ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಈಗಾಗಲೇ ಸಾಹಿತ್ಯಾಸಕ್ತರು ಗಣ್ಯರು ತೀರ್ಮಾನ ಮಾಡಿದಂತೆ ಮುಂದಿನ ತಿಂಗಳಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ 5ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ಸಾಹಿತಿಗಳು ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಎಲ್ಲರೂ ಸಮ್ಮೇಳನದ ಯಶಸ್ವಿಗೆ ಸಹಕಾರವನ್ನು ನೀಡುವ ಮೂಲಕ ಅಕ್ಷರ ಜಾತ್ರೆಗೆ ಮೆರುಗು ನೀಡಬೇಕೆಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಈಗಾಗಲೇ ಸಾಹಿತ್ಯಾಸಕ್ತರು ಗಣ್ಯರು ತೀರ್ಮಾನ ಮಾಡಿದಂತೆ ಮುಂದಿನ ತಿಂಗಳಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ 5ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ಸಾಹಿತಿಗಳು ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಎಲ್ಲರೂ ಸಮ್ಮೇಳನದ ಯಶಸ್ವಿಗೆ ಸಹಕಾರವನ್ನು ನೀಡುವ ಮೂಲಕ ಅಕ್ಷರ ಜಾತ್ರೆಗೆ ಮೆರುಗು ನೀಡಬೇಕೆಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಮನವಿ ಮಾಡಿದರು.ಶನಿವಾರ ಪಟ್ಟಣದ ತಾಳಿಕೋಟಿ ರಸ್ತೆ ಮಾರ್ಗದಲ್ಲಿರುವ ಶಾರದಾ ಶಾಲೆಯ ಸಭಾಂಗಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಸಾಹಿತ್ಯ ಪರಿಷತ್ ಫೆಬ್ರವರಿ ಎರಡನೇ ವಾರವನ್ನು ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲು ಸೂಚಿಸಿದ್ದು, ಅದರಂತೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್. ನಾಡಗೌಡ(ಅಪ್ಪಾಜಿ)ಯವರ ಸಲಹೆಯಂತೆ ಫೆ.15ರಿಂದ 20ರೊಳಗಾಗಿ ನಡೆಸಲು ತೀರ್ಮಾನಿಸಲಾಗಿದೆ. ಇದು ಮುದ್ದೇಬಿಹಾಳ ತಾಲೂಕು ಸಮ್ಮೇಳನವಾಗಿದ್ದರಿಂದ ತಾಲೂಕಿನ ಸುತ್ತಲಿನ ಗ್ರಾಮೀಣ ಜನರಿಗೆ ಸಾಹಿತ್ಯದ ಒಲವು ಹೆಚ್ಚಿಸಲು ಮತ್ತು ಸಾಹಿತ್ಯ ಸಮ್ಮೇಳನದ ಕುರಿತು ಜಾಗೃತಿ ಮೂಡಿಸುವುದು ಜೊತೆಗೆ ಸಮ್ಮೇಳನಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸಂಪರ್ಕದ ಕೊರತೆಯಾಗದಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೇ, ಎಲ್ಲ ಬಗೆಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ಕಾರಣ ಎಲ್ಲ ಸಾಹಿತಿಗಳ, ಗಣ್ಯರ, ಸಾರ್ವಜನಿಕರ, ಶಿಕ್ಷಕರ, ಸರ್ಕಾರಿ ನೌಕರರ, ಮಹಿಳಾ ಕಾರ್ಯಕರ್ತೇಯರ ಸಹಕಾರ ಅತ್ಯಗತ್ಯವಾಗಿದೆ ಎಂದರು.ಈ ವೇಳೆ ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಸಾಹಿತಿ ಅಬ್ದುಲ್ ರೆಹಮಾನ್ ಬಿದರಕುಂದಿ, ಜೆ.ಡಿ.ಮುಲ್ಲಾ, ಎಂ.ಎಂ.ಬೆಳಗಲ್ಲ ಮಾತನಾಡಿ, ಇಲ್ಲಿತನಕ ತಾಲೂಕಿನಲ್ಲಿ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಗಳು ಅತ್ಯಂತ ಅದ್ದೂರಿ ಯಶಸ್ವಿಗೊಳ್ಳುವುದಲ್ಲದೇ, ಶಾಶ್ವತ ಹೆಸರು ಉಳಿಯುವಂತಾಗಿದೆ. ಅದರಂತೆ ಈ ಬಾರಿ ನಡೆಯುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಯಾವೂದೇ ಲೋಪವಾಗಬಾರದು. ಆಮಂತ್ರಣ ಪತ್ರಿಕೆ, ಗಣ್ಯರ ಆಹ್ವಾನ, ಕವಿ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಗಳನ್ನು ಏರ್ಪಡಿಸುವುದು, ಯೋಗ್ಯರನ್ನು ಸಮ್ಮೇಳನಾಧ್ಯಕ್ಷರ ಆಯ್ಕೆ, ಲಾಂಛನ ಬಿಡುಗಡೆ ಸೇರಿದಂತೆ ಇತರೆ ತಯಾರಿಯಲ್ಲಿ ಮುಂದಾಗಬೇಕು. ತಾಲ್ಲೂಕಿನ ಎಲ್ಲಾ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಭಾಗದ ನೀರಾವರಿ ಸೇರಿದಂತೆ ವಿಶೇಷ ವಿಷಯಗಳ ಕುರಿತು ಗೋಷ್ಠಿಗಳನ್ನು ಏರ್ಪಡಿಸಿ ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಸಾಹಿತಿಗಳಾದ ಐ.ಬಿ.ಹಿರೇಮಠ, ಎಸ್.ಎಸ್.ಹೂಗಾರ, ಎಸ್.ಎ.ಬೇವಿನಗಿಡದ, ವೈ.ಎಚ್.ವಿಜಯಕರ, ಶಿವಪುತ್ರಪ್ಪ ಸಜ್ಜನನ, ಸುಮಲತತಾ ಗಡಿಯಪ್ಪನವರ, ಪ್ರಭುಗೌಡ ರಾರಡ್ಡಿ, ಶ್ರೀಶೈಲ ಹೂಗಾರ, ಚಂದ್ರಶೇಖರ ಕಲಾಲ, ಶ್ರೀಶೈಲ ಕತ್ತಿ, ಎ.ಆರ್.ಮುಲ್ಲಾ, ಸದಾಶಿವ ಮಠ, ಶ್ರೀಶೈಲ ಪೂಜಾರಿ, ಎಸ್ ಎಸ್ ಹುನಗುಂದ, ಎಸ್ ಎಸ್ ಕರಡ್ಡಿ, ಸಂಗಪ್ಪ ಮೇಲಿಮನಿ, ಹುಸೇನ ಮುಲ್ಲಾ, ಸಿದ್ದಣ್ಣ ಹಡಲಗೇರಿ, ಕಿರಣ ಪಾಟೀಲ, ದೇವೇಂದ್ರ ವಾಲಿಕಾರ, ಅರವಿಂದ ಕಾಶಿನಕುಂಟಿ, ಸರಸ್ವತಿ ಪೀರಾಪೂರ ಸೇರಿದಂತೆ ಹಲವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.