ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಸಾರ್ಥಕ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ ಆಯೋಜಿಸಿರುವ ಅಭಿಮಾನೋತ್ಸವಕ್ಕೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸೇರಿ ಹಲವು ಕಾರ್ಯಕರ್ತರು ಪ್ರಯಾಣ ಬೆಳೆಸಿದರು. ಚಿತ್ರದುರ್ಗಕ್ಕೆ ಆಗಮಿಸಲಿರುವ ಯಡಿಯೂರಪ್ಪ ಅವರಿಗೆ ಅದ್ಧೂರಿ ‘ಪುರ ಪ್ರವೇಶ’ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಳ್ಳಲು ಮತ್ತು ಅಭಿನಂದಿಸಲು ಉತ್ಸಾಹದಿಂದ ಚಿತ್ರದುರ್ಗಕ್ಕೆ ತೆರಳಿದ್ದಾರೆ.
ಈ ವೇಳೆ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜವರೇಗೌಡ , ತಾಲೂಕು ಅಧ್ಯಕ್ಷರಾದ ಎಂ.ಸಿ.ವರದರಾಜು , ಬೇಳೂರು ಬೋಮೇಶ್ , ವೈರಮುಡಿ , ಕೃಷ್ಣ ಹೆಮ್ಮಿಗೆ , ವಿನಯ್ , ಸುರೇಶ್ ಕನ್ನಂಬಾಡಿ ಸೇರಿದಂತೆ ಇತರರು ಇದ್ದರು.
ತಡೆಯೊಡಿಸಿ ವಿಶೇಷ ಪೂಜೆಬಿಎಸ್ವೈ ಅಭಿಮಾನೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿ ಅಭಿಮಾನಿಗಳು ನಗರದ ಶಕ್ತಿ ದೇವತೆ ಕಾಳಿಕಾಂಬ ದೇಗುಲದಲ್ಲಿ ಅಷ್ಟ ದಿಕ್ಕುಗಳಿಗೆ ತಡೆಯೊಡಿಸಿ ವಿಶೇಷ ಪೂಜೆ ಸಲ್ಲಿಸಿದರು.