ಚಿಕ್ಕಮಗಳೂರು, ಇಂಡಿಯಾ ಒಕ್ಕೂಟ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದಿಂದ ಶನಿವಾರ ಪಕ್ಷದ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ದೇಶದ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂಬ ಹೇಳಿಕೆ । ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂಡಿಯಾ ಒಕ್ಕೂಟ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದಿಂದ ಶನಿವಾರ ಪಕ್ಷದ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ವಿರುದ್ಧ ಆಟಲ್‌ಬಿಹಾರಿ ವಾಜಪೇಯಿ ವಿದೇಶದಲ್ಲಿ ಎಂದಿಗೂ ಟೀಕಿಸಿರಲಿಲ್ಲ. ಆದರೆ, ಅವರ ಮೊಮ್ಮಗ ಇಂದು ಕೂಡಾ ವಿದೇಶಗಳಲ್ಲಿ ಭಾರತದ ಬಗ್ಗೆ ಸುಳ್ಳು ವದಂತಿ ಹಬ್ಬಿಸಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.ದೇಶದ 145 ಕೋಟಿ ಜನತೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರಧಾನಿಯವರು ರಾಷ್ಟ್ರವನ್ನು ವಿಶ್ವ ಗುರುಗಳನ್ನಾಗಿ ಮಾಡಲು ಹೊರಟರೆ, ಇನ್ನೊಂದೆಡೆ ರಾಹುಲ್‌ಗಾಂಧಿ ಬೇಜವಾಬ್ದಾರಿತನದಿಂದ ದೇಶವನ್ನು ಒಡೆಯುವ ಕಾಯಕದಲ್ಲಿ ತೊಡಗಿರುವುದು ದೇಶಕ್ಕೆ ದೊಡ್ಡ ಕಂಟಕ ಎಂದು ದೂರಿದರು.ಬಿಜೆಪಿ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅವಮಾನಿಸಿದ ಕಡೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಬಹುಮತದಿಂದ ಅಧಿಕಾರ ಹಿಡಿದಿದೆ ಎಂದ ಅವರು, ರಾಹುಲ್‌ಗಾಂಧಿ ದೇಶದ ಗಾಳಿ, ನೀರು, ಮಣ್ಣಿನ ಋಣಕ್ಕಾದರೂ ಸನ್ನಡತೆ ಹೊಂದದೇ, ದೇಶ ಒಡೆಯುವ ಹೇಳಿಕೆ ನೀಡಿರುವ ಕಾರಣ ಸಂಸತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಇಟಲಿಯ ತವರು ದೇಶಕ್ಕೆ ತೊಲಗಬೇಕು ಎಂದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಭಾರತ ದೇಶ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ನಮ್ಮ ಹೋರಾಟ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ನೈತಿಕವಾಗಿ ನಕ್ಸಲರು, ಉಗ್ರಗ್ರಾಮಿಗಳ ನೆರಳಿನಲ್ಲಿ ನಿಂತಿರುವುದು ಭವಿಷ್ಯದಲ್ಲಿ ದೇಶಕ್ಕೆ ದೊಡ್ಡ ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ ಮಾತನಾಡಿ, ಕಾಂಗ್ರೆಸ್‌ಗೆ ಮೋದಿ ಆಳ್ವಿಕೆ ಟೀಕಿಸುವುದು, ಹೊರ ದೇಶದಲ್ಲಿ ರಾಷ್ಟ್ರಕ್ಕೆ ಅವಹೇಳನಕಾರಿ ಹೇಳಿಕೆ ನೀಡುವುದೇ ದೊಡ್ಡ ಸಾಧನೆ ಮಾಡುತ್ತಿರುವ ರಾಹುಲ್‌ಗಾಂಧಿಗೆ ವಿರೋಧ ಪಕ್ಷ ಹಾಗೂ ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸ್ವಾತಂತ್ರ್ಯ ದಿನದಲ್ಲಿ ಕಾಂಗ್ರೆಸ್ ಹಿರಿಯರ ಧೋರಣೆ ಚಾಳಿಯನ್ನೇ ಇದೀಗ ಮೊಮ್ಮಗ ರಾಹುಲ್‌ಗಾಂಧಿ ಮುಂದುವರಿ ಸಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆ ಪ್ರಭಾವ ಎಲ್ಲೆಡೆ ಮುಟ್ಟಿರುವ ಕಾರಣ ದೇಶದ ಜನತೆ ಅಧಿಕಾರ ನೀಡಿದೆ. ಕಾಂಗ್ರೆಸ್‌ಗೆ ನೈತಿಕ ಶಕ್ತಿ ಹಾಗೂ ಸಂಘಟನಾ ಬಲವಿಲ್ಲದ ಕಾರಣ ಸೋಲುಂಡು ಹೀನಾಯ ಸ್ಥಿತಿ ಎದುರಿಸುತ್ತಿದೆ ಎಂದು ಟೀಕಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ವಕ್ತಾರ ಸಿ.ಎಚ್.ಲೋಕೇ ಶ್, ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ಶಶಿ ಆಲ್ದೂರು, ನೆಟ್ಟಿಕೆರೆಹಳ್ಳಿ ಜಯಣ್ಣ, ಮಂಜುನಾಥ್, ಅಂಕಿತಾ, ರಾಜೇಶ್, ಜೀವನ್ ಕೋಟೆ, ಬಸವರಾಜ್, ಓಂಕಾರೇಗೌಡ, ನಾಗರಾಜ್, ಮಂಜುನಾಥ್, ಪ್ರದೀಪ್, ಕಬೀರ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. 18 ಕೆಸಿಕೆಎಂ 1ರಾಹುಲ್ ಗಾಂಧಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಶನಿವಾರ ಪಕ್ಷದ ಕಾರ್ಯಕರ್ತರು ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.