ವಿಜಯಪುರ: ಶಾಲೆಯಿಂದ ಬಂದ ಅಣ್ಣನನ್ನು ನೋಡಲೆಂದು ಮನೆಯಿಂದ ಹೊರಗೆ ಬಂದ ಬಾಲಕಿ ಶಾಲಾ ಬಸ್‌ನಡಿ ಸಿಲುಕಿ ಸಾವಿಗೀಡಾದ ಘಟನೆ ನಗರದ ಕೈಗಾರಿಕೆ ಪ್ರದೇಶದಲ್ಲಿರುವ ಪದಂ ನಗರದಲ್ಲಿ ಸೋಮವಾರ ಸಂಜೆ ಜರುಗಿದೆ.

ವಿಜಯಪುರ: ಶಾಲೆಯಿಂದ ಬಂದ ಅಣ್ಣನನ್ನು ನೋಡಲೆಂದು ಮನೆಯಿಂದ ಹೊರಗೆ ಬಂದ ಬಾಲಕಿ ಶಾಲಾ ಬಸ್‌ನಡಿ ಸಿಲುಕಿ ಸಾವಿಗೀಡಾದ ಘಟನೆ ನಗರದ ಕೈಗಾರಿಕೆ ಪ್ರದೇಶದಲ್ಲಿರುವ ಪದಂ ನಗರದಲ್ಲಿ ಸೋಮವಾರ ಸಂಜೆ ಜರುಗಿದೆ. ಶಿರ್ಷಾ ವಾಡಿ (3) ಮೃತ ಬಾಲಕಿ. ಖಾಸಗಿ ಶಾಲಾ ಬಸ್‌ನಿಂದ ಇಳಿದಿದ್ದ ಅಣ್ಣನಾದ ಸಾಯಿನನ್ನು ನೋಡಲೆಂದು ಹೊರಗೆ ಬರುವಷ್ಟರಲ್ಲಿ ಖಾಸಗಿ ಶಾಲಾ ಬಸ್ಸಿನ ಮುಂದಿನ ಚಕ್ರಕ್ಕೆ ಸಿಲುಕಿದ್ದಾಳೆ. ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ. ಎಪಿಎಂಸಿ ಠಾಣೆ ವ್ಯಪ್ತಿ ಘಟನೆ ಜರುಗಿದೆ.