ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Feb 22, 2024, 01:48 AM IST
ಸಿಕೆಬಿ-4 ನಗರದ ರೇಷ್ಮೆ ಗೂಡು ಮಾರ್ಕೆಟ್ ಬಳಿ ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೆನಹಳ್ಳಿ ಮುರುಳಿ ಚಾಲನೆ ನೀಡಿದರು | Kannada Prabha

ಸಾರಾಂಶ

ವಿಕಸಿತ ಭಾರತದ ಸಂಕಲ್ಪದ ಮೂಲಕ ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪಿಸಲಾಗುತ್ತಿದೆ. ಮೋದಿ ಯವರ ಕೊಡುಗೆ, ಸಾಧನೆಗಳು ಗೊತ್ತಿರುವ ಕಾರಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಅಪೇಕ್ಷಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2047ಕ್ಕೆ ವಿಕಸಿತ ಭಾರತದ ಸಂಕಲ್ಪವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಅದನ್ನು ಈಡೇರಿಸಲು ಮೋದಿ ಸಂಕಲ್ಪಕ್ಕೆ ಜನತೆ ಭಾರಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಡೆನಹಳ್ಳಿ ಮುರುಳಿ ತಿಳಿಸಿದರು.

ಭಾರತೀಯ ಜನತಾ ಪಾರ್ಟಿ ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ ಬಿಜೆಪಿ ನಗರ ಮಂಡಲದ ವತಿಯಿಂದ ನಗರದ ರೇಷ್ಮೆ ಗೂಡು ಮಾರ್ಕೆಟ್ ಬಳಿ ಇರುವ ವಾರ್ಡ್ ನಂಬರ್ 01 ಹಾಗೂ ವಾರ್ಡ್ ನಂಬರ್ 24 ರಲ್ಲಿ ಬುಧವಾರ ಬಿಜೆಪಿ ಚಿಹ್ನೆಯ ಕಮಲ ಚಿತ್ರ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ,

ಯೋಜನೆಗಳು ಜನರಿಗೆ ತಲುಪಬೇಕು

ವಿಕಸಿತ ಭಾರತದ ಸಂಕಲ್ಪದ ಮೂಲಕ ಮೋದಿ ಅವರ ಜನಪರ ಯೋಜನೆಗಳು ಜನರನ್ನು ತಲುಪುತ್ತಿವೆ. ರಾಜ್ಯದ ಜನತೆ ಕೂಡಾ ಬಿಜೆಪಿ ಮತ್ತು ಮೋದಿ ಅವರ ಮೇಲಿನ ಗೌರವದಿಂದ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಆರ್. ಎನ್.ಅಶೋಕ್ ಮಾತನಾಡಿ, ಪ್ರಧಾನಿ ಮೋದಿಯವರ ವಿಕಸಿತ ಭಾರತದ ಸಂಕಲ್ಪಕ್ಕೆ ಜನರಿಂದ ಭಾರೀ ಬೆಂಬಲ ಸಿಕ್ಕಿದೆ. ಅದೇ ರೀತಿ ಅಭಿಯಾನಕ್ಕೂ ಸಹಕಾರ ಲಭಿಸುತ್ತದೆ. ಕೇಂದ್ರ ಸರಕಾರದ ಎಲ್ಲ ಜನಪರ ಯೋಜನೆ ಗಳು ಜನರಿಗೆ ತಲುಪುತ್ತಿವೆ. ಮೋದಿ ಯವರ ಕೊಡುಗೆ, ಸಾಧನೆಗಳು ಗೊತ್ತಿರುವ ಕಾರಣಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಅಪೇಕ್ಷಿಸುತ್ತಿದ್ದಾರೆ.ಏಕ್‌ ಬಾರ್‌ ಫಿರ್‌ ಸೇ ಮೋದಿ ಸರ್ಕಾರ್‌ ಅಭಿಯಾನದಂತೆ ಮತ್ತೂಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೇರುವುದೇ ಅಭಿಯಾನದ ಉದ್ದೇಶ ಎಂದು ತಿಳಿಸಿದರು.

2024ಕ್ಕೆ ಮತ್ತೊಮ್ಮೆ ಮೋದಿಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ,2024ಕ್ಕೆ ಮತ್ತೊಮ್ಮೆ ಮೋದಿ’ ಎಂಬ ಲೋಕಸಭಾ ಚುನಾವಣೆಯ ಗೋಡೆ ಬರಹ ಅಭಿಯಾನವು ಪ್ರತಿ ಬೂತ್‌ ಮಟ್ಟದಲ್ಲೂ ತೆರೆದುಕೊಳ್ಳಲಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಈ ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕು ಎಂದರು.ಈ ವೇಳೆ ಮಂಡಲದ ಪ್ರಧಾನ ಕಾರ್ಯದರ್ಶಿ ನರೇಂದ್ರಬಾಬು, ವಿಧಾನಸಭಾ ಚುನಾವಣೆ ಸಂಚಾಲಕ ಶೆಟ್ಟಿಗೆರೆ ವೆಂಕಟೇಶ್, ಮಹಿಳಾ ಮುಖಂಡರಾದ ವಿಜಯ ಕೃಷ್ಣ, ಪ್ರೇಮಲೀಲಾವೆಂಕಟೇಶ್ , ಹಿರಿಯ ಮುಖಂಡ ನರಸಪ್ಪ, ಮಧುಚಂದ್ರ, ವಾರ್ಡಿನ ಪ್ರಮುಖರಾದ ಶಶಿಶೇಖರ್, ಹಿಮದರ್ಶಿನಿ, ನರೇಂದ್ರ, ರವಿಕುಮಾರ್,ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತ ಹಾಗೂ ಸ್ಥಳೀಯ ಬೂತ್ ಮಟ್ಟದ ಕಾರ್ಯಕರ್ತರು,ಮತ್ತಿತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...