ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಹೆದ್ದಾರಿಯಲ್ಲಿ ಮೇಲಧಿಕಾರಿಗಳ ಸೂಚನೆಗಳಿಲ್ಲದೆ ರಸ್ತೆ ಉಬ್ಬು ( ಹಂಪ್ಸ್ ) ಗಳನ್ನು ಹಾಕುವಂತೆ ಇಲ್ಲವೆಂಬ ನಿಯಮ ಇದ್ದರೂ ಹೊಸದಾಗಿ ಆರಂಭವಾಗಿರುವ ಪೆಟ್ರೋಲ್ ಬಂಕ್ ನವರು ತಮ್ಮ ವ್ಯಾಪಾರ ವ್ಯವಹಾರಗಳಿಗೆ ಅನುಕೂಲವಾಗಲು ಬಂಕ್‌ನ ಎದುರು ಬರುವ ಹೆದ್ದಾರಿಯ ಎರಡೂ ಕಡೆ ಹಂಪ್ಸ್ ನಿರ್ಮಾಣ ಮಾಡಿದ್ದಾರೆ ಎಂದು ದೂರಿದ್ದಾರೆ.
ಅವೈಜ್ಞಾನಿಕ ಹಂಪ್ಸ್ ನಿಂದ ವಾಹನಗಳನ್ನು ಚಲಾಯಿಸುವವರಿಗೆ ತೊಂದರೆಯಾಗಿದೆ. ಆ್ಯಂಬುಲೆನ್ಸ್ ಸೇರಿದಂತೆ ಬಸ್, ಭಾರಿ ವಾಹನಗಳು, ದ್ವಿಚಕ್ರ ವಾಹನ ಸವಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ತೆಂಡೇಕೆರೆ ಗ್ರಾಮದ ಮುಖಂಡರು ಜಿಲ್ಲಾಧಿಕಾರಿ, ತಹಸೀಲ್ದಾರ್, ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಹಂಪ್ಸ್ ತೆರವುಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಲೋಕೋಪಯೋಗಿ ಇಲಾಖೆ ಎಂಜಿನಿಯರ್ ರಸ್ತೆ ಉಬ್ಬು ತೆರವುಗೊಳಿಸುವಂತೆ ಸೂಚಿಸಿದ್ದರೂ ತಾಲೂಕಿನ ಅಧಿಕಾರಿಗಳು ಅವರ ಮಾತನ್ನು ಪಾಲಿಸುತ್ತಿಲ್ಲ. ತಾಲೂಕು ಆಡಳಿತ ತಕ್ಷಣ ಕ್ರಮ ವಹಿಸಿ ಅನಧಿಕೃತ ರಸ್ತೆ ಉಬ್ಬು ತೆರವುಗೊಳಿಸಬೇಕು. ಮುಂದೆ ಇಲ್ಲಿ ಯಾವುದೇ ಅನಾಹುತ ನಡೆದರೂ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.