ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ದೇವರಾಜ ಅರಸು ಬಡಾವಣೆಯ ಸಂಗೊಳ್ಳ ರಾಯಣ್ಣ ವೃತ್ತದಿಂದ ದೂಡಾ ಕಚೇರಿವರೆಗೆ ಪಕ್ಷದ ಹಿರಿಯ ಮುಖಂಡರಾದ ಯಶವಂತರಾವ್ ಜಾಧವ್, ಶಿವನಹಳ್ಳಿ ರಮೇಶ, ರಾಜನಹಳ್ಳಿ ಶಿವಕುಮಾರ, ಬಿ.ಎಸ್.ಜಗದೀಶ, ಎಂ.ಹಾಲೇಶ ಇತರರ ನೇತೃತ್ವದಲ್ಲಿ ಘೋಷಣೆ ಕೂಗುತ್ತ, ದೂಡಾ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಸ್ವಾಮಿ ವಿವೇಕಾನಂದ ಬಡಾವಣೆಯ ಏಕ ನಿವೇಶನ ಅನುಮೋದನೆ ರದ್ಧುಪಡಿಸಲು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಇಲ್ಲಿನ ಸ್ವಾಮಿವಿವೇಕಾನಂದ ಬಡಾವಣೆಯ ಪಾಲಿಕೆ ಮಾಲೀಕತ್ವದ ಪಾರ್ಕನ್ನು ದೂಡಾದಿಂದ 1984ರ ಫೆ.13ರಲ್ಲಿ ಅನುಮೋದನೆ ಕೊಟ್ಟ ವಸತಿ ವಿನ್ಯಾಸದಲ್ಲಿ ಬರುತ್ತದೆ. ಆದರೂ, ಭೂ ಮಾಫಿಯಾದವರಿಗೆ ಪ್ರಾಧಿಕಾರವೇ ಏಕ ನಿವೇಶನ ಮಾಡಿಕೊಟ್ಟಿರುವುದು ಬೇಲಿಯೇ ಎದ್ದು, ಹೊಲ ಮೇಯ್ದಂತಾಗಿದೆ ಎಂದು ಟೀಕಿಸಿದರು.ಪಾಲಿಕೆ ಮಾಲೀಕತ್ವದ ಪಾರ್ಕ್ ಅಳತೆ 200-220/2* ಅಡಿ ಇರುವುದು ಕಂಡು ಬಂದಿದೆ. 2024ರ ಆ.22ರಂದು ದೂಡಾ ಕಚೇರಿ ಅಭಿಯಂತರರು ಮತ್ತು ಪಾಲಿಕೆ ಕಚೇರಿ ಅಭಿಯಂತರರು ಜಂಟಿ ಪರಿಶೀಲನೆ ಮಾಡಿ, ಪಾಲಿಕೆ-ದೂಡಾ ಭೂ ಮಾಪಕರು ಡಿಜಿಪಿಎಸ್ ಸರ್ವೇ ಮಾಡಿ, ಸ್ಥಳ ಪರಿಶೀಲಿಸಿದಾಗ ಅಲ್ಲಿ ಪಾರ್ಕ್ ಇರುವುದು ಖಚಿತವಾಗಿದೆ ಎಂದು ಹೇಳಿದರು.
ದೂಡಾ ಸಹ ವಸತಿ ವಿನ್ಯಾಸ ಏಕ ನಿವೇಶನ ಅನುಮೋದನೆ ರದ್ಧುಪಡಿಸದಿದ್ದರೆ ಈ ಭೂ ಮಾಫಿಯಾದ ಖಾಸಗಿ ವ್ಯಕ್ತಿಗೆ ಸಹಾಯ ಮಾಡಿದಂತಾಗುತ್ತದೆ. ತಕ್ಷಣವೇ ಅದನ್ನು ರದ್ಧುಪಡಿಸಲು ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮಾಜಿ ಮೇಯರ್ ಎಸ್.ಟಿ.ವೀರೇಶ, ಮಾಜಿ ಸದಸ್ಯರಾದ ಎಂ.ಹಾಲೇಶ, ಆರ್.ಶಿವಾನಂದ, ಎಸ್.ಎಂ.ವೀರೇಶ ಹನಗವಾಡಿ. ಶ್ರೀನಿವಾಸ ಟಿ.ದಾಸಕರಿಯಪ್ಪ, ಬಿ.ರಮೇಶ ನಾಯ್ಕ, ಬಿ.ಎಂ.ಸತೀಶ ಕೊಳೇನಹಳ್ಳಿ, ಅಣಬೇರು ಜೀವನಮೂರ್ತಿ, ಹೊನ್ನಾಳಿ ಎಂ.ಆರ್.ಮಹೇಶ, ಎ.ಬಿ.ಹನುಮಂತಪ್ಪ ಅರಕೆರೆ, ಎಸ್.ಟಿ.ಯೋಗೇಶ, ತರಕಾರಿ ಶಿವು, ಗುರು ಸೋಗಿ, ಶಿವನಗೌಡ ಪಾಟೀಲ, ಶಂಕರಗೌಡ ಬಿರಾದಾರ, ಎಂ.ಅಂಜಿನಪ್ಪ ಶಾಬನೂರು, ಬಿ.ಪುಲಿ, ವೀರೇಶ, ಎಚ್.ಸಿ.ಜಯಮ್ಮ, ಕಿರೀಟ್ ಸಿ.ಕಲಾಲ್, ಟಿಂಕರ್ ಮಂಜಣ್ಣ, ಬೇತೂರು ಬಸವರಾಜ, ಕೆಟಿಜೆ ನಗರ ಆನಂದ, ನಿಂಗರಾಜ ರೆಟ್ಟಿ, ಪಿ.ಎನ್.ಜಗದೀಶ ಕುಮಾರ ಪಿಸೆ, ಹನುಮಂತರಾವ್ ಆರ್.ಸುರ್ವೆ, ಎಚ್.ಬಿ.ಈರಣ್ಣ, ಕುಮಾರ, ಎಸ್.ಟಿ.ಶ್ರೀನಿವಾಸ, ಬಿ.ಆನಂದ, ಕೆ.ಎ.ಮಾಲತೇಶ, ಕುಮಾರ, ವಿ.ಕೃಷ್ಣ, ಹರೀಶ ಹೊನ್ನೂರು, ಯಲ್ಲಪ್ಪ ಪವಾರ್, ಜಿ.ಕಿಶೋರಕುಮಾರ, ಕೆಟಿಜೆ ನಗರ ಲೋಕೇಶ, ಗಿರೀಶ ಬೇತೂರು ಇತರರು ಇದ್ದರು.