3 ರಾಜ್ಯದಲ್ಲಿ ಬಿಜೆಪಿ ಜಯ:‍ ಸಂಭ್ರಮಾಚರಣೆ

KannadaprabhaNewsNetwork |  
Published : May 06, 2026, 01:30 AM IST
 ಸಿಕೆಬಿ-1 ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ  ಬಹುಮತ ಪಡೆದ ಹಿನ್ನೆಲೆಯಲ್ಲಿ ನಗದಲ್ಲಿ  ಜಿಲ್ಲಾ ಬಿಜೆಪಿಯಿಂದ ಅದ್ಧೂರಿ ಸಂಭ್ರಮಾಚರಣೆ ನಡೆಸಲಾಯಿತು | Kannada Prabha

ಸಾರಾಂಶ

ಮೋದಿಜೀ ನಾಯಕತ್ವದಲ್ಲಿ ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಹೆಮ್ಮೆಯ ಪ್ರಧಾನಿ ಮೋದಿಜೀ ಅವರ ಅಭಿವೃದ್ಧಿ ರಾಜಕಾರಣ ಮತ್ತು ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಬಂಗಾಳದ ಜನತೆ ಸ್ಪಷ್ಟ ಬೆಂಬಲ ವ್ಯಕ್ತ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಪಶ್ಚಿಮ ಬಂಗಾಳ ಸೇರಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದ ಹಿನ್ನೆಲೆಯಲ್ಲಿ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ಅದ್ಧೂರಿ ಸಂಭ್ರಮಾಚರಣೆ ನಡೆಸಲಾಯಿತು.

ನಗರದ ವಾಪಸಂದ್ರದ ಉತ್ತರ ಬಡಾವಣೆಯಲ್ಲಿ ಇರುವ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಮೋದಿಜೀ ನಾಯಕತ್ವದಲ್ಲಿ ಅಸ್ಸಾಂ, ಪುದುಚೇರಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಹೆಮ್ಮೆಯ ಪ್ರಧಾನಿ ಮೋದಿಜೀ ಅವರ ಅಭಿವೃದ್ಧಿ ರಾಜಕಾರಣ ಮತ್ತು ಅವರ ವಿಕಸಿತ ಭಾರತದ ಪರಿಕಲ್ಪನೆಗೆ ಬಂಗಾಳದ ಜನತೆ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ದಶಕಗಳ ಕಾಲ, ಬಂಗಾಳದ ಜನರು ಭಯದಿಂದ ಬದುಕುತ್ತಿದ್ದರು. ಮಮತಾ ಬ್ಯಾನರ್ಜಿಯವರ ಟಿಎಂಸಿಯ ಕ್ರೂರ ಆಡಳಿತದಲ್ಲಿ, ಪ್ರಜಾಪ್ರಭುತ್ವವನ್ನು ನಿಗ್ರಹಿಸಲಾಗಿತ್ತು, ಹಿಂಸೆ, ಹತ್ಯೆ, ಹಲ್ಲೆಗಳ ಮೂಲಕ ಜನಧ್ವನಿಯನ್ನು ನಿಗ್ರಹಿಸಲಾಗಿತ್ತು ಮತ್ತು ಹಿಂಸಾಚಾರವೇ ಎಲ್ಲ ಭಿನ್ನಾಭಿಪ್ರಾಯಕ್ಕೆ ಉತ್ತರ ಎನ್ನುವಂತಾಗಿತ್ತು. ಆದರೆ ಈ ಬಾರಿ ಬಂಗಾಳದ ಜನರು ಹೆದರಲಿಲ್ಲ. ಅವರು ಭಯ ಇಲ್ಲ, ಭರವಸೆ ಇದೆ ಎಂದು ಬಿಜೆಪಿಗೆ ಗೆಲವು ತಂದು ಕೊಟ್ಟಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ, ಬಂಗಾಳದಲ್ಲಿ ದುರಾಡಳಿತ ಇಂದಿಗೆ ಕೊನೆಯಾಗಿದೆ. ಮುಂದೆ ಬಿಜೆಪಿ ನೇತೃತ್ವದಲ್ಲಿ ಸುಸಂಸ್ಕೃತವಾಗಿ, ಸಮೃದ್ಧವಾಗಿ ಅಭಿವೃದ್ಧಿಯಾಗಲಿದೆ ಎಂದರು.

ಸಂಭ್ರಮಾಚರಣೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್. ಮುರಳೀಧರ್, ಮಧು ಸೂರ್ಯನಾರಾಯಣರೆಡ್ಡಿ, ಮಾಧ್ಯಮ ವಕ್ತಾರ ಮಧುಚಂದ್ರ, ಕಾರ್ಯದರ್ಶಿ ಆರ್.ಹೆಚ್.ಎನ್. ಅಶೋಕ್ ಕುಮಾರ್, ಮುಖಂಡರಾದ ವೇಣುಗೋಪಾಲ್, ಸೀಕಲ್ ಆನಂದಗೌಡ, ಲಕ್ಷ್ಮೀನಾರಾಯಣಗುಪ್ತ, ಎ.ವಿ. ಬೈರೇಗೌಡ, ಸುಮಿತ್ರಮ್ಮ, ಪ್ರಭಾಕರರೆಡ್ಡಿ, ದೇವಸ್ಥಾನದ ಹೊಸಹಳ್ಳಿ ರಾಮಣ್ಣ, ತೇಜೆಂದ್ರಪಾಪು, ಕೋಡಿರ್ಲಪ್ಪ, ನರಸಿಂಹರಾಜು, ವೇಣುಮಾಧವ್, ಶಶಿಧರ್, ನರಸಪ್ಪ,ನಂದಿ ಮುನಿಸ್ವಾಮಿ ಮತ್ತಿತರರು ಇದ್ದರು. ಸಿಕೆಬಿ-1

ಪಶ್ಚಿಮ ಬಂಗಾಳ ಸೇರಿ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದ ಹಿನ್ನೆಲೆಯಲ್ಲಿ ನಗದಲ್ಲಿ ಜಿಲ್ಲಾ ಬಿಜೆಪಿಯಿಂದ ಅದ್ಧೂರಿ ಸಂಭ್ರಮಾಚರಣೆ ನಡೆಸಲಾಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಆದೇಶ ಕೈಬಿಟ್ಟು, ಸಮರ್ಪಕ ಬೀಜ, ರಸಗೊಬ್ಬರ ಪೂರೈಸಿ
ಬೀಗ ಪ್ರಕರಣ ತನಿಖೆಗೆ ಕಠಿಣ ಕ್ರಮಕ್ಕೆ ಶಿವಕುಮಾರಪ್ಪ ಒತ್ತಾಯ