ಗದಗ: ಕಾಶ್ಮೀರ ಹತ್ಯಾಕಾಂಡದ ನಂತರ ಪಾಕಿಸ್ತಾನದ ಪ್ರಜೆಗಳನ್ನು ದೇಶದಿಂದ ಹೊರಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕೇಂದ್ರ ಸರ್ಕಾರದ ಸೂಚನೆಗಳನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳು ಸರಿಯಾಗಿ ಪಾಲಿಸದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಭಾರತದಲ್ಲಿ ಅಶಾಂತಿ ಹಾಗೂ ಅಸ್ಥಿರತೆ ಸೃಷ್ಟಿಗೆ ಪಾಕಿಸ್ತಾನ ಯಾವಾಗಲೂ ಪ್ರಯತ್ನಿಸುತ್ತಲೇ ಇರುವುದು ಜಗತ್ತಿಗೆ ಗೊತ್ತಿರುವ ವಿಚಾರ ಆದರೂ ನೆರೆ ರಾಷ್ಟ್ರದ ಜೊತೆಗೆ ಒಳ್ಳೆಯ ಬಾಂಧವ್ಯ ಇರಲಿ ಅನ್ನುವ ಕಾರಣಕ್ಕಾಗಿ ಬಿಜೆಪಿ ನೇತೃತ್ವದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರಗಳು ಸಹಯೋಗ ನೀಡುತ್ತಲೇ ಬಂದಿದ್ದವು.
ಆದರೂ ತನ್ನ ಕುಟೀಲ ನೀತಿಯನ್ನು ಬಿಡದಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಕಾಲ ಈಗ ಕೂಡಿಬಂದಿದ್ದು, ದೇಶದ ಜನತೆ ಜಾತಿ, ಮತ, ಪಂಥ, ಪಕ್ಷ ಧರ್ಮ ಎನ್ನದೇ ಎಲ್ಲರೂ ಒಕ್ಕಟ್ಟಿನಿಂದ ನಿಲ್ಲಬೇಕಾಗಿದೆ. ಈಗಾಗಲೇ ಪಾಕಿಸ್ತಾನದ ಜೊತಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ ಅಕ್ರಮ ವಲಸಿಗರನ್ನು ಕೂಡಲೇ ದೇಶ ಬಿಟ್ಟು ಹೋಗುವಂತೆ ಕಠಿಣ ಕ್ರಮ ಕೈಗೊಂಡಿದ್ದು ಕೇಂದ್ರ ಗೃಹ ಸಚಿವಾಲಯವು ಆದೇಶ ಹೊರಡಿಸಿದ್ದರು ಕೆಲವು ರಾಜ್ಯ ಸರ್ಕಾರಗಳು ಇದನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಲ್ಲಾಪೂರ, ಸುರೇಶ ಮರಳಪ್ಪನವರ, ಎಂ.ಎಸ್. ಕರೀಗೌಡ್ರ, ಶ್ರೀಪತಿ ಉಡುಪಿ, ಬಿ.ಎಸ್. ಚಿಂಚಲಿ, ಅನೀಲ ಅಬ್ಬಿಗೇರಿ, ಭದ್ರೇಶ ಕುಸ್ಲಾಪೂರ, ಸಿದ್ದು ಪಲ್ಲೇದ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ಕವಿತಾ ಬಂಗಾರಿ, ಅಪ್ಪಣ್ಣ ಟೆಂಗಿನಕಾಯಿ, ಅಶೋಕ ಸಂಕಣ್ಣವರ, ಸುಧೀರ ಕಾಟಿಗರ, ಶಶಿಧರ ದಿಂಡೂರ, ಭೀಮಸಿಂಗ್ ರಾಠೋಡ, ವಾಯ್.ಪಿ. ಅಡ್ನೂರ, ಶಂಕರ ಕರಿಬಿಷ್ಠಿ, ಮಂಜುನಾಥ ತಳವಾರ, ಮೇಘರಾಜ ನಾಯಕ, ಅಪ್ಪು ಕೊಟಗಿ, ಬಸವರಾಜ ಹಡಪದ, ಶಂಕರ ಮಲ್ಲಸಮುದ್ರ, ಪಂಚಾಕ್ಷರಿ ಅಂಗಡಿ, ಡಿ.ಬಿ. ಕರೀಗೌಡ್ರ, ಮುತ್ತಣ್ಣ ಮುಶಿಗೇರಿ, ನಾಗರಾಜ ತಳವಾರ, ಶಂಕರ ಕಾಕಿ, ಮಾಂತೇಶ ಬಾತಾಖಾನಿ, ಶರಣು ಬರಶೆಟ್ಟಿ, ಹುಲ್ಲಪ್ಪ ಕೆಂಗಾರ, ಅರವಿಂದ ಅಣ್ಣಿಗೇರಿ, ನವೀನ ಕುರ್ತಕೋಟಿ, ಬಸವರಾಜ ನರೆಗಲ್, ವಸಂತ ಹಬೀಬ, ಕಾರ್ತಿಕ ಶಿಗ್ಲಿಮಠ, ದೇವೇದ್ರಪ್ಪ ಹೂಗಾರ, ಸಂಜೀವ ಖಟವಟೆ, ಚಂದ್ರಕಾಂತ ಜೈನರ್, ಮೋಹನ ಕೋರಿ, ವಿನೋದ ಹಂಸನೂರ ಹಾಗೂ ಇನ್ನೂ ಹಲವಾರು ಪ್ರಮುಖರುಗಳು ಉಪಸ್ಥಿತರಿದ್ದರು.