ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಬುಧವಾರ ಹಮ್ಮಿಕೊಂಡ ತಿರಂಗಾ ಬೈಕ್ ರ್‍ಯಾಲಿ ದೇಶಭಕ್ತಿಯ ಜಯಘೋಷಗಳೊಂದಿಗೆ ಅದ್ಧೂರಿಯಾಗಿ ನಡೆಯಿತು.ನಗರದ ಬೀಳೂರ ಅಜ್ಜನ ದೇವಸ್ಥಾನದಲ್ಲಿ ಹಿಂದಿನ ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರು ಪತ್ರಕರ್ತರಿಗೆ ತಿರಂಗಾ ಧ್ವಜ ವಿತರಿಸಿ, ಬೈಕ್ ರ್‍ಯಾಲಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ಇದು ಎಲ್ಲ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನ ದೇಶಭಕ್ತಿಯ ಚೈತನ್ಯವನ್ನು ಬಲಪಡಿಸುವ ಜನಾಂದೋಲನವಾಗಿದೆ. ಈ ಅಭಿಯಾನವು ದೇಶದ 140 ಕೋಟಿ ನಾಗರಿಕರು ತಮ್ಮ ತ್ಯಾಗ, ತಪಸ್ಸು ಮತ್ತು ಸಮರ್ಪಣೆಯ ಮೂಲಕ ಅಸಂಖ್ಯಾತ ಹೋರಾಟಗಾರರು ಸಾಧಿಸಿದ ಸ್ವಾತಂತ್ರ್ಯ ಭಾರತವನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತಮಗೊಳಿಸಲು ದೃಢನಿಶ್ಚಯವನ್ನು ಪ್ರಧಾನಿ ಹೊಂದಿದ್ದಾರೆ ಎಂದರು.
ಬೈಕ್ ರ್‍ಯಾಲಿಯೂ ಬೀಳೂರ ಅಜ್ಜನ ದೇವಸ್ಥಾನದಿಂದ ಪ್ರಾರಂಭವಾಗಿ ಪಶುಆಸ್ಪತ್ರೆ, ಟಿಕೀನ ಮಠ, ಅಡತ್ ಬಜಾರ, ಪೊಲೀಸ್ ಚೌಕಿ, ಮಹಾತ್ಮಾ ಗಾಂಧಿ ರಸ್ತೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡಿತು.ಇದಕ್ಕೂ ಮುಂಚೆ ಬೀಳೂರ ಅಜ್ಜನ ದೇವಸ್ಥಾನದಲ್ಲಿ ಪತ್ರಕರ್ತರಿಗೆ ಧ್ವಜಗಳನ್ನು ವಿತರಿಸಲಾಯಿತು ಹಾಗೂ ಹಿಂದಿನ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆಯವರ ಮನೆ ಮೇಲೆ ತ್ರೀವರ್ಣ ಧ್ವಜ ಹಾರಿಸಲಾಯಿತು.
ಈ ಸಂದರ್ಭದಲ್ಲಿ ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಮಹೇಶ ಅಥಣಿ, ಗುರುಬಸವ ಸೂಳಿಭಾವಿ, ಗುಂಡುರಾವ ಶಿಂಧೆ, ಬಸವರಾಜ ಯಂಕಂಚಿ, ರಾಜು ನಾಯ್ಕರ, ನಗರಸಭೆ ಅಧ್ಯಕ್ಷೆ ಸವೀತಾ ಲಂಕೆನ್ನವರ್, ಉಪಾಧ್ಯಕ್ಷೆ ಶೋಭಾ ರಾವ, ಸದಸ್ಯರಾದ ಜ್ಯೋತಿ ಭಜಂತ್ರಿ, ಸರಸ್ವತಿ ಕುರಬರ, ಮಂಜುಳಾ ಮೀಸ್ಕೀನ, ರೇಖಾ ಕಲಬುರಗಿ, ಶಿವಲೀಲಾ ಪಟ್ಟಣಶೆಟ್ಟಿ, ಶಶಿಕಲಾ ಮಜ್ಜಗಿ, ಸುಜಾತಾ ಶಿಂಧೆ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ, ಸತ್ಯನಾರಾಯಣ ಹೇಮಾದ್ರಿ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೋಣ್ಣೂರ, ರಾಜು ಮುದೇನೂರ, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಮುತ್ತು ಸೀಮಿಕೇರಿ, ಮಂಜು ಗೌಡರ, ಮಲ್ಲಯ್ಯ ಹಿರೇಮಠ, ಬಸು ಲಮಾಣಿ, ಸುಭಾಸ ರಾಮೋಡಗಿ, ಆನಂದ ಕೊಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.