ಕನ್ನಡಪ್ರಭವಾರ್ತೆ ಮೂಲ್ಕಿ
ಬಿಜೆಪಿಯ ಮೂಲ್ಕಿ ಮೂಡಬಿದಿರೆ ಮಂಡಲ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಎ.ಟಿ.ಎಂ ಆಗಿ ಪರಿವರ್ತಿಸಿದ್ದು ಮೂಡಾ ಹಗರಣ, ವಸತಿ ಹಗರಣ ಹೀಗೆ ನಾನಾ ಹಗರಣಗಳಲ್ಲಿ ತೊಡಗಿಸಿಕೊಂಡಿದ್ದು, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ, ಗ್ಯಾರಂಟಿಗಳನ್ನು ಅವರಿಗೆ ಪೂರೈಸಲು ಅಸಾಧ್ಯವಾಗಿದೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಸೋಂದ ಬಾಸ್ಕರ ಭಟ್, ಅಭಿಲಾಷ್ ಶೆಟ್ಟಿ ಕಟೀಲು, ದಿವಾಕರ ಕರ್ಕೇರ, ಪ್ರವೀಣ್ ಕಟೀಲು, ಅರುಣ್ ಮಲ್ಲಿಗೆಯಂಗಡಿ, ಕೇಶವ ಕರ್ಕೇರ, ಲೋಕಯ್ಯ ಸಾಲಿಯಾನ್, ಹೇಮಲತಾ, ಶೈಲೇಶ್ ಅಂಚನ್, ಉಮಾನಾಥ್, ಚರಣ್ ಕಟೀಲು, ವರುಣ್ ಶೇಡಿಗಾರ್, ಅಶೋಕ್ ಕೆಮ್ಮಡೆ, ಸುಧೀರ್ ಪಟ್ಟೆ, ಬೇಬಿ ಕೆಮ್ಮಡೆ, ಭಾಸ್ಕರ ಪೂಜಾರಿ, ಪ್ರೇಮ್ ರಾಜ್ ಶೆಟ್ಟಿ ಬರ್ಕೆ, ತಿಲಕ್ ರಾಜ್ ಶೆಟ್ಟಿ, ಕಪಿಲ ಗುತ್ತಕಾಡ್ ಜಯನಂದ ಮೂಲ್ಕಿ, ಚಂದ್ರಶೇಖರ ಬರ್ಕೆ, ದಯಾನಂದ ಶೆಟ್ಟಿ ಕೆ.ಜಿ.ಬೆಟ್ಟು, ಸಂಜಯ್ ಕೆಮ್ಮಡೆ, ದುರ್ಗಾಪ್ರಸಾದ್ ಶೆಟ್ಟಿ, ಆಶಾ ಸುವರ್ಣ ಮತ್ತಿತರರು ಇದ್ದರು.