ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ಹೊರವಲಯದ ಜೆಕೆ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸೋಲು ಗೆಲುವನ್ನು ಒಂದೇ ರೀತಿ ಅರ್ಥೈಸಿಕೊಂಡಿದ್ದು ಗೆದ್ದಾಗ ಹಿಗ್ಗಲಿಲ್ಲ, ಸೋತಾಗ ಕುಗ್ಗಲಿಲ್ಲ ನಾನು ನಿಮಗಾಗಿ ಜೆಕೆ ಭವನವನ್ನು ನಿರ್ಮಿಸಿದ್ದು ಸೋಲಿನ ಹತಾಶೆಯಲ್ಲಿ ನಾನು ಕ್ಷೇತ್ರದ ಮತದಾರರನ್ನು ನನಗೆ ಬೆನ್ನೆಲುಬಾಗಿ ನಿಂತ ಮುಖಂಡರು ಹಾಗೂ ಕಾರ್ಯಕರ್ತರ ಬೆನ್ನಿಗೆ ಸದಾ ಇರುತ್ತೇನೆಂದರು.
ಸದಸ್ಯತ್ವ ನೋಂದಣಿ ಅಭಿಯಾನಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿರ ಸೂಚನೆಯಂತೆ ಬೂತ್, ಪಂಚಾಯತಿ, ಹೋಬಳಿ ಮಟ್ಟಗಳಲ್ಲಿ ನೋಂದಣಿ ಅಭಿಯಾನವನ್ನು ಕೈಗೊಂಡಿದ್ದು ತಾಲ್ಲೂಕಿನ ವಿವಿಧ ಹೋಬಳಿ ಮತ್ತು ಪಂಚಾಯತಿಗಳಲ್ಲಿ ಜೆಡಿಎಸ್ ಪಕ್ಷಕ್ಕೆ ನೋಂದಣಿಯನ್ನು ಮಾಡಿಸುವುದರ ಮೂಲಕ ಪಕ್ಷಕ್ಕೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ. ಪಕ್ಷಕ್ಕೆ ನಾನು ಒಬ್ಬ ಕಾರ್ಯಕರ್ತನಾಗಿದ್ದು ನಿಮ್ಮೆಲ್ಲರ ಸಹಕಾರ, ಶ್ರಮದಿಂದ ನಾನು ಎರಡು ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆಂದರು.
ಬೂತ್ ಸಮಸ್ಯೆ ಪರಿಹರಿಸಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಸ್ಲಿಂರಿಗೆ ಶೇಕಡಾ ೪ ಮೀಸಲಾತಿಯನ್ನು ನೀಡಿದ್ದರು. ಆದರೆ ಬಿಜೆಪಿಯವರು ಅದನ್ನು ತೆಗೆದು ಹಾಕಿದರು. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತದಾರರಿಗೆ ಮಂಕುಬೂದಿಯನ್ನು ಎರಚಿ ಗ್ಯಾರಂಟಿಗಳ ಹೆಸರಿನಲ್ಲಿ ಮತಗಳನ್ನು ಸೆಳೆದು ಈಗ ಶಕ್ತಿಯೋಜನೆಯನ್ನು ಮಾತ್ರ ನೀಡುತ್ತಿದ್ದಾರೆಂದರು.
ಮಹಿಳೆಯರಿಗೆ ೨ ಸಾವಿರ ನೀಡುತ್ತಿದ್ದು ಮನೆಯ ಯಜಮಾನನಿಂದ ೪ ಸಾವಿರವನ್ನು ಕಿತ್ತುಕೊಳ್ಳಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್, ದಿನಸಿ ಪದಾರ್ಥಗಳು, ವಿದ್ಯುತ್‌ದರ, ಬಸ್ ಟಿಕೆಟ್‌ದರ, ನೋಂದಣಿಶುಲ್ಕ, ಸ್ಟಾಂಪ್ ಡ್ಯೂಟಿ ಇತ್ಯಾದಿಗಳನ್ನು ಹೆಚ್ಚಿಸಿಕೊಂಡು ಹೋಗಿ ಕೇವಲ ೨ಸಾವಿರ ಮಹಿಳೆಯರಿಗೆ ಕಣ್ಣೊರೆಸುವ ತಂತ್ರಗಾರಿಕೆಯಾಗಿ ೩-೪ ತಿಂಗಳಿಗೊಮ್ಮೆ ಹಾಕುತ್ತಿದ್ದಾರೆಂದರು.
ಕೊಂಗನಹಳ್ಳಿ ಶಿವಾರೆಡ್ಡಿ ಮಾತನಾಡಿ ಸಂಘಟನೆಯು ಕೇವಲ ಸಭೆಗೆ ಮಾತ್ರ ಸೀಮಿತಗೊಳ್ಳಬಾರದು, ಗೇಟ್‌ನಿಂದ ಹೊರಗಡೆ ಹೋದರು ಪಕ್ಷ ಸಂಘಟನೆಗೆ ಸದಾ ಸಿದ್ಧರಾಗಿದ್ದು ನಮ್ಮ ಪಕ್ಷದವನ್ನು ಬಲಪಡಿಸಲು ಹಾಗೂ ಕಾರ್ಯಕರ್ತರ ಹಿತಕಾಯಲು ಎಲ್ಲ ನಾಯಕರುಗಳು ಹಾಗೂ ಮುಖಂಡರುಗಳು ಸಿದ್ಧರಾಗಿರಬೇಕೆಂದರು.