ಕನ್ನಡಪ್ರಭ ವಾರ್ತೆ ಬೆಳಗಾವಿ ಮಕ್ಕಳ ರಕ್ಷಣಾ ಹಕ್ಕು, ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾ.7ರಂದು ಜಿಲ್ಲೆಯ 1200 ಪ್ರೌಢಶಾಲೆಗಳಲ್ಲಿ ಒಂದೇ ಬಾರಿ ಏಕಕಾಲಕ್ಕೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿಮಕ್ಕಳ ರಕ್ಷಣಾ ಹಕ್ಕು, ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾ.7ರಂದು ಜಿಲ್ಲೆಯ 1200 ಪ್ರೌಢಶಾಲೆಗಳಲ್ಲಿ ಒಂದೇ ಬಾರಿ ಏಕಕಾಲಕ್ಕೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಏಕಕಾಲಕ್ಕೆ ಇಷ್ಟೊಂದು ಸಂಖ್ಯೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಇದೊಂದು ದಾಖಲೆಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಪೋಕ್ಸೋ ಕಾನೂನು, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಗುವುದು. ವಿಡಿಯೋ ತುಣುಕುಗಳ ಮೂಲಕ ಪ್ರಾತ್ಯಕ್ಷಿಕೆ ನೀಡಿ, ಮಕ್ಕಳೊಂದಿಗೆ ಸಂವಾದವನ್ನು ನಡೆಸಲಾಗುವುದು ಎಂದು ಹೇಳಿದರು.ನಗರದ ಟಿಳಕವಾಡಿ ಕೆಎಲ್‌ಎಸ್ ಹೈಸ್ಕೂಲ್‌ನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿಂದಲೇ ಸಾಂಕೇತಿಕವಾಗಿ ಜಿಲ್ಲೆಯ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಜಯಂತ ಬ್ಯಾನರ್ಜಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದದಾರೆ. ನಮ್ಮ 65 ನ್ಯಾಯಾಧೀಶರು ಒಂದೊಂದು ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ವಕೀಲರು ಅರೆಕಾಲಿಕ ಸ್ವಯಂ ಸೇವಕರು, ಮಧ್ಯಸ್ಥಿಕೆದಾರರನ್ನು ಆಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಲು ಈಗಾಗಲೇ ಗುರುತು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಬೆಳಗಾವಿ ನಗರದಲ್ಲಿ 25 ಹೈಸ್ಕೂಲ್‌ನಲ್ಲಿ ಇಲ್ಲಿನ ನ್ಯಾಯಾಧೀಶರುಗಳೇ ಪಾಲ್ಗೊಳ್ಳಲಿದ್ದಾರೆ. ನ್ಯಾಯಾಧೀಶರೇ ನೇರವಾಗಿ ಮಕ್ಕಳೊಂದಿಗೆ ಸಂವಾದ ಮಾಡಲ್ಲಿದ್ದಾರೆ. ಈ ಮೂಲಕ ಮಕ್ಕಳಲ್ಲಿ ತಮಗಾಗಿ ಇರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇದರಿಂದ ಜಿಲ್ಲೆಯಲ್ಲಿನ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ ಎಂದು ವಿವರಿಸಿದರು.ಮಾ.14ಕ್ಕೆ ಲೋಕ ಅದಾಲತ್
ಈ ವರ್ಷದ ಮೊದಲನೇ ಲೋಕ ಅದಾಲತ್ ಮಾ.14ರಂದು ಜಿಲ್ಲೆಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ನಡೆಯಲಿದೆ. ಇದಕ್ಕಾಗಿ 85 ಲೋಕ ಅದಾಲತ್ ಪೀಠಗಳನ್ನು ನಿಯೋಜಿಸಲಾಗುವುದು. 28 ಸಾವಿರ ಪ್ರಕರಣ ರಾಜಿಗೆ ಗುರುತು ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯದಲ್ಲಿರುವ 20,408 ಪ್ರಕರಣ ಇತ್ಯರ್ಥ ಮಾಡಿದ್ದೇವೆ. ವ್ಯಾಜ್ಯ ಪೂರ್ವ 3 ಲಕ್ಷ ಪ್ರಕರಣ ಇತ್ಯರ್ಥ ಮಾಡಿದ್ದೇವೆ. ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸುವ ಮಧ್ಯಸ್ಥಿಕೆದಾರರ ನೇಮಕವಾಗಿದೆ. ಇರುವ ಕೌಟುಂಬಿಕ ಕಲಹ, ವೈವಾಹಿಕ ಕಲಹಗಳನ್ನು ಮಧ್ಯಸ್ಥಿಕೆ ವಹಿಸಿ ಮಾಡಿಸುತ್ತಾರೆ. ಇದಕ್ಕಾಗಿ 90 ದಿನಗಳ ಕಾರ್ಯಕ್ರಮ ಆಯೋಜನೆಯಾಗಿದ್ದು, ನಮ್ಮಲ್ಲಿ ಏಪ್ರಿಲ್‌ವರೆಗೂ ನಡೆಯಲಿದೆ ಎಂದು ಮಾಹಿತಿ ನೀಡಿದರು.