ಮುಂಡಗೋಡ: ಸಂವಿಧಾನ ತಿದ್ದುಪಡಿ ಮಾಡಿ ಮುಸ್ಲಿಮರಿಗೆ ಗುತ್ತಿಗೆ ಕೆಲಸದಲ್ಲಿ ೪% ಮೀಸಲಾತಿ ನೀಡುವುದಾಗಿ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸುವುದರ ಮೂಲಕ ಬಿಜೆಪಿ ಮಂಡಲದಿಂದ ಮಂಗಳವಾರ ಪಟ್ಟಣದ ಛತ್ರಪತಿ ಶಿವಾಜಿ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹಲಾಲ್ ಬಜೆಟ್ ಮಂಡಿಸಿ ಮುಸ್ಲಿಂ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಘೋಷಣೆ ಕೂಗಿದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಸಂವಿಧಾನದ ಆಧಾರದಲ್ಲಿ ನಮ್ಮ ದೇಶದ ಆಡಳಿತ ನಡೆಯುತ್ತಿದೆ.ಸಂವಿಧಾನಕ್ಕೆ ಚುತಿ ಬರದಂತೆ ನಡೆದುಕೊಳ್ಳಬೇಕು.ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ ಸರ್ಕಾರದಲ್ಲಿ ತಮಗೆ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದು, ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಈ ವರ್ಷದ ಮುಂಗಡ ಪತ್ರ ಒಂದು ಕೋಮಿನವರನ್ನು ಓಲೈಕೆ ಮಾಡುವ ಮುಂಗಡ ಪತ್ರವಾಗಿದೆ. ಈಗಲೂ ಇತರೇ ಸಮುದಾಯದವರು ಸುಮ್ಮನೆ ಕುಳಿತರೆ ಕಾಂಗ್ರೆಸ್ ನವರು ಒಂದಿಲ್ಲ ಒಂದು ದಿನ ಹಿಂದುಗಳ ರಾಷ್ಟ್ರವಾಗಿ ಉಳಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಡಗೋಡ ಮಂಡಲದ ಅಧ್ಯಕ್ಷ ಮಂಜುನಾಥ ಪಾಟೀಲ್ ಮಾತನಾಡಿ, ಸಂವಿಧಾನ ಬದಲಿಸಿಯಾದರೂ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಡಿ.ಕೆ.ಶಿವಕುಮಾರ ಉದ್ದಟತನದ ಹೇಳಿಕೆ ನೀಡಿರುವುದು ಖಂಡನಿಯ. ಕಾಂಗ್ರೆಸ್ ಯಾವತ್ತೂ ಡಾ.ಬಿ.ಆರ್ ಅಂಬೇಡ್ಕರ ಹಾಗೂ ಸಂವಿಧಾನದ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ರಾಜ್ಯ ಎಸ್.ಟಿ.ಮೋರ್ಚಾದ ಕಾರ್ಯದರ್ಶಿ ಸಂತೋಷ ತಳವಾರ, ಬಸವರಾಜ ಠಣಕೆದಾರ, ಪಿ.ಜಿ. ತಂಗಚ್ಚನ್, ಗುರುರಾಜ ಕಾಮತ, ನಾಗರಾಜ ಬೆಣ್ಣಿ, ಮಂಜುನಾಥ, ಭರತರಾಜ ಹದಳಗಿ, ಮಂಜುನಾಥ ನಡಗೇರ, ಬಾಬು ತಳವಾರ, ಸತೀಶ ಶೇಟ್, ಸುರೇಶ ಕೆರೆಹೊಲ್ದವರ, ನಿಂಗಜ್ಜ ಕೋಣನಕೇರಿ, ಮಂಜುನಾಥ ರೇವಣಕರ, ಕೋಟೇಶ ಗಣಪ್ಪನವರ, ಮಂಜುನಾಥ ರೇವಣಕರ, ವಿನಾಯಕ ಶೇಟ್, ಪ್ರಕಾಶ ಬಡಿಗೇರ, ಮಂಜುನಾಥ ಎಚ್.ಎಫ್, ವಿಶ್ವನಾಥ ನಾಯರ, ಶಂಕರ ಲಮಾಣಿ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಬಂಧುಗಳು, ಮುಖಂಡರು ಉಪಸ್ಥಿತರಿದ್ದರು.