ಬ್ಲಾಕ್‌ಮೇಲ್ ರಾಜಕೀಯಕ್ಕೆ ನಾನು ಹೆದರಲ್ಲ । ಜಿ.ದೇವರಾಜೇಗೌಡ ಹೇಳಿಕೆಗಳಿಗೆ ಎಚ್ಚರಿಕೆಕನ್ನಡಪ್ರಭ ವಾರ್ತೆ ಹಾಸನ
‘ನನ್ನನ್ನು ಮುಗಿಸುವ ಪ್ಲಾನ್ ಮಾಡಲಾಗಿದ್ದರೂ ನಾವು ಯಾವುದಕ್ಕೂ ಹೆದರಲಿಲ್ಲ. ಹಾಗಾಗಿ ನನ್ನ ಬೆಂಬಲಿಗರನ್ನು ಟಾರ್ಗೆಟ್ ಮಾಡಿಕೊಂಡು ಕೊಲೆ ಮಾಡುವ ಮೂಲಕ ನನ್ನನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ನಾನು ಇಂಥಾ ಬ್ಲಾಕ್‌ಮೇಲ್ ರಾಜಕಾರಣಕ್ಕೆ ಹೆದರುವುದಿಲ್ಲ. ಅವರಿಗೆಲ್ಲಾ ಕಾನೂನು ಮೂಲಕವೇ ತಕ್ಕ ಉತ್ತರ ನೀಡುತ್ತೇನೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.‘ನನ್ನ ಬೆಂಬಲಿಗರನ್ನು ಟಾರ್ಗೆಟ್ ಮಾಡಿಕೊಂಡು ಕೊಲೆ ಮಾಡುವ ಮೂಲಕ ನನ್ನನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ನಾನು ಇಂಥಾ ಬ್ಲಾಕ್‌ಮೇಲ್ ರಾಜಕಾರಣಕ್ಕೆ ಹೆದರುವುದಿಲ್ಲ. ಅವರಿಗೆಲ್ಲಾ ಕಾನೂನು ಮೂಲಕವೇ ತಕ್ಕ ಉತ್ತರ ನೀಡುತ್ತೇನೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಹಾಸನದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು,
ನಗರದ ಸಂಸದರ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕೆಲವರು ನನ್ನನ್ನು ಮುಗಿಸಬೇಕು ಎನ್ನುವ ಪ್ಲಾನ್ ನಡೆಸಿದ್ದರು. ಇದಕ್ಕೆಲ್ಲ ಹೆದರಿಕೊಳ್ಳುವುದಿಲ್ಲ. ಅವರು ಊರು ಬಿಟ್ಟಿರುವವರು. ಹಿಂದಿನಿಂದ ರಾಜಕಾರಣಿಗಳು ಬೆಂಬಲ ಕೊಡುತ್ತಿದ್ದು, ಕೆಲ ರಾಜಕಾರಣಿಗಳು ದೇವೇಗೌಡರ ಕುಟುಂಬ ಎದುರಿಸಲಿಕ್ಕೆ ಆಗದವರು ಬ್ಲಾಕ್‌ಮೆಲ್ ನಲ್ಲಿ ತೊಡಗಿದ್ದಾರೆ. ಕಾನೂನು ಪ್ರಕಾರ ಅವರನ್ನು ಎದುರಿಸುತ್ತೇನೆ’ ಎಚ್ಚರಿಸಿದರು.‘ಚುನಾವಣೆಗೆ ನನ್ನ ಮಗನನ್ನೆ ನಿಲ್ಲಿಸಬೇಕು ಎಂದು ಹೇಳಿಲ್ಲ. ದೇವೆಗೌಡರು, ಕುಮಾರಸ್ವಾಮಿ ಬಂದ್ರೂ ಓಕೆ, ನನ್ನ ಮಗನೇ ನಿಲ್ಲಬೇಕು ಎಂದು ನಾ ಹೇಳಲ್ಲ. ಹಾಸನ ಫ್ಲೈಓವರ್, ಹಾಸನ ಚಿಕ್ಕಮಗಳೂರು ರೈಲ್ವೆ ಯೋಜನೆ ಮಾಡಿಸಿದ್ದು ಪ್ರಜ್ವಲ್ ಅಲ್ವಾ. ಯಡೇಗೌಡರನಹಳ್ಳಿ ನಾಲ್ಕು ಪಥ ಮಾಡಿದ್ದು ಯಾರು? ಜಿಲ್ಲೆಯಲ್ಲಿ ಏನೂ ಕೆಲಸ ಎಂದು ಮುಂದೆ ಹೇಳುವೆ. ಇವತ್ತು ಯಾರಿಗೆ ಏನು ಬೇಕಾದ್ರೂ ಬ್ಲಾಕ್‌ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ, ಬ್ಲಾಕ್‌ಮೇಲ್ ಗೆ ಹೆದರಲ್ಲ. ೪೦ ವರ್ಷ ರಾಜಕಾರಣ ಮಾಡಿದ್ದೇವೆ. ಕೆಲವರ ಆರೋಪಕ್ಕೆ ಅಪ ಪ್ರಚಾರಕ್ಕೆ ಕಾನೂನು ರೀತಿ ಉತ್ತರ ಕೊಡುವೆ. ವ್ಯಕ್ತಿತ್ವ ಇಲ್ಲದವರಿಗೆ ನಾನು ಉತ್ತರ ಕೊಡಲ್ಲ. ಕೆಲವರ ಬಳಿ ಬ್ಲಾಕ್ ಮೇಲೆ ಮಾಡಿ ಸಕ್ಸಸ್ ಆಗಿರಬಹುದು, ನನ್ನ ಬಳಿ ಆಗಲ್ಲ’ ಎಂದು ಪರೋಕ್ಷವಾಗಿ ವಕೀಲ ದೇವರಾಜೇಗೌಡಗೆ ಎಚ್ಚರಿಕೆ ನೀಡಿದರು.
‘ನಾನು ಯಾವುದೇ ತನಿಖೆಗೂ ಸಿದ್ಧ . ನಮ್ಮ ಕುಟುಂಬ ತಪ್ಪು ಮಾಡಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ತೋರಿಸಲಿ. ನಾನೇನು ಎಂದು ತೋರಿಸುವೆ. ಇಂತವರನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರಲ್ಲ’ ಎಂದು ಅಸಮಾಧಾನ ಹೊರಹಾಕಿದರು.ಚುಣಾವಣೆ ಗೆಲ್ಲಲು ಕಾಂಗ್ರೆಸ್ ಆಶ್ವಾಸನೆ:
‘ಎಂಟು ಜಿಲ್ಲೆಯ ಕೊಬ್ಬರಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಈಗಿನ ರಾಜ್ಯ ಸರ್ಕಾರ ನಾವು ಅಧಿಕಾರಕ್ಕೆ ಬಂದರೆ ೧೫ ಸಾವಿರ ರು. ಕೊಡುತ್ತೇವೆ ಎಂದಿದ್ದರು. ಈ ಬಗ್ಗೆ ನಾವು ವಿಧಾನ ಸಭೆಯಲ್ಲಿ ಹೋರಾಟ ಮಾಡಿದ್ದೆವು. ಕಾಂಗ್ರೆಸ್ ಮುಖಂಡರು ಯಾವ ಹೋರಾಟ ಮಾಡಲಿಲ್ಲ. ಚುನಾವಣೆ ಗೆಲ್ಲಲು ಆ ವೇಳೆ ಆಶ್ವಾಸನೆ ನೀಡಿ ಈಗ ಮಾತು ತಪ್ಪಿದ್ದಾರೆ’ ಎಂದು ಟೀಕಿಸಿದರು.‘ಕಾಂಗ್ರೆಸ್‌ನವರಿಗೆ ಚುನಾವಣೆ ಗೆಲುವು ಮುಖ್ಯವಾಗಿದೆ ಅಷ್ಟೆ. ಬೆಳೆ ಪರಿಹಾರ ಕೂಡಲೇ ಕೊಡಬೇಕು ಎಷ್ಟು ಕೊಡುತ್ತೀರೋ ಕೊಡಿ. ನೀವೇ ಹೇಳಿದಂತೆ ಕನಿಷ್ಠ ೧೫ ಸಾವಿರ ರು. ಕೊಡಿ, ಇಲ್ಲವೇ ರೈತರ ಕ್ಷಮೆ ಕೇಳಿ. ಕೊಬ್ಬರಿ ಖರೀದಿ ಕನಿಷ್ಠ ಆರು ತಿಂಗಳು ಮುಂದುವರಿಸಬೇಕು. ಕೊಬ್ಬರಿಗೆ ಬೆಂಬಲ ಬೆಲೆ ದೇವೇಗೌಡರ ಪ್ರಯತ್ನದಿಂದ ಆಗಿದೆ. ಕಾವೇರಿ ಬಗ್ಗೆ ನಿನ್ನೆಯೂ ೫೦ ನಿಮಿಷ ಮಾತಾಡಿದ್ದಾರೆ. ರಾಜ್ಯದ ಹಿತ ಕಾಯಲು ಸದಾ ಚಿಂತಿಸುತ್ತಿದ್ದಾರೆ. ನಾನು ೨೫ ವರ್ಷದಿಂದ ಸರ್ಕಾರಕ್ಕೆ, ಬಡವರಿಗೆ ಅನ್ಯಾಯ ಮಾಡಿದ್ರೆ ಹೇಳಲಿ. ಯಾವುದೇ ತನಿಖೆ ಮಾಡಿಸಲಿ’ ಎಂದು ಸವಾಲು ಹಾಕಿದರು. ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ.