ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲವೊಮ್ಮೆ ಎಮೋಷನಲಿ ಇಂತಹ ಘಟನೆಗಳು ಆಗುತ್ತದೆ.
ಬೇರೆ ಘಟನೆ ಉದಾಹರಣೆ ಕೊಟ್ಟು ಈ ಘಟನೆ ಸಮರ್ಥಿಸಿಕೊಳ್ಳಲ್ಲ. ಆದರೆ, 11ಜನರ ಸಾವು ನಮ್ಮೆಲ್ಲರಿಗೂ ನೋವು ತಂದಿದೆ. ನಾವು ಏನೇ ಮಾಡಿದ್ರು, ಕುಟುಂಬಗಳಿಗೆ ಅವರ ಮಕ್ಕಳು ತಂದು ಕೊಡಲು ಆಗಲ್ಲ. ಎಲ್ಲಿ ಎಡವಿದ್ವಿ? ಯಾವ ತೀರ್ಮಾನದಲ್ಲಿ ತಪ್ಪಾಗಿದೆ ಅನ್ನೋದು ಒಂದು ಕಡೆ. ಪೊಲೀಸ್ ಇಲಾಖೆ ಸರ್ಕಾರಕ್ಕೆ ಕೆಲವು ಮಾಹಿತಿ ಕೊಡುವುದರಲ್ಲಿ ವಿಫಲವಾಗಿದೆ ಅದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಕ್ಯಾಬಿನೆಟ್‌ನಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ ಅಮಾನತು ತೀರ್ಮಾನ ಮಾಡಲಾಗಿದೆ. ಪೊಲೀಸರು ಕೆಟ್ಟವರಲ್ಲ, ಒಳ್ಳೆಯ ಕೆಲಸ ಮಾಡಿದ್ದವರೇ. ಈ ಘಟನೆ ಎಲ್ಲರಿಗೂ ನೋವು ತಂದಿದೆ. ಅಮಾನುತುಗೊಳಿಸುವುದೇ ಅಂತಿಮ ಪರಿಹಾರವಲ್ಲ. ಹಾಗಂತ ಯಾರನ್ನು ಸರಿ ಎನ್ನುವ ಪ್ರಶ್ನೆಯೂ ಇಲ್ಲ. ಇಂತಹ ಸಾವು-ನೋವಲ್ಲ ರಾಜಕಾರಣ ಮಾಡುವವರಿಗೆ ಏನು ಹೇಳಲು ಆಗುತ್ತದೆ. ದೇವರು ಅವರಿಗೆ ಒಳ್ಳೆ ಬುದ್ದಿ ಕೊಡಲಿ ಎಂದು ನುಡಿದರು.
ಈ ಸಂಧರ್ಭದಲ್ಲಿ ಟೀಕೆಗೆ ಟೀಕೆಗೆ ಉತ್ತರವಲ್ಲ. ನಮ್ಮ ಸರ್ಕಾರದ ಬಂದಾಗಿನಿಂದಲೂ ಅವರಿಗೆ ಸಮಾಧಾನ ಇಲ್ಲ. ಕೂತರೇ ನಿಂತರೇ ರಾಜೀನಾಮೆ ಕೇಳುತ್ತಾರೆ. ಜನ ಆಯ್ಕೆ ಮಾಡಿದ್ದಾರೆ, ಅಧಿಕಾರ ಮಾಡುತ್ತಿದ್ದೇವೆ. ಅವರಿಗೆ ಜನರ ಆಯ್ಕೆಯನ್ನು ಗೌರವಿಸುವ ಬುದ್ದಿಯಿಲ್ಲ ಎಂದು ಕಟುವಾಗಿ ಹೇಳಿದರು.