ಅಕ್ರಮ ಮಸೀದಿ ವಿರುದ್ಧ ಬಿಜೆಪಿ ಕಾನೂನು ಹೋರಾಟ: ಎಸ್.ಪಿ.ಸ್ವಾಮಿ

KannadaprabhaNewsNetwork |  
Published : Sep 12, 2025, 12:06 AM IST
ಅಕ್ರಮ ಮಸೀದಿ ವಿರುದ್ಧ ಬಿಜೆಪಿ ಕಾನೂನು ಹೋರಾಟ: ಎಸ್.ಪಿ.ಸ್ವಾಮಿ | Kannada Prabha

ಸಾರಾಂಶ

ಗಣೇಶೋತ್ಸವ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟಕ್ಕೆ ಶಾಂತಿಯುತ ಪ್ರತಿಭಟನೆ ಮೂಲಕ ಉತ್ತರ ಕೊಟ್ಟಿದ್ದೇವೆ. ಹಿಂದೂ ಧರ್ಮದ ಒಗ್ಗಟ್ಟು ತೋರಿಸಿದ್ದೇವೆ. ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಮಸೀದಿ ಕಟ್ಟಿದ್ದಾರೆ. ಮಸೀದಿಯಲ್ಲಿ ಕಲ್ಲು, ಕತ್ತಿಗಳನ್ನು ಇಟ್ಟುಕೊಂಡಿದ್ದಾರೆ. ಮಸೀದಿ ಮುಂದೆ ಹೋಗಲು ಹಿಂದು ಜನ ಭಯ ಪಡ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಮಸೀದಿ ವಿರುದ್ಧ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟು ವರ್ಷ ಇಲ್ಲದ ಮಸೀದಿ ಈಗ ಹೇಗೆ ಬಂತು? ಅದಕ್ಕೆ ಜಾಗ ಕೊಟ್ಟವರು ಯಾರು ಎಂಬೆಲ್ಲಾ ಮಾಹಿತಿಗಳೊಂದಿಗೆ ದಾಖಲೆಗಳನ್ನಿಟ್ಟುಕೊಂಡು ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಹೇಳಿದರು.

೫೦೦ ಮಂದಿ ಹಿಂದೂ ಕಾರ್ಯಕರ್ತರ ಮೇಲೆ ಎಫ್‌ಐಆರ್ ಆಗಿದೆ. ಇದರಿಂದ ಮೆರವಣಿಗೆಗೆ ಬರುವುದಕ್ಕೆ ಭಯಪಡುತ್ತಿದ್ದರು. ಯಾರು ನಮ್ಮ ರಕ್ಷಣೆಗೆ ಬರುವರೆಂದು ಪ್ರಶ್ನೆ ಮಾಡುತ್ತಿದ್ದರು. ಈಗ ಬಿಜೆಪಿಯ ಕಾನೂನು ಪ್ರಕೋಷ್ಠ ತಂಡ ಮದ್ದೂರಿಗೆ ಭೇಟಿ ಕೊಟ್ಟು ಭಯಪಟ್ಟಿದ್ದ ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ ಎಂದರು.

ಯಾವುದೇ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆದ ಸಮಯದಲ್ಲಿ ಧೈರ್ಯವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ. ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳಬೇಕು. ಹಿಂದೂ ಧರ್ಮ ಶಾಂತಿಯ ಸಂಕೇತ. ನಮ್ಮ ಧರ್ಮಕ್ಕೆ ಅನ್ಯಾಯ ಆದಾಗ ನಾವು ಹೋರಾಟ ಮಾಡಲೇಬೇಕು ಎಂದರು.

ಗಣೇಶೋತ್ಸವ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟಕ್ಕೆ ಶಾಂತಿಯುತ ಪ್ರತಿಭಟನೆ ಮೂಲಕ ಉತ್ತರ ಕೊಟ್ಟಿದ್ದೇವೆ. ಹಿಂದೂ ಧರ್ಮದ ಒಗ್ಗಟ್ಟು ತೋರಿಸಿದ್ದೇವೆ. ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಮಸೀದಿ ಕಟ್ಟಿದ್ದಾರೆ. ಮಸೀದಿಯಲ್ಲಿ ಕಲ್ಲು, ಕತ್ತಿಗಳನ್ನು ಇಟ್ಟುಕೊಂಡಿದ್ದಾರೆ. ಮಸೀದಿ ಮುಂದೆ ಹೋಗಲು ಹಿಂದು ಜನ ಭಯ ಪಡ್ತಿದ್ದಾರೆ. ಗಣೇಶ ಮೆರವಣಿಗೆ ಹೋಗಿದ್ದಕ್ಕೆ ಈ ಸಮಸ್ಯೆ ಉದ್ಬವವಾಗಿದೆ. ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರಚೋದನಕಾರಿ ಭಾಷಣ: ಲಾಠಿ ಏಟು ತಿಂದ ಜ್ಯೋತಿ ವಿರುದ್ಧ ಎಫ್‌ಐಆರ್

ಕನ್ನಡಪ್ರಭ ವಾರ್ತೆ ಮದ್ದೂರು

ಗಣೇಶನ ಗಲಾಟೆಯಲ್ಲಿ ಲಾಠಿ ಏಟು ತಿಂದ ಮಹಿಳೆ ಜ್ಯೋತಿ ವಿರುದ್ಧವೂ ಮದ್ದೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನೆ ಸಮಯದಲ್ಲಿ ಅವಹೇಳನಕಾರಿ ಹಾಗು ಪ್ರಚೋನಾದನಕಾರಿಯಾಗಿ ಘೋಷಣೆ ಕೂಗಿದ್ದಕ್ಕೆ ಮದ್ದೂರು ಠಾಣೆ ಇನ್ಸ್‌ಪೆಕ್ಟರ್ ಎಂ.ಶಿವಕುಮಾರ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.

ಸೆ.೮ ರಂದು ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ವೇಳೆ ಶಿವಪುರ ನಿವಾಸಿ ಜ್ಯೋತಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಮೆರವಣಿಗೆ ವೇಳೆ ಪ್ರಚೋದನಕಾರಿಯಾಗಿ ಮುಸ್ಲಿಂ ಸಮುದಾಯದ ವಿರುದ್ಧ ಜ್ಯೋತಿ ಘೋಷಣೆ ಕೂಗಿದ್ದಲ್ಲದ್ದೆ, ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಮುಖ್ಯಮಂತ್ರಿ ವಿರುದ್ಧವೂ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಅನ್ಯಧರ್ಮಕ್ಕೆ ಧಕ್ಕೆಯಾಗುವ ಪದ ಬಳಕೆ. ಪರಸ್ಪರ ಕೋಮುಗಳ ನಡುವೆ ವೈಮನಸ್ಸು, ವೈರತ್ವ ಉತ್ತೇಜನ ನೀಡುವ ಆರೋಪದಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.. ಜ್ಯೋತಿ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗಿತ್ತು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ