ಕನ್ನಡಪ್ರಭ ವಾರ್ತೆ ವಿಜಯಪುರ
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ರೈತರ ವಿಮೆ ಹಣವನ್ನು ತಕ್ಷಣದಲ್ಲೇ ಬಿಡುಗಡೆ ಮಾಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಕೈಬಿಟ್ಟು ಹೋಗಿರುವ ತಾಳಿಕೋಟೆ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಗಾಲ ಸಮೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆಲ್ಲ ಬರಗಾಲ ಬಂದಾಗ ಈಡಿ ಜಿಲ್ಲೆಯನ್ನೇ ಬರಗಾಲ ಎಂದು ಘೋಷಿಸುತ್ತಿದ್ದರು, ಆದರೆ ಈ ಕಾಂಗ್ರೆಸ್ ಸರ್ಕಾರ ಬರದ ಗಂಭೀರತೆ ಅರಿಯದೆ ಬೇಕಾಬಿಟ್ಟಿಯಾಗಿ ಕೆಲವು ತಾಲೂಕುಗಳನ್ನು ಮಾತ್ರ ಘೋಷಣೆ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಸರ್ಕಾರ ಬೇಕಾಬಿಟ್ಟಿಯಾಗಿ ಬರ ಘೋಷಣೆ ಮಾಡುತ್ತಿದೆ. ಇದರಲ್ಲಿ ಉಸ್ತುವಾರಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇಂಡಿ ಶಾಸಕರು ತಮ್ಮನ್ನು ಮಂತ್ರಿ ಮಾಡಿಲ್ಲವೆಂದು ರಾಜೀನಾಮೆ ಕೊಡಲು ಹೋದವರು ಅದೇ ಇಚ್ಛಾಶಕ್ತಿ, ಸ್ವಾಭಿಮಾನವನ್ನು ಇಂಡಿಯನ್ನು ಬರಗಾಲ ಎಂದು ಘೋಷಣೆ ಮಾಡುವಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ತೋರಿಸುತ್ತಿರುವ ರೈತ ವಿರೋಧಿ ನಿಲುವನ್ನು ವಿರೋಧಿಸಿ ಕಳೆದ 25 ದಿನಗಳಿಂದ ರೈತ ಸಂಘಟನೆಗಳು, ಬಿಜೆಪಿ, ಎನ್.ಡಿ.ಎ ಒಕ್ಕೂಟದೊಂದಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಹೋರಾಟದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ಡಾ.ಸುರೇಶ ಬಿರಾದಾರ, ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ರವೀಂದ್ರ ಲೋಣಿ, ರವಿಕಾಂತ ಬಗಲಿ, ಈರಣ್ಣ ರಾವೂರ, ಬಾಲರಾಜ ರೆಡ್ಡಿ, ಸ್ವಪ್ನಾ ಕಣಮುಚನಾಳ, ರಜನಿ ಸಂಬಣ್ಣಿ, ರಾಜಕುಮಾರ ಸಗಾಯಿ, ಅಣ್ಣಪ್ಪ ಖೈನೂರ ಇದ್ದರು.