ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಹೆಲ್ತಕೇರ್ ಎಕ್ಸಲೆನ್ಸ್ ಅವಾರ್ಡ್-2026 ಪ್ರಶಸ್ತಿ ಪುರಸ್ಕೃತರಾದ ಸಾಸನೂರ ಆಸ್ಪತ್ರೆಯ ವೈದ್ಯ ಡಾ.ಪ್ರಸಾದ ಸಾಸನೂರ ಅವರಿಗೆ ಆಸ್ಪತ್ರೆಯ ಸಿಬ್ಬಂದಿ ಸನ್ಮಾನಿಸಿ, ಗೌರವಿಸಿದರು. ಡಾ.ಪ್ರಸಾದ ಸಾಸಸೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ಒಂದುವರೆ ದಶಕದಿಂದ ಸೇವೆ ಸಲ್ಲಿಸುತ್ತಿರುವ ನಾವು ಪ್ರಶಸ್ತಿ ಹಾಗೂ ಸನ್ಮಾನಗಳಿಂದ ದೂರ ಉಳಿದಿದ್ದೆವು. ಆದರೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಗಳಂತಹ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳೇ ನಮ್ಮ ಸೇವೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ. ಕಳೆದ 15 ವರ್ಷಗಳಲ್ಲಿ ಸಾವಿರಾರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದ ನಮಗೆ ರೋಗಿಗಳ ಸೇವೆಯೊಂದೇ ನಮ್ಮ ಗುರಿಯಾಗಿದೆ. ಈ ಪ್ರಶಸ್ತಿ ಲಭಿಸಿದ ಬಳಿಕ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದ್ದು, ಇನ್ನುಷ್ಟು ಉತ್ಸುಕತೆಯಿಂದ ರೋಗಿಗಳ ಸೇವೆ ಮಾಡಲು ಹೊಸ ಹುರುಪು ಬಂದಂತಾಗಿದೆ. ನಮ್ಮ ಹಾಗೂ ಸಾಸನೂರ ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ನಿರಂತರ ಸೇವೆಯಿಂದಲೇ ನಮ್ಮ ಆಸ್ಪತ್ರೆ ವಿಜಯಪುರದಲ್ಲೇ ನಂಬರ್ ಒನ್ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದರು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ.ತೇಜಶ್ವಿನಿ ಸಾಸನೂರ, ಡಾ.ಅರ್ಚನಾ ನಾವಿ, ಸಿಬ್ಬಂದಿ ವಿಶಾಲ, ಲಕ್ಷ್ಮಿ, ಭೀಮನಗೌಡ ಪಾಟೀಲ ಇದ್ದರು.ನನ್ನ ಪತ್ನಿ ಡಾ.ಪ್ರಸಾದ ಸಾಸನೂರ ಅವರು ನಾವು ಅವಿರತವಾಗಿ ರೋಗಿಗಳ ಸೇವೆ ಮಾಡುತ್ತಿದ್ದೇವೆ. ನಮ್ಮಲ್ಲಿ ಆಧುನಿಕ ತಂತ್ರಜ್ಞಾನ ಚಿಕಿತ್ಸೆ ಹಾಗೂ ಸೂಪರ್ ಸ್ಪೆಷಾಲಿಟಿಯ ಸೇವಾ ಸೌಲಭ್ಯಗಳಿವೆ. ನಿತ್ಯವೂ ಉತ್ತರ ಕರ್ನಾಟಕ ಭಾಗದಿಂದ ಬರುವ ನೂರಾರು ರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸಲಾಗುತ್ತಿದೆ. ಇಂತಹ ಸೇವೆ ಗುರುತಿಸಿ ನನ್ನ ಪತಿಯವರಿಗೆ ಪ್ರಶಸ್ತಿ ನೀಡಿದ್ದು, ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ.
-ಡಾ.ತೇಜಶ್ವಿನಿ ಸಾಸನೂರ, ಡಾ.ಪ್ರಸಾದ ಸಾಸನೂರ ಅವರ ಪತ್ನಿ ಹಾಗೂ ಆಸ್ಪತ್ರೆಯ ವೈದ್ಯೆ