ಮೊಳಕಾಲ್ಮುರು: ಬಡವರಿಗೆ ನ್ಯಾಯ ಒದಗಿಸಿ ಸದೃಢ ಸಮಾಜ ಕಟ್ಟುವಲ್ಲಿ ವಕೀಲರ ವೃತ್ತಿ ಅವಿಸ್ಮರಣೀಯ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಟಿ.ಕೆ.ಪ್ರಿಯಾಂಕ ಹೇಳಿದರು.
ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲಿ ಪ್ರತಿ ದಿನ ಸದಾ ಒತ್ತಡದಲ್ಲಿ ದಿನ ಕಳೆಯುತ್ತಾರೆ. ಪ್ರತಿ ದಿನವೂ ಅಧ್ಯಯನ ಮೂಲಕ ಹೊಸತನವನ್ನು ಹುಡುಕುವ ವಕೀಲರ ವೃತ್ತಿ ಸದಾ ಕಲಿಕೆ. ವಕೀಲರಾಗಿ ಸೇವೆ ಸಲ್ಲಿಸಿದ ಅನೇಕ ಮಹನೀಯರು ದೇಶದಲ್ಲಿ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಆಲೋಚನೆಗಳಲ್ಲಿ ವಕೀಲರಿಗೆ ಸದಾ ಒತ್ತಡ ಇರುತ್ತದೆ. ಅಂತಹ ಸಂದರ್ಭದಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮದಿಂದ ಒಂದಷ್ಟು ಸಮಯವಾದರೂ ಖುಷಿಯಾಗಿರಬಹುದು. ಪ್ರತಿ ವಕೀಲರು ನಿಮ್ಮ ವೃತ್ತಿಯಲ್ಲಿ ನ್ಯಾಯ ಕೊಡಿಸುವ ಜತಗೆ ಆರೋಗ್ಯದ ಕಡೆ ಗಮನಹರಿಸಿ ಸದೃಢವಂತ ಸಮಾಜ ಕಟ್ಟಬೇಕು ಎಂದರು.
ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಕಕ್ಷಿದಾರರಿಗೆ ನ್ಯಾಯ ಒದಗಿಸಲು ನಿರಂತರ ಅಧ್ಯಯನ ಮುಖ್ಯ. ಬಹುತೇಕ ಬಡ ಸಮುದಾಯಗಳೇ ಹೆಚ್ಚಾಗಿರುವ ಹಿಂದುಳಿದ ಈ ಭಾಗದಲ್ಲಿ ಕಕ್ಷಿದಾರ ನ್ಯಾಯಾಲಯಕ್ಕೆ ಅಲೆದಾಡಿಸದೆ ಸಕಾಲಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿ. ಸದಾ ಅಭ್ಯಾಸವಿದ್ದಲ್ಲಿ ಉತ್ತಮ ವಕೀಲರಾಗಲು ಅವಕಾಶವಿದ್ದು, ವಕೀಲ ವೃತ್ತಿಯ ಘನತೆ ಗೌರವವನ್ನು ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.ವಕೀಲರು ನ್ಯಾಯಾಲಯಕ್ಕೆ ನಾಲ್ಕು ಎಕರೆ ಜಮೀನು ಕೊಡಿಸುವಂತೆ ಮನವಿ ಮಾಡಿದ್ದಾರೆ. ಜಮೀನು ಲಭ್ಯ ನೋಡಿಕೊಂಡು ನ್ಯಾಯಾಲಯಕ್ಕೆ ಬರುವ ಜನರ ಅನುಕೂಲಕ್ಕೆ ತಕ್ಕಂತೆ ಜಮೀನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜಕೀಯವಾಗಿ ನಮ್ಮ ಕುಟುಂಬವನ್ನು
ಮೊಳಕಾಲ್ಮುರು: ರಾಜಕೀಯವಾಗಿ ನಮ್ಮ ಕುಟುಂಬವನ್ನು ತುಳಿಯಲು 2013ರ ಚುನಾವಣೆಯಲ್ಲಿ ಕಾಣದ ಕೈಗಳು ಕೆಲಸ ಮಾಡಿದವು. ಒಳ್ಳೆಯವರನ್ನು ದೇವರು ಎಂದೂ ಕೈಬಿಡಲ್ಲ ಎನ್ನುವುದಕ್ಕೆ ಆರೇ ತಿಂಗಳಲ್ಲಿ ಮತ್ತೆ ನನಗೆ ರಾಜಕೀಯ ಭವಿಷ್ಯ ಸಿಕ್ಕಿತು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
2013 ರ ಚುನಾವಣೆಯಲ್ಲಿ ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಯತ್ನ ಸದ್ದಿಲ್ಲದೆ ನಡೆಯಿತು. ಆದರೆ ದೇವರು ಎಂದೂ ನನ್ನನ್ನು ಕೈಬಿಡಲಿಲ್ಲ. ಆರೇ ತಿಂಗಳಲ್ಲಿ ಗೊತ್ತು ಗುರಿಯಿಲ್ಲದ ಕ್ಷೇತ್ರದಲ್ಲಿ ಸ್ಫರ್ಧೆ ಮಾಡಿದಾಗ ಜನರು ನನಗೆ ಆಶೀರ್ವದಿಸಿದರು ಎಂದರು.