- ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಗೆ ಟೀಕಿಸುವುದೇ ಕಾಯಕ: ಡಿ.ಬಸವರಾಜ ಆಕ್ರೋಶ - - -
ಲೋಕಸಭೆ ಪ್ರತಿಪಕ್ಷ ನಾಯಕ, ಎಐಸಿಸಿ ಪ್ರಮುಖ ನಾಯಕ ರಾಹುಲ್ ಗಾಂಧಿ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನಾಲಾಯಕ್ ರಾಜಕಾರಣಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿತ್ಯವೂ ಮಾಧ್ಯಮಗಳಲ್ಲಿ ಕುಳಿತು ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಬಗ್ಗೆ ಸುಳ್ಳು ಹೇಳುವುದು, ಮಿಥ್ಯಾರೋಪಗಳ ಮಾಡುವುದೇ ಸಂಬಿತ್ ಪಾತ್ರ ಕಾಯಕವಾಗಿದೆ. ದೇಶದಲ್ಲಿ 4 ಸಾವಿರ ಕಿಮೀಗೂ ಅಧಿಕ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡ ರಾಹುಲ್ ಗಾಂಧಿ ನಿರುದ್ಯೋಗ, ಮಹಿಳಾ ದೌರ್ಜನ್ಯ ಮತ್ತು ರೈತರ ಸಮಸ್ಯೆಗಳ ಬಗ್ಗೆ ಪ್ರಶ್ನಿಸುತ್ತಿರುವ ದೇಶದ ಏಕೈಕ ನಾಯಕರಾಗಿದ್ದಾರೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಲೋಕಸಭೆ ಒಳಗೆ, ಹೊರಗೆ ರಾಹುಲ್ ಗಾಂಧಿ ಪ್ರಶ್ನಿಸಿದರೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ಆದರೆ, ಉತ್ತರ ಕೊಡಲಾಗದ ಮೋದಿ, ಅಮಿತ್ ಶಾ ಇಂತಹ ವಕ್ತಾರರನ್ನು ಮುಂದೆ ಬಿಟ್ಟು, ರಾಹುಲ್ ಗಾಂಧಿ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ನರೇಂದ್ರ ಮೋದಿ, ಅಮಿತ್ ಶಾ ಮಾತು ಕೇಳಿ ದೇಶದ ಚುನಾವಣಾ ವ್ಯವಸ್ಥೆಯನ್ನೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಕ್ಷಣೆಗಾಗಿ ದೆಹಲಿಯಲ್ಲಿ ಮೆಟ್ರೋ ರೈಲು ನಿಲ್ದಾಣ ಬಂದ್ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರ ಮೇಲೆ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಸಾರ್ವಜನಿಕ ಸಾರಿಗೆಗೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲವೆಂಬ ಸೂಚನೆ ನೀಡಿದ್ದರೂ ನ್ಯಾಯಾಲಯದ ಮಾರ್ಗಸೂಚಿ ಉಲ್ಲಂಘಿಸಿದ ಮೋದಿ ಸರ್ಕಾರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಿ ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಎಸ್.ಎಸ್.ಗಿರೀಶ, ಟಿ.ಕೆ.ನಾಗರಾಜ, ಡಿ.ಎಸ್.ಸುರೇಶ, ಡಿ.ಶಿವಕುಮಾರ ಎಂ.ಕೆ.ಲಿಯಾಖತ್ ಅಲಿ ಇತರರು ಇದ್ದರು.
(ಬಾಕ್ಸ್)
ದಾವಣಗೆರೆ: ಕಾಂಗ್ರೆಸ್ ಪಕ್ಷದ ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿಯಾಗಿದ್ದೆ. ಅಂತಿಮ ಹಂತದವರೆಗೂ ನನ್ನ ಹೆಸರೂ ಚರ್ಚೆಗೆ ಬಂದಿತ್ತಾದರೂ, ಅಲ್ಪಸಂಖ್ಯಾತರಿಗೆ ಪಕ್ಷದಿಂದ ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸ್ಪಷ್ಚಪಡಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ನಮ್ಮ ಪಕ್ಷದ ಮತ ಬ್ಯಾಂಕ್, ಯಾವುದೇ ಚುನಾವಣೆ ನಾವು ಗೆಲ್ಲಬೇಕೆಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು, ಮಹಿಳೆಯರು ಪಕ್ಷದ ಬ್ಯಾಕ್ ಬೋನ್ ಇದ್ದಂತೆ. ಪಕ್ಷದಲ್ಲಿ ಅಂತಹವರಿಗೆ ಸ್ಥಾನಮಾನ ನೀಡಬೇಕೆಂಬ ನಿಲುವಿದೆ. ಹಾಗಾಗಿ, ಇಬ್ರಾಹಿಂ ಖಲೀಲುಲ್ಲಾ ತಮ್ಮ ಮೂಲಗಳಿಂದ ಪ್ರಯತ್ನಪಟ್ಟಿ ಆಗಿದ್ದಾರೆ. ಯುವ ಕಾಂಗ್ರೆಸ್‌ನಿಂದಲೂ ಕೊಟ್ಟ ಕೆಲಸ ಮಾಡಿದ್ದು, ಒಳ್ಳೆಯ ಕೆಲಸಗಾರನಿಗೆ ಮಾಡಿದ್ದನ್ನು ಸ್ವಾಗತಿಸಬೇಕು. ಹೈಕಮಾಂಡ್ ಆದೇಶವನ್ನು ತಲೆಬಾಗಿ ಸ್ವೀಕರಿಸುತ್ತೇವೆ ಎಂದು ಡಿ.ಬಸವರಾಜ ಹೇಳಿದರು.
(ಕೋಟ್)
- ಡಿ.ಬಸವರಾಜ, ಪ್ರಧಾನ ಕಾರ್ಯರ್ಶಿ, ಕೆಪಿಸಿಸಿ.
- - --11ಕೆಡಿವಿಜಿ1: ದಾವಣಗೆರೆಯಲ್ಲಿ ಭಾನುವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.