ಕನ್ನಡಪ್ರಭ ವಾರ್ತೆ ಶಿಕಾರಿಪುರ
ಬುಧವಾರ ಪಟ್ಟಣದ ಕನಕ ಉದ್ಯಾನವನ ಮುಂಭಾಗ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ವೋಟ್ ಚೋರ್ ಗದ್ಧಿ ಚೋಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ಗ್ರಂಥವಾಗಿದ್ದು, ಎಲ್ಲ ಜಾತಿ ಧರ್ಮದ ಜನತೆಯನ್ನು ಒಗ್ಗೂಡಿಸಿ ಕರೆದೊಯ್ಯುವ ಜತೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ನೀಡಿದೆ ಎಂದ ಅವರು, ಸಂವಿಧಾನದ ಮೂಲಕ ರಾಷ್ಟ್ರಪತಿ, ಪ್ರಧಾನಿ ಸಹಿತ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಚುನಾವಣೆಯಲ್ಲಿ ಒಂದು ಮತ ನೀಡುವ ಹಕ್ಕು ನೀಡಲಾಗಿದ್ದು, ಆ ಮೂಲಕ ಬಹುಜನರ ಅಪೇಕ್ಷೆಯ ವ್ಯಕ್ತಿಯನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಚುನಾವಣೆ ಮೂಲಕ ಮತದಾರರು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಚುನಾವಣಾ ಆಯೋಗದ ಮೂಲಕ ಬಿಜೆಪಿ ಕಸಿದುಕೊಳ್ಳುವ ಸಂಚು ರೂಪಿಸಿದ್ದು, ಈ ದಿಸೆಯಲ್ಲಿ ಮಹದೇವಪುರದಲ್ಲಿ ಲಕ್ಷಕ್ಕೂ ಅಧಿಕ ನಕಲಿ ಮತದಾರರ ಗುರುತಿನ ಪತ್ರದ ಮೂಲಕ ನಾಗರೀಕರ ಹಕ್ಕನ್ನು ಚ್ಯುತಿಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, 40 ಸಾವಿರ ಅಧಿಕ ಸುಳ್ಳು ವಿಳಾಸ ಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ಬೇಜವಾಬ್ದಾರಿತನದ ಉತ್ತರ ನೀಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಮಾತ್ರ ಸಂವಿಧಾನದ ಆಶಯ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದು, ಜನಸಾಮಾನ್ಯರು ಘನತೆ ಗೌರವದಿಂದ ಬದುಕಲು ತಳವರ್ಗದ ಜನತೆ ಐಎಎಸ್, ಕೆಎಎಸ್, ವೈದ್ಯಕೀಯ ಶಿಕ್ಷಣ ಪಡೆಯಲು ಸಾದ್ಯ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಎನ್.ಅರುಣ್ ಮಾತನಾಡಿ, 1983ರಲ್ಲಿ ಮತದಾನಕ್ಕೆ ತೆರಳಿದಾಗ ಮತ ಚಲಾವಣೆಯಾಗಿ ವಾಪಾಸ್ ಬಂದಿದ್ದು, ಇದೀಗ ಮತಗಳ್ಳತನದ ಅನುಮಾನ ದಟ್ಟವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯ ರವಿಕಿರಣ್, ಶ್ರೀಧರ ಕರ್ಕಿ, ಸುರೇಶ್ ಧಾರವಾಡ, ವಿಜಯಕುಮಾರ್, ರೇಣುಕಸ್ವಾಮಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಲೋಹಿತ್, ನಿರ್ದೇಶಕ ಕಾಂತೇಶ್, ಸುವರ್ಣಮ್ಮ, ಚೈತ್ರ, ಕೃಷ್ಣೋಜಿರಾವ್, ವಾಸುದೇವಾಚಾರ್, ಈಶಣ್ಣ ಕಲವತ್ತಿ, ಮಂಜು ಮತ್ತಿತರರು ಹಾಜರಿದ್ದರು.