ಬಿಜೆಪಿಯವರು ಮಂತ್ರಾಕ್ಷತೆ ಕೊಡುವುದನ್ನು ಬಿಟ್ಟು ಹಸಿದ ಹೊಟ್ಟೆಗೆ ಅಕ್ಕಿ ಕೊಡಲಿ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork |  
Published : Jan 14, 2024, 01:30 AM IST
ಸಚಿವ ಶಿವರಾಜ್ ತಂಗಡಗಿ | Kannada Prabha

ಸಾರಾಂಶ

ಕೊಪ್ಪಳ ಲೋಕಸಭೆ ಕ್ಷೇತ್ರ ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗಾಗಲೇ ಉಸ್ತುವಾರಿ ಸಚಿವರ, ಶಾಸಕರ ಮತ್ತು ಜಿಲ್ಲೆಯ ಬ್ಲಾಕ್ ಅಧ್ಯಕ್ಷರ ಸಭೆಯನ್ನು ಹೈಕಮಾಂಡ್ ಮಾಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ೨೦ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ.

ಕಾರಟಗಿ: ರಾಮ ಮತ್ತು ರಾಮಮಂದಿರವನ್ನು ಬಿಜೆಪಿ ಗುತ್ತಿಗೆ ಪಡೆದು ಸ್ವಂತ ಆಸ್ತಿ ಎಂದುಕೊಂಡಿದೆ. ಮಂದಿರ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುವುದನ್ನು ಬಿಟ್ಟು ಹಸಿದ ಬಡವರಿಗೆ ಅಕ್ಕಿ ಕೊಡಲಿ. ಆದರೆ ಮಂತ್ರಾಕ್ಷತೆ ಹಂಚಿ ಪಕ್ಷದ ಪ್ರಚಾರ ಮಾಡುವುದಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.ಶನಿವಾರ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ನಾನು ರಾಮನ ಭಕ್ತ, ನಾವು ಸಹ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇವೆ. ಎಲ್ಲರೂ ದೇಣಿಗೆ ನೀಡಿದ್ದಾರೆ. ಆದರೆ, ಎಷ್ಟು ಜನ ಬಿಜೆಪಿಯವರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ? ಎಂದು ಪ್ರಶ್ನಿಸಿದರು.ರಾಮಮಂದಿರ ಬಿಜೆಪಿಯವರ ಸ್ವಂತದ್ದು ಎಂದು ಬಿಂಬಿಸುತ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರ ಬಡವರಿಗೆ ಅನ್ನ ಕೊಡಲಿ. ನಮ್ಮ ಸರ್ಕಾರ ಕೇಂದ್ರಕ್ಕೆ ೫ ಕೆಜಿ ಅಕ್ಕಿ ಪೂರೈಸಿ ಎಂದು ಮನವಿ ಮಾಡಿದ್ದೆವು. ಪೂರೈಸುವ ಅಕ್ಕಿಗೆ ಹಣ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಆಗ ಅಕ್ಕಿ ಕೊಡಲಿಲ್ಲ. ಆ ಅಕ್ಕಿ ಪರವಾಗಿ ರಾಜ್ಯ ಸರ್ಕಾರ ಜನರಿಗೆ ಹಣ ನೀಡುತ್ತಿದೆ. ಈಗ ರಾಮಮಂದಿರದ ಹೆಸರಿನಲ್ಲಿ ಮಂತ್ರಾಕ್ಷತೆ ಹಂಚುತ್ತಿದೆ. ಬಡವರಿಗೆ ಹಸಿವಿದ್ದ ಜನರಿಗೆ ಅನ್ನ ಕೊಡುವ ಕೆಲಸವನ್ನು ಮೊದಲು ಕೇಂದ್ರ ಸರ್ಕಾರ ಮಾಡಲಿ ಎಂದರು.ರಾಮಮಂದಿರಕ್ಕೆ ನಾವು ವಿರೋಧ ಮಾಡುತ್ತಿಲ್ಲ. ಆಂಜನೇಯ ನಮ್ಮವ, ಶ್ರೀರಾಮನೂ ನಮ್ಮವ. ಅಯೋಧ್ಯೆಯಲ್ಲಿ ಮೊದಲು ರಾಮಮಂದಿರಕ್ಕಾಗಿ ಬಾಗಿಲು ತೆರೆಸಿದ್ದು ರಾಜೀವಗಾಂಧಿ. ನರೇಂದ್ರ ಮೋದಿನಾ? ಅಡ್ವಾಣಿನಾ? ಏನೂ ಅಮಿತ್ ಶಾ ನಾ? ಎಂದು ಪ್ರಶ್ನಿಸಿದರು.ಹೈಕಮಾಂಡ್ ನಿರ್ಧಾರ: ಕೊಪ್ಪಳ ಲೋಕಸಭೆ ಕ್ಷೇತ್ರ ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗಾಗಲೇ ಉಸ್ತುವಾರಿ ಸಚಿವರ, ಶಾಸಕರ ಮತ್ತು ಜಿಲ್ಲೆಯ ಬ್ಲಾಕ್ ಅಧ್ಯಕ್ಷರ ಸಭೆಯನ್ನು ಹೈಕಮಾಂಡ್ ಮಾಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ೨೦ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಸಂಘಗಳ ಬಲವರ್ಧನೆಗೆ ವಿಮೆ ಅನಿವಾರ್ಯ
ಕವಿಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ: ಎ.ಎಂ. ಕಂಬಾರ