ಬೆಳೆ ವಿಮೆ ವಿತರಣೆಯಲ್ಲಿ ಅನ್ಯಾಯ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : May 07, 2026, 02:15 AM IST
ಪೋಟೊ ಶಿರ್ಷಕೆ 06 ಎಚ್ ಕೆ ಅರ್ 01 | Kannada Prabha

ಸಾರಾಂಶ

2025-2026ರ ಬೆಳೆವಿಮೆ ಎರಡು ತಾಲೂಕಿನ 23 ಪಂಚಾಯಿತಿಗಳಿಗೆ ಇಂದಿನವರೆಗೂ ಜಮೆ ಆಗಿರುವುದಿಲ್ಲ. ಕೃಷಿ ಇಲಾಖೆ ಮತ್ತು ಕಂದಾಯ ಹಾಗೂ ಸಾಂಖಿಕ ಇಲಾಖೆಗಳ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.

ಹಿರೇಕೆರೂರು: 2025-2026ರ ಬೆಳೆವಿಮೆ ಎರಡು ತಾಲೂಕಿನ 23 ಪಂಚಾಯಿತಿಗಳಿಗೆ ಇಂದಿನವರೆಗೂ ಜಮೆ ಆಗಿರುವುದಿಲ್ಲ. ಕೃಷಿ ಇಲಾಖೆ ಮತ್ತು ಕಂದಾಯ ಹಾಗೂ ಸಾಂಖಿಕ ಇಲಾಖೆಗಳ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು.ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, 2025-26ನೇ ಸಾಲಿನಲ್ಲಿ ಹಿರೇಕೆರೂರು, ರಟ್ಟೀಹಳ್ಳಿ ರೈತರು ಅಕಾಲಿಕ ಮಳೆ ಹಾಗೂ ಪ್ರಕೃತಿ ವಿಕೋಪಗಳಿಂದ ಬೆಳೆಗಳ ರಕ್ಷಣೆಗಾಗಿ ಬೆಳೆ ವಿಮೆ ಮಾಡಿಸಿ ಹಣ ತುಂಬಿದ್ದಾರೆ. ಆದರೆ ತಾಲೂಕಿನ ಕೆಲವೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಬೆಳೆವಿಮೆ ಜಮಾ ಆಗಿದ್ದು, ಉಳಿದಂತೆ 23 ಗ್ರಾಮ ಪಂಚಾಯಿತಿಗಳ ಗ್ರಾಮಗಳ ರೈತರಿಗೆ ಜಮಾ ಆಗಿರುವುದಿಲ್ಲ. ಈಗ ಜಮಾ ಆದ ರೈತರು ಹಾಗೂ ಜಮಾ ಆಗದೇ ಇರುವ ರೈತರ ಜಮೀನುಗಳು ಅಕ್ಕ-ಪಕ್ಕದಲ್ಲಿ ಇದ್ದರೂ ಅಂಕಿ-ಅಂಶಗಳ ಅಧಿಕಾರಿಗಳ ಬೇಜವಾಬ್ದಾರಿ ಸಮೀಕ್ಷೆ ಮಾಡಿದ್ದು, ಹಣ ಜಮಾ ಆಗಿರುವುದಿಲ್ಲ. ಕಾರಣ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರಿಗೆ ಅನ್ಯಾಯವಾಗಿದೆ. ಬೆಳೆ ವಿಮೆ ಬಾರದೆ ಇರುವುದರಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಹಾಗೂ ವಿಮೆ ಕಂಪನಿಯವರು ಅಧಿಕಾರಿಗಳು ರೈತರ ನೆರವಿಗೆ ಧಾವಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ತಹಸೀಲ್ದಾರ್‌ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ನಮ್ಮ ತಾಲೂಕಿನ ರೈತರ ವಿಮೆ ಹಣ ರೈತರ ಖಾತೆಗೆ ಬಿಡುಗಡೆಗೊಳಿಸಬೇಕು ಇಲ್ಲದೇ ಹೋದರೆ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳ ಕಚೇರಿಗೆ ಶೀಘ್ರದಲ್ಲೇ ಮುತ್ತಿಗೆ ಹಾಕಲಾಗುವುದು. ಸಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲ, ದಿನಕ್ಕೊಂದು ಹೊಸ ನಿಯಮ ಮಾಡುತ್ತಿದ್ದು, ಇದಿಗ ಗೊಬ್ಬರಕ್ಕೆ ಎಫ್‌ಐಡಿ ಮತ್ತು ಲಿಂಕ್ ಎಂಬುವುದನ್ನು ತಂದಿದ್ದಾರೆ ಎಂದರು.ಪಟ್ಟಣದ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಮನವಿ ಸಲ್ಲಿಸಲಾಯಿತು.ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ದೇವರಾಜ ನಾಗಣ್ಣನವರ, ಎನ್.ಎಂ. ಈಟೇರ, ಜೆ.ಪಿ. ಪ್ರಕಾಶ, ರವಿಶಂಕರ ಬಾಳಿಕಾಯಿ, ಆರ್.ಎನ್. ಗಂಗೋಳ, ಶಿವು ಕುಮಾರ ತಿಪ್ಪಶಟ್ಟಿ, ಗುರುಶಾಂತ ಎತ್ತಿನಹಳ್ಳಿ, ಹರೀಶ್ ಕಲಾಲ್, ರುದ್ರಗೌಡ ನೀಲನಗೌಡ್ರ, ಆನಂದಪ್ಪ ಹಾದಿಮನಿ, ಬಸವರಾಜ ಭರಮಗೌಡ, ಮಹ್ಮದ್ ಹುಸೇನ್ ವಡ್ಡಿನಕಟ್ಟಿ, ಬಸಮ್ಮ ಅಬಲೂರು, ಉಮೇಶ ಬಣಕಾರ, ಹುಚ್ಚನಗೌಡ, ಕಬ್ಬಕ್ಕಿ, ಹನುಮಂತಪ್ಪ ಗಾಜೇರ, ಮಹೇಶ ಭರಮಗೌಡ, ಜಗದೀಶ ದೊಡ್ಡಗೌಡ, ನಾಗರಾಜ ಹಿರೇಮಠ, ಮನೋಹರ ವಡ್ಡಿನಕಟ್ಟೆ, ಬಸನಗೌಡ ದೊಡ್ಡಗೌಡ್ರ, ದುರಗೇಶ ತಿರಕಪ್ಪನವರ, ಗಂಗಾಧರ್, ಬೋಗೆರ, ಜಿಲಾನಿ ಬಳೆಗಾರ, ವಿಜಯ ಮಡಿವಾಳರ, ಬಸವರಾಜ ಚಿಂದಿ, ಹನುಮಂತಪ್ಪ ಮೇಗಳಮನಿ, ಹೊನ್ನಪ್ಪ ಸಾಲಿ, ಸಿ.ಎಸ್. ಚಳಗೇರಿ, ಪ್ರದೀಪ್ ಪಾಟೀಲ್, ಪುಟ್ಟನಗೌಡ ಪಾಟೀಲ, ಶೇಖಪ್ಪ ತುಮ್ಮಿನಕಟ್ಟಿ, ರಾಜು ಹುಚಗೊಂಡ್ರ, ಈರಣ್ಣ ಚಿಟ್ಟೂರು, ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೆಂಘೀ ತಡೆಗೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿ
ರೈತರು ಸಾಂಪ್ರದಾಯಿಕ ಏಕಬೆಳೆ ಪದ್ಧತಿಯಿಂದ ಹೊರ ಬನ್ನಿ