- ಮಾಡಾಳು ಮಲ್ಲಿಕಾರ್ಜುನ ನೇತೃತ್ವದಲ್ಲಿ ಕೃಷಿ ಇಲಾಖೆ, ತಾಲೂಕು ಕಚೇರಿಗೆ ಮುತ್ತಿಗೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ರಸಗೊಬ್ಬರ ಕೊರತೆ ಖಂಡಿಸಿ ತಾಲೂಕು ಬಿಜೆಪಿ ವತಿಯಿಂದ ಯೂರಿಯಾ ಗೊಬ್ಬರ ಕೊಡಿ, ಇಲ್ಲವೇ ವಿಷ ಕೊಡಿ ಎಂಬ ಘೋಷಣೆಯೊಂದಿಗೆ ಬುಧವಾರ ಬಿಜೆಪಿಯಿಂದ ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನೂರಾರು ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಕೃಷಿ ಇಲಾಖೆ ಮತ್ತು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ಅಧಿಕಾರಿಗಳಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಗಾಂಧಿ ವೃತ್ತದಲ್ಲಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ಈ ಹಿಂದೆ ಆಡಳಿತ ನಡೆಸಿದ ಯಾವ ಸರ್ಕಾರಗಳೂ ರೈತವಿರೋಧಿ ಧೋರಣೆ ಹೊಂದಿರಲಿಲ್ಲ. ಜಿಲ್ಲೆಗೆ 2,500 ಟನ್ ಯೂರಿಯಾ ಗೊಬ್ಬರ ಬಂದಿತ್ತು. ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಂತ್ರಿಗಳು ಬೇರೆ ಜಿಲ್ಲೆಗೆ ಕೊಟ್ಟಿರುವುದು ರೈತರಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.
ತಾಪಂ ಮಾಜಿ ಅಧ್ಯಕ್ಷ ಪಿ.ಲೋಹಿತ್ ಕುಮಾರ್ ಮಾತನಾಡಿದರು. ಮೆರವಣಿಗೆಯಲ್ಲಿ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಲಾಯಿತು. ಕೃಷಿ ಇಲಾಖೆ ಮತ್ತು ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಯಿತು. ತಾಲೂಕು ಮುಖಂಡರಾದ ಮೆದಿಕೆರೆ ಸಿದ್ದೇಶ್, ಹೆಬ್ಬಳಗೆರೆ ಕೆ.ಸಿ.ಕೆಂಚಪ್ಪ, ಸರ್ಕಾರದ ರೈತ ವಿರೋಧಿ ನೀತಿಯ ಬಗ್ಗೆ ಮಾತನಾಡಿದರು. ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲಾಯಿತು.ಬಿಜೆಪಿ ಪ್ರಮುಖರಾದ ರುದ್ರೇಗೌಡ, ಗೌ.ಹಾಲೇಶ್, ಪಟ್ಲಿ ನಾಗರಾಜ್, ಚ.ಮ. ಗುರುಸಿದ್ದಯ್ಯ, ಹನುಮಂತ್ ಮಡಿವಾಳ್, ಪಿ.ಬಿ.ನಾಯಕ, ಕುಬೇಂದ್ರೋಜಿ ರಾವ್, ತರಕಾರಿ ಮಂಜುನಾಥ್, ಕಮಲಾ ಹರೀಶ್, ಶಶಿಕಲಾ ನಾಗರಾಜ್, ರೂಪಾ, ಹರೋನಹಳ್ಳಿ ಮಲ್ಲಿಕಾರ್ಜುನ್, ದೇವರಾಜ್, ಸಚಿನ್, ಪುನೀತ್, ಗಂಗಗೊಂಡನಹಳ್ಳಿ ಜಗದೀಶ್, ನೂರಾರು ರೈತರು ಭಾಗವಹಿಸಿದ್ದರು. ಪ್ರತಿಭಟನೆಯಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
- - --31ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಪ್ರತಿಭಟನಾ ಸಭೆಯಲ್ಲಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿದರು.