ಬಿಜೆಪಿಯಿಂದ ಕಲಬುರಗಿಯಲ್ಲಿಂದು ತಿರಂಗಾ ಯಾತ್ರೆ

KannadaprabhaNewsNetwork | Published : May 17, 2025 1:20 AM
ಫೋಟೋ- ಆಂದೋಲಾರಾಷ್ಟ್ರರಕ್ಷಣೆಗಾಗಿ ನಾಗರಿಕರು ಸಂಘಟನೆಯ ಪರವಾಗಿ ಪಾಳಾ ಗುರೂಮೂರ್ತಿ ಶಿವಾಚಾರ್ಯರು, ಆಂದಲಾ ಸಿದ್ಲಿಂಗ ಸ್ವಾಮೀಜಿ, ಕಡಗಂಚಿ ಗುರುಗಳು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಕಲಬುರಗಿ: ಇಲ್ಲಿನ ಬಿಜೆಪಿ ಜಿಲ್ಲಾ ಘಟಕ ರಾಷ್ಟ್ರ ರಕ್ಷಣೆಗಾಗಿ ತಿರಂಗಾ ಯಾತ್ರೆ ಎಂಬ ಧ್ಯೇಯದೊಂದಿಗೆ ಇದೇ ಮೇ 17 ರಂದು ನಗರದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ.

ಕಲಬುರಗಿ: ಇಲ್ಲಿನ ಬಿಜೆಪಿ ಜಿಲ್ಲಾ ಘಟಕ ರಾಷ್ಟ್ರ ರಕ್ಷಣೆಗಾಗಿ ತಿರಂಗಾ ಯಾತ್ರೆ ಎಂಬ ಧ್ಯೇಯದೊಂದಿಗೆ ಇದೇ ಮೇ 17 ರಂದು ನಗರದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮುಖಂಡರಾದ ಅಮರನಾಥ ಪಾಟೀಲ್‌, ಶಾಸಕ ಅವಿನಾಶ ಜಾಧವ್‌ , ಬಸವರಾಜ, ಈ ಯಾತ್ರೆಯೂ ಮೇ.7 ರಂದು ಸಂಜೆ 4 ಗಂಟೆಗೆ ನಗರೇಶ್ವರ ಶಾಲಾ ಮೈದಾನದಿಂದ ಶುರುವಾಗಲಿದೆ. ಸೈನಿಕರ ಕುಟುಬಂದವರು, ರೈತರು, ವೈದ್ಯರು, ವಕೀಲರು ಸೇರಿದಂತೆ ಸಮಾಜದ ಎಲ್ಲರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಇದಲ್ಲದೆಯೇ ಮಾರ್ವಾಡಿ ಸಂಘ, ಜೈನ ಸಮಾಜ ಸಂಘಟನೆಗಳು, ಘಟನೆ, ವಿಪ್ರ ಸಂಘಟನೆಗಳು, ವೀರಶೈವ ಲಿಂಗಾಯಿತ ಸಂಘಟನೆಗಳು ಸೇರಿದಂತೆ ಅನೇಕರು ಪಾಲ್ಗೊಳ್ಳುತ್ತಿದ್ದಾರೆ. ಸೇನೆಯೊಂದಿಗೆ ನಾವು, ಆಪರೇಷನ್‌ ಸಂದೂರ ಜೊತೆ ನಾವಿದ್ದೇವೆಂಬ ಘೋಷಣೆಗಳು, ಬ್ಯಾನರ್‌ಗಳಿರುತ್ತವೆ ಎಂದು ತಿಳಿಸಿದರು.ಸಂಜೆ 4 ಗಂಟೆಗೆ ನಗರೇಶ್ವರ ಶಾಲೆಯಿಂದ ಶುರುವಾಗುವ ತಿರಂಗಾ ಯಾತ್ರೆ ಜಗತ್‌ ವೃತ್ತದಲ್ಲಿ ಸಂಪನ್ನಗೊಳ್ಳಲಿದೆ. ಯಾತ್ರೆ ಉದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡು ಶಿಸ್ತು, ದೇಶಪ್ರೇಮ ಪ್ರದರ್ಶಿಸಲು ಇದು ಉತ್ತಮ ವೇದಿಕೆ ಎಂದು ಹೇಳಿದರು.

ಸ್ವಾಮೀಜಿಗಳಿಂದಲೂ ತಿರಂಗಾ ಯಾತ್ರೆರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಸಂಘಟನೆಯಡಿಯಲ್ಲಿ ಜಿಲ್ಲೆಯ ಮಠಾಧೀಶರುಗಳೂ ಸಹ ಮೇ.17 ರಂದೇ ತಿರಂಗಾ ಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯೂ ನಗರಶ್ವರ ಶಾಲೆಯಿಂದಲೇ ಸಂಜೆ 4 ಗಂಟೆಗೆ ಶುರುವಾಗಿ ಜಗತ್‌ ವೃತ್ತದಲ್ಲಿ ಕೊನೆಯಾಗಲಿದೆ ಎಂದು ಕಡಗಂಚಿ ಶಾಂತಲಿಂಗೇಶ್ವರ ಮಠದ ವೀರಭದ್ರ ಶಿವಾಚಾರ್ಯರು, ಪಾಳಾ ಗುರುಮೂರ್ತಿ ಶಿವಾಚಾರ್ಯರು, ಆಂದೋಲಾ ಸಿದ್ದಲಿಂಗ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಪಾಕ್‌ ಪೋಷಿತ ಉಗ್ರರು ಧರ್ಮ ಕೇಳಿ ಹಿಂದುಗಳ ನರಮೇಧ ಮಾಡಿರೋದು ಖಂಡನೀಯ. ಅದಕ್ಕೆ ಪ್ರತೀಕಾರವಾಗಿ ನಡೆದ ಆಪರೇಷನ್‌ ಸಿಂದೂರ್‌ ಯಶ ಕಂಡಿದೆ. ರಾಷ್ಟ್ರ, ಸೈನ್ಯದ ಜೊತೆಗೆ ನಾವಿದ್ದೇವೆಂಬ ಸಂದೇಶ ರವಾನಿಸಲು ರಾಷ್ಟ್ರಕ್ಕಾಗಿ ನಾವು ನಾಗರಿಕರು ಎಂದು ಸಾರಿ ಹೇಳಲು ಈ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದರು.ಪೆಹಲ್ಗಾಂ ನರಮೇಧಕ್ಕೆ ಪ್ರತಿಕಾರವಾಗಿ ಭಾರತ ಉಗ್ರರನ್ನು ಕೊಂದಿರುವ ರೀತಿಗೆ ಇಡೀ ವಿಶ್ವವೇ ಬೆರಗಾಗಿ ನೋಡುವಂತಾಗಿದೆ. ಆಪರೇಷನ್ ಸಿಂದೂರ್‌ ಭಾರತೀಯ ವೀರ ಸೈನಿಕರ ಶೌರ್ಯಕ್ಕೆ ಹಿಡಿದ ಕನ್ನಡಿ. ಸೈನಿಕರೊದಗೆ ನಾವು ದೇಶವಾಸಿಗಳು ಎಂದೆಂದೂ ಇದ್ದೇವೆಂಬ ಸಂದೇಶ ಸಾರುವುದೇ ತಿರಂಗಾ ಯಾತ್ರೆಯ ಹಿಂದಿನ ಗುರಿ ಎಂದು ಆಂದೋಲಾ ಶ್ರೀಗಳು ತಿಳಿಸಿದರು.ದೇಶಭಕ್ತರು, ಸೈನಿಕರ ಪರಿವಾರದವರು, ನಿವೃತ್ತ ಸೈನಿಕರು, ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಯುವ ಮುಖಂಡರಾದ ಶಿವರಾಜ ಸಂಗೊಳಗಿ, ಶ್ರೀಮಮಂತ ನಲವದಿ, ನಾಗಯ್ಯಸ್ವಾಮಿ, ಪ್ರಸಾಂತ ಗುಡ್ಡಾ, ಅಶ್ವಿನ ಕುಮಾರ್‌, ಅನೀಲ ಶಿನ್ನೂರಕರ್‌ ಮತ್ತಿತರರಿದ್ದರು.

,