ಬಂಗಾರಪೇಟೆ: ವಕೀಲ ವೃತ್ತಿಯು ಸಮಾಜದಲ್ಲಿ ಶ್ರೇಷ್ಠವಾದ ವೃತ್ತಿಯಾಗಿದೆ. ವಕೀಲ ವೃತ್ತಿಯ ಗೌರವವನ್ನು ಎಲ್ಲಾ ವಕೀಲರೂ ಪಾಲಿಸಿ ಮತ್ತಷ್ಟು ಗೌರವ ಹೆಚ್ಚಿಸಬೇಕೆಂದು ನ್ಯಾಯಾಧೀಶ ಮುಜಫರ್ ಎ.ಮಂಜರಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು, ನ್ಯಾಯಾಧೀಶರಾದ ನಟೇಶ್ ರವರು ಮಾತನಾಡಿ, ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಎಲ್ಲಾ ವಕೀಲರು ಶ್ರಮಿಸುತ್ತಿರುವುದು ಸ್ವಾಗತಾರ್ಹ, ಇದರಿಂದ ಸಾರ್ವಜನಿಕರಿಗೆ ನ್ಯಾಯಾಲಯದ ಮೇಲೆ ಇರುವ ನಂಬಿಕೆ ಇನ್ನಷ್ಟು ಹೆಚ್ಚುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಒಂದನೇ ಅಪರ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ್ ಅಲಬೂರ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಕುಮುದಿನಿ ಹಾಗೂ ತಿಮ್ಮರಾಜು, ಹಿರಿಯ ವಕೀಲರಾದ ಎಂ.ನಂಜುಂಡಪ್ಪ, ಜಯಪ್ರಕಾಶ್, ಅಮರೇಶ್, ಕೆ.ಸಿ.ಪ್ರಸಾದ್ ರಾಮೇಗೌಡ, ವಕೀಲರ ಸಂಘದ ಅಧ್ಯಕ್ಷರಾದ ಎಸ್.ನಾರಾಯಣಪ್ಪ. ಕಾರ್ಯದರ್ಶಿ ಎಂ.ವಿಜಯ್ ಕುಮಾರ್, ಉಪಾಧ್ಯಕ್ಷ ಆನಂದ್. ಖಜಾಂಚಿ ಮಂಜುನಾಥ್.ಜಿ., ಸದಸ್ಯರಾದ ರವಿಚಂದ್ರ , ಅಭಿಲಾಷ್, ವಕೀಲರಾದ ಆರ್.ರಮೇಶ್, ರಂಗನಾಥ್, ಅಮರೇಶ್, ರಂಜಿತ್, ಆಕಾಶ್ ತನೂಜ್, ಮಹಿಳಾ ವಕೀಲರಾದ ಚೆನ್ನಮ್ಮ, ಸರಸ್ವತಿ, ನಂದಿನಿ, ದಾಕ್ಷಾಯಿಣಿ, ಸುಮಾ ಇದ್ದರು.