ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಶಿವಾನಂದ ಜಿನ್‌ನಲ್ಲಿನ ಬಿಜೆಪಿ ಕಾರ್ಯಾಲಯದಿಂದ ಪಾದಯಾತ್ರೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು. ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ. ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ, ಹಿಂದೂಗಳ ಮೇಲೆ ನಿರಂತರವಾಗಿ ನಡೆಯುವತ್ತಿರುವ ಹಲ್ಲೆಗಳಿಗೆ ಸರ್ಕಾರವೇ ನೇರ ಹೊಣೆ ಎಂದರು.
ಪ್ರತಿಭಟನೆಯಲ್ಲಿ ಗುಂಡುರಾವ ಶಿಂಧೆ, ಡಾ.ಎಂ.ಎಸ್.ದಡ್ಡೆನ್ನವರ, ರಾಜು ರೇವಣಕರ, ಯಲ್ಲಪ್ಪ ನಾರಾಯಣಿ, ಸಾಗರ ಬಂಡಿ, ಬಸವರಾಜ ಅವರಾದಿ, ರಾಜು ಶಿಂತ್ರೆ, ಶಂಕರ ಗಲಗ, ಅಶೋಕ ಪವಾರ, ದೂಳಪ್ಪ ಕೋಪ್ಪದ, ರವಿ ನಾಯಕ, ಕಾಂತು ಖಾತೆದಾರ,ಆನಂದ ಕೋಟಗಿ, ಕಿರಣ ಭಾಗವಾಡಿ,ರಜತ ದಾವಗೇರಿ, ಹೊನ್ನಪ್ಪ ಅಂಬಿಗೇರ,ಶಿವು ಬೇವೂರ, ಸುರೇಶ ಮಜ್ಜಿಗಿ ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬಟ್ಟ,ಸೇರಿದಂತೆ ಅನೇಕರು ಭಾಗವಹಿಸಿದ್ದರು.