಂಬದೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಶೀರ್ವಾದ ಮಾಡಿದರು. ಬಿಜೆಪಿಯವರು 15 ಲಕ್ಷ ಹಣವನ್ನು ನಿಮ್ಮ ಖಾತೆಗಳಿಗೆ ಹಾಕುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂಬಂತಹ ನೂರಾರು ಭರವಸೆ ಕೊಟ್ಟರು. ಆದರೆ ಒಂದನ್ನೂ ಈಡೇರಿಸಲಿಲ್ಲ. ಬಿಜೆಪಿ ಬರೀ ಪ್ರಚಾರದ ಪಕ್ಷವಾಗಿದ್ದು ಕಾಂಗ್ರೆಸ್ ಕೆಲಸ ಮಾಡುವ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಗಳಲ್ಲಿ ಜನರನ್ನು ಮರುಳು ಮಾಡಿ ಅಧಿಕಾರ ಪಡೆಯುವುದೇ ಬಿಜೆಪಿಯವರ ಕೆಲಸವಾಗಿದೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ ಐದು ವರ್ಷ ಯಾವ ಗ್ಯಾರಂಟಿಯನ್ನು ನಿಲ್ಲಿಸುವುದಿಲ್ಲ. ಬಿಜೆಪಿ ಜೆಡಿಎಸ್ ಇದೀಗ ನಮ್ಮನ್ನು ಸೋಲಿಸಲು ಒಂದಾಗಿವೆ. ಜನ ದಡ್ಡರಿಲ್ಲ. ಬಿಜೆಪಿಗೆ ಮತ ಹಾಕಿದರೆ ಕೆಟ್ಟು ಹೋಗುತ್ತೀರ. ಎಲ್ಲಾ ಕಡೆಯೂ ಬರಗಾಲವಿದ್ದು ಕೆಲವು ಕಡೆ ಈಗಾಗಲೇ ನೀರಿನ ಅಭಾವ ಶುರುವಾಗಿದೆ. ಇನ್ನೊಂದು ವರ್ಷದಲ್ಲಿ ತಾಲೂಕಿನ ಎಲ್ಲಾ ಹಳ್ಳಿ ಗಳಿಗೂ ವಿವಿ ಸಾಗರದಿಂದ ಕುಡಿಯುವ ನೀರು ಕೊಡುತ್ತೇವೆ. ಕಾಂಗ್ರೆಸ್ ಪಕ್ಷ ಜನರ ಜೊತೆಯಿದೆ. ಜನರು ಸಹ ಪಕ್ಷಕ್ಕೆ ಹೀಗೆಯೇ ಬೆನ್ನೆಲುಬಾಗಿ ನಿಲ್ಲಿ ಎಂದು ಮನವಿ ಮಾಡಿದರು.

ತಹಶೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯಡಿ 60 ಸಾವಿರಕ್ಕೂ ಹೆಚ್ಚಿನ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. 64778 ಕುಟುಂಬಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ 517 ಫಲಾನುಭವಿಗಳು ಯುವನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ರೀತಿಯ ಸಹಾಯಧನಗಳು ಜನರ ಜೀವನ ಮಟ್ಟವನ್ನು ಸುಧಾರಿಸಲಿವೆ ಎಂದರು.

ಬೆಸ್ಕಾo ನ ಎಇಇ ರಾಮಚಂದ್ರ ಸುತಾರ್ ಮಾತನಾಡಿ , ಸರ್ಕಾರದ ವತಿಯಿಂದ ಘೋಷಣೆಯಾದ ಗೃಹಜ್ಯೋತಿ ಯೋಜನೆಯಲ್ಲಿ 64777 ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಶೇ 99.9 ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರತಿವರ್ಷ 26 ಕೋಟಿಯಷ್ಟು ಹಣ ಗೃಹಜ್ಯೋತಿಗೆ ವ್ಯಯವಾಗಲಿದೆ. ಜಿಲ್ಲೆಗೆ 157 ಕೋಟಿ ಹಣ ಈ ಯೋಜನೆಗೆ ಬೇಕಾಗುತ್ತದೆ. ನಿಸ್ಸoಶಯವಾಗಿ ಈ ಯೋಜನೆ ಎಲ್ಲರಿಗೂ ಮುಟ್ಟಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುತ್ತಿದ್ದು ಉಳಿದ ಅಕ್ಕಿಯ ಹಣವನ್ನು ಖಾತೆಗೆ ಹಾಕುತ್ತಿರುವುದರಿಂದ ಬೇರೆ ಬೇರೆ ದಿನಸಿ ತೆಗೆದುಕೊಳ್ಳಲು ಅನುಕೂಲವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಮಕ್ಕಳ ಫೀಸ್, ಬಟ್ಟೆಗೆ ಅನುಕೂಲವಾಗುತ್ತಿದೆ. ಬಸ್ ಫ್ರಿ ಬಿಟ್ಟು ಆಸ್ಪತ್ರೆಗಳಿಗೆ, ಶಾಲೆಗಳಿಗೆ ಹೋಗಲು ಉಪಯೋಗವಾಗಿದೆ.ನಿಜವಾಗಲೂ ನಾವೆಲ್ಲಾ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಋಣಿಯಾಗಿದ್ದೇವೆ ಎಂದು ಫಲಾನುಭವಿ ಸುಜಾತಾ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಇಓ ಸತೀಶ್ ಕುಮಾರ್, ಪೌರಾಯುಕ್ತ ಹೆಚ್ ಮಹoತೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ,ಸಿಡಿಪಿಓ ರಾಘವೇಂದ್ರ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈರಲಿಂಗೇಗೌಡ, ಖಾದಿ ರಮೇಶ್, ಮಾಜಿ ಸದಸ್ಯರಾದ ನಾಗೇಂದ್ರ ನಾಯ್ಕ, ಗೀತಾ ನಾಗಕುಮಾರ್, ಕೆಡಿಪಿ ಸದಸ್ಯ ತಿಮ್ಮಣ್ಣ,ಡಾ . ಸುಜಾತಾ, ಚಂದ್ರಶೇಖರ್, ಕೃಷ್ಣಮೂರ್ತಿ, ಜಿ.ಎಲ್. ಮೂರ್ತಿ, ಗುರುಪ್ರಸಾದ್, ಶಿವಕುಮಾರ್, ನಗರಸಭೆ ಸದಸ್ಯರಾದ ಜಗದೀಶ್, ಅಜಯ್ ಕುಮಾರ್, ಶಿವರಂಜಿನಿ, ಸಣ್ಣಪ್ಪ, ಬಾಲಕೃಷ್ಣ, ಮಮತಾ, ಮೊದಲ ಮರಿಯಾ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ