ಹಳಿಯಾಳ ಕ್ಷೇತ್ರ ಬಿಜೆಪಿ ಗೆಲ್ಲಿಸುವ ಗುರಿ: ಸುನೀಲ ಹೆಗಡೆ

KannadaprabhaNewsNetwork | Published : Dec 4, 2024 12:36 AM

ಸಾರಾಂಶ

ಯಾವುದೇ ಭಿನ್ನಮತಗಳಿಗೆ ಅವಕಾಶ ಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರಾದ ಮಾಜಿ ವಿಧಾನಪರಿಷತ್ ಸದಸ್ಯ ವಿ.ಡಿ. ಹೆಗಡೆ ಅವರ ಮಾರ್ಗದರ್ಶನದಲ್ಲಿ ಹೆಜ್ಜೆಯಿಡಲಿದ್ದೇವೆ ಎಂದು ಸುನೀಲ ಹೆಗಡೆ, ಎಸ್.ಎಲ್. ಘೋಟ್ನೇಕರ್ ತಿಳಿಸಿದರು.

ಹಳಿಯಾಳ: ಅತ್ಯಲ್ಪ ಮತಗಳಿಂದ ನಮ್ಮಿಂದ ಕೈ ತಪ್ಪಿ ಹೋಗುತ್ತಿರುವ ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡು ಇಲ್ಲಿ ಪಕ್ಷದ ಬಾವುಟ ಹಾರಿಸುವುದೇ ನಮ್ಮ ಗುರಿಯಾಗಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಘೋಷಿಸಿದ್ದಾರೆ.

ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಭಿನ್ನಮತಗಳಿಗೆ ಅವಕಾಶ ಬರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರಾದ ಮಾಜಿ ವಿಧಾನಪರಿಷತ್ ಸದಸ್ಯ ವಿ.ಡಿ. ಹೆಗಡೆ ಅವರ ಮಾರ್ಗದರ್ಶನದಲ್ಲಿ ಹೆಜ್ಜೆಯಿಡಲಿದ್ದೇವೆ. ನಾವಿಬ್ಬರೂ, ಮೂರು ಮಂಡಲದ ಪದಾಧಿಕಾರಿಗಳು ಮತ್ತು ನಮ್ಮ ಕಾಯಕರ್ತರೆಲ್ಲರೂ ಒಗ್ಗಟ್ಟಾಗಿ ಹೋಗುವ ಪ್ರತಿಜ್ಞೆ ಮಾಡಿದ್ದೇವೆ ಎಂದರು.

ಸುನೀಲ್‌ ಹೆಗಡೆ ಮಾತನಾಡಿ, ಹಿರಿಯರಾದ ಅನುಭವಿ ಎಸ್.ಎಲ್. ಘೋಟ್ನೇಕರ ಅವರ ಸೇರ್ಪಡೆಯನ್ನು ಸ್ವಾಗಸುತ್ತೇವೆ. ಪಕ್ಷದ ಸಭೆಯಲ್ಲಿ ಭಾಗವಹಿಸಿದ ಕಾರಣ ಅವರು ಪಕ್ಷಕ್ಕೆ ಸೇರ್ಪಡೆಯಾಗುವ ಕಾರ್ಯಕ್ರಮಕ್ಕೆ ನನಗೆ ಹಾಜರಾಗಲು ಆಗಲಿಲ್ಲ. ಅದಕ್ಕಾಗಿ ಹಳಿಯಾಳದಲ್ಲಿ ಮತ್ತೊಮ್ಮೆ ಅವರನ್ನು ಸ್ವಾಗತಿಸಿ, ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದೆವು ಎಂದರು.

ದ್ರೋಹ ಬಗೆಯಲಾರೆ:

ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ನಾನು ಹಿರಿಯರಾದ ವಿ.ಡಿ. ಹೆಗಡೆ ಅವರ ಜತೆ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈಗ ಮಾಜಿ ಶಾಸಕ ಸುನೀಲ ಹೆಗಡೆ ಅವರ ಜತೆಯಲ್ಲಿ ಪಕ್ಷವನ್ನು ಸಂಘಟಿಸುವ, ಬಲಪಡಿಸುವ ಕೆಲಸ ಮಾಡುತ್ತೇನೆ ಎದರು.

ಸುದ್ದಿಗೋಷ್ಠಿಯಲ್ಲಿ ಮೂರು ಮಂಡಲದ ಅಧ್ಯಕ್ಷರಾದ ವಿಠ್ಠಲ ಸಿದ್ದಣ್ಣನವರ, ಬುದ್ಧಿವಂತ ಗೌಡಾ, ಶಿವಾಜಿ ಗೋಸಾವಿ, ಪ್ರಮುಖರಾದ ಶಿವಾಜಿ ನರಸಾನಿ, ಗಣಪತಿ ಕರಂಜೇಕರ, ಮಂಗೇಶ ದೇಶಪಾಂಡೆ, ಗಿರೀಶ ಠೊಸುರ, ಸಂತೋಷ ಘಟಕಾಂಬ್ಳೆ, ಆಕಾಶ ಉಪ್ಪಿನ, ಚಂದ್ರಕಾಂತ ಕ್ಷೀರಸಾಗರ, ಸಂತೋಷ ರೇಡ್ಕರ, ಸುಧಾಕರ ರೆಡ್ಡಿ ಹಾಗೂ ಇತರರು ಇದ್ದರು.

ಕಿರವತ್ತಿ ಸೊಸೈಟಿಗೆ ೧೨ ಸದಸ್ಯರ ಅವಿರೋಧ ಆಯ್ಕೆ

ಯಲ್ಲಾಪುರ: ತಾಲೂಕಿನ ಕಿರವತ್ತಿ ಸೊಸೈಟಿ ಚುನಾವಣೆ ಡಿ. ೨ರಂದು ನಡೆದಿದ್ದು, ಸೊಸೈಟಿಯ ೧೨ ಸದಸ್ಯರು ಅವಿರೋಧ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಗೆಲುವಿನ ವಿಜಯ ಸಾಧಿಸಿದೆ.ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಶುಭ ಶಕುನವೆಂಬಂತೆ ಯಲ್ಲಾಪುರ ಪಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಇದೀಗ ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಚುನಾವಣೆಯಲ್ಲಿಯು ಕಾಂಗ್ರೆಸ್ ಮೇಲುಗೈ ಸಾಧಿಸಿ ೧೨ ಕಾಂಗ್ರೆಸ್ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಜಯ್ ವಿಠ್ಠಲ ಮಿರಾಶಿ, ಮುಬಾರಕ್ ಅಬ್ಬಿಗೆರೆ, ಹರುನ್ ಇಸ್ಮಾಯಿಲ್ ಶೇಖ್, ಪರಶುರಾಮ ಮಹದೇವ ಹರಿಜನ್, ಗಣಪತಿ ರಾಮ ಶಿರನಾಲ್ಕರ್, ನಾವು ಲಕ್ಕು ಪಟಕಾರೆ, ಮಹದೇವಿ ನಾಗೇಂದ್ರ ಮರಾಠಿ, ಹನುಮಂತ ಲಕ್ಷ್ಮಪ್ಪ ಸೋಮಾಪುರಕರ, ಫಾತೀಮ ಮೆಹಬೂಬ್ ಸಾಬ್ ಕಿರವತ್ತಿ, ಆಶಾ ಬಿ. ಇಮಾಮ್ ಸಾಬ್ ತಟ್ಟೀಗೇರಿ, ಜಾಫರ್ ಹುಸೇನ್ ಸಾಬ್ ಒಂಟಿ ಹಾಗೂ ನೂರ್ ಅಹ್ಮದ್ ಸೈಯ್ಯದ್ ಅವಿರೋಧವಾಗಿ ಆಯ್ಕೆಯಾದ ಸದಸ್ಯರಾಗಿದ್ದಾರೆ.

ಭವಿಷ್ಯದಲ್ಲಿ ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಯಶಸ್ಸಿನ ಉತ್ತುಂಗಕ್ಕೆ ಏರಲಿ ಹಾಗೂ ಅವಿರೋಧ ಆಯ್ಕೆಯಾದ ಸದಸ್ಯರಿಗೆ ಶಾಸಕ ಶಿವರಾಮ ಹೆಬ್ಬಾರ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಸ್ಥಳೀಯ ಮುಖಂಡ ವಿಜಯ್ ಮಿರಾಶಿ ಮತ್ತು ಮುರಳಿ ಹೆಗಡೆ, ರಹಮತ್ ಅಬ್ಬಿಗೆರೆ, ರಾಘವೇಂದ್ರ ಗೊಂದಿ, ಬಾಬು ಸಿದ್ದಿ, ವಿಲ್ಸನ್ ಫರ್ನಾಂಡೀಸ್, ಮಹೇಶ್ ಗೋಕರ್ಣ, ಬಾಬಾ ಶೇಖ್, ಹಾಗು ನೂರ್ ಅಹ್ಮದ್ ಶೇಖ್ ಅವರು ಅಭಿನಂದಿಸಿದ್ದಾರೆ.

Share this article