ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ನಗರದ ಹೊರವಲಯದ ಟೋಲ್ ನಾಕಾದಿಂದ ಪ್ರತಿಭಟನೆ ಆರಂಭವಾಗಿ, ಇಬ್ರಾಹಿಂಪುರ, ಗಣೇಶನಗರ, ಜಲನಗರ, ಬಬಲೇಶ್ವರ ನಾಕಾ, ಶಿವಾಜಿ ಸರ್ಕಲ್, ಗಾಂಧೀಜಿ ವೃತ್ತ ಮೂಲಕ ಪ್ರತಿಭಟನಾ ರ್‍ಯಾಲಿ ಸಾಗಲಿದೆ. ಕೊನೆಗೆ ಅಂಬೇಡ್ಕರ್ ಸರ್ಕಲ್‌ನಲ್ಲಿ ಬಿಜೆಪಿ ನಾಯಕರು ಮಾತನಾಡಲಿದ್ದಾರೆ. ಈ ಹೋರಾಟದಲ್ಲಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಶಾಸಕ ಜನಾರ್ಧದನ ರೆಡ್ಡಿ, ಸಂಸದ ಈರಣ್ಣ ಕಡಾಡಿ, ಜಿಲ್ಲೆಯ ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಅನೇಕ ಮುಖಂಡರು ಹಾಗೂ ಸಾವಿರಾರು ರೈತರು ಭಾಗವಹಿಸಲಿದ್ದಾರೆ. ಇನ್ನುಳಿದಂತೆ ಎಲ್ಲ ರೈತರು, ರೈತ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.
ಕಾಂಗ್ರೆಸ್‌ನ ದುರಾಡಳಿತ, ರೈತ, ಜನವಿರೋಧಿ ನೀತಿ ಖಂಡಿಸಿ ಜನರೊಂದಿಗೆ ಸೇರಿ ಬಿಜೆಪಿ ಹೋರಾಟ ಮಾಡುತ್ತಿದ್ದೇವೆ. ಈಗಾಗಲೇ ನ.27, 28ರಂದು ತಾಲೂಕು ಮಟ್ಟಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಈಗ ಡಿಸೆಂಬರ್ ಮೊದಲವಾರದಲ್ಲಿ ಜಿಲ್ಲಾ ಮಟ್ಟದಲ್ಲಿ ನಂತರ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಕಾಂಗ್ರೆಸ್‌ನವರು ಸುಳ್ಳು ಭರವಸೆ ನೀಡಿ, ಬಡವರ ಹಲವಾರು ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ. ನೀರಾವರಿ ಯೋಜನೆಗೆ ಪ್ರತಿವರ್ಷ 10ಲಕ್ಷ ಕೋಟಿ ಹಣ ಮೀಸಲು ಇಡುತ್ತೇವೆ ಎಂದು ಹೇಳಿ ಇಟ್ಟಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಳುಗೌಡ ಪಾಟೀಲ, ಬಾಲರಾಜ ದಡ್ಡಿ, ಮಲ್ಲು ಕಲಾದಗಿ, ಭರತ ಕುಲಕರ್ಣಿ, ವಿಜಯ ಜೋಶಿ ಉಪಸ್ಥಿತರಿದ್ದರು.