ಸಾಗಡೆ ಪಿಎಸಿಸಿ ಬ್ಯಾಂಕ್ ಬಿಜೆಪಿ ವಶ

KannadaprabhaNewsNetwork | Published : Apr 18, 2025 12:46 AM

ಸಾರಾಂಶ

ಚಾಮರಾಜನಗರ ತಾಲೂಕಿನ ಸಾಗಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿಗರಾದ ಬಿ.ಸೋಮಶೇಖರ್, ಉಪಾಧ್ಯಕ್ಷಗಾಗಿ ಕೆ.ಎಂ.ಸಿದ್ದರಾಜು ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಸಾಗಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಲಿಯನ್ನು ಬಿಜೆಪಿ ಬೆಂಬಲಿಗರು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿ ಬೆಂಬಲಿಗರಾದ ಡಿ.ಸೋಮಶೇಖರ್ ಎರಡನೇ ಬಾರಿಗೆ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಕೆ.ಎಂ.ಸಿದ್ದರಾಜು ಅವಿರೋಧ ಆಯ್ಕೆಯಾದರು. ಗ್ರಾಮದ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ-ಉಪಾಧಕ್ಷರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರಾದ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಬಿ.ಎಸ್.ಶಿಲ್ಪಶ್ರೀ ಅಧಿಕೃತವಾಗಿ ಘೋಷಣೆ ಮಾಡಿದರು. ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು :

ನೂತನ ಅಧ್ಯಕ್ಷ ಡಿ.ಸೋಮಶೇಖರ್ ಅಧಿಕಾರಿ ವಹಿಸಿಕೊಂಡು ಮಾತನಾಡಿ, ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಳೆದ ಅವಧಿಯಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿಕೊಟ್ಟ ಹಿನ್ನೆಲೆ ಈ ಬಾರಿ ಸದಸ್ಯರು ಅವಿರೋಧ ಆಯ್ಕೆ ಮಾಡಿದ್ದಾರೆ. ಸಂಘ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಿ ಸಂಘದ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ ಎಂದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಅಭಿನಂದಿಸಿ ಮಾತನಾಡಿ, ಸಾಗಡೆ ಸಹಕಾರ ಸಂಘದ ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ದೊರೆತರೆ, ಇನ್ನು ಹೆಚ್ಚು ಬಲಿಷ್ಟವಾಗಲಿದೆ. ಈ ನಿಟ್ಟಿನಲ್ಲಿ ರೈತರಿಗೆ ಕೇಂದ್ರ ಸರ್ಕಾರ ಸವಲತ್ತುಗಳನ್ನು ಕಲ್ಪಿಸಿಕೊಡಲು ಎಲ್ಲರು ಶ್ರಮಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಂ.ಸಿದ್ದರಾಜು, ನಿರ್ದೇಶಕರಾದ ಎಸ್.ಎಸ್.ಮಹೇಶ್, ನಂಜಶೆಟ್ಟಿ, ಶಂಕರಪ್ಪ, ಸಿದ್ದರಾಜು, ಗುರುಬಸಪ್ಪ, ಸಿದ್ದಶೆಟ್ಟಿ, ಡಿ. ಸೋಮಶೇಖರ್, ಸುಬ್ಬಮ್ಮ, ಗೌರಮ್ಮ, ರಾಮನಾಯಕ, ರಾಜು ಎ.ಸಿಇಒ ಸುರೇಶ್ ಇದ್ದರು. ಬಿಜೆಪಿ ಬೆಂಬಲಿತರು ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ಹರವೆ ಮಹದೇವಪ್ರಸಾದ್, ಗ್ರಾಪಂ ಸದಸ್ಯರಾದ ರಾಮಸಮುದ್ರ ಆರ್.ಕೃಷ್ಣಶೆಟ್ಟಿ, ಮಂಜುಳಾ, ರವಿ ಮೊದಲಾದವರು ಇದ್ದರು.

Share this article