ಗಣರಾಜ್ಯೋತ್ಸವದಂದು ಕಪ್ಪು ಬಟ್ಟೆ ಪ್ರದರ್ಶನ

KannadaprabhaNewsNetwork |  
Published : Jan 07, 2026, 01:30 AM IST
ೀೂೀೂೀೂ | Kannada Prabha

ಸಾರಾಂಶ

ಗಣರಾಜ್ಯೋತ್ಸವದ ದಿನದಂದುಕಪ್ಪು ಪಟ್ಟಿ ಪ್ರದರ್ಶನದೊಂದಿಗೆ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆಂದು ಮುಖಂಡರಾದ ರಾಜೇಶ್‌ ಎಚ್.ಬಿ. ರವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತುರುವೇಕೆರೆ ವೃತ್ತ ನಿರೀಕ್ಷಕರನ್ನು ಈ ಕೂಡಲೇ ನಮ್ಮ ಜಿಲ್ಲೆಯಿಂದಲೇ ವರ್ಗಾವಣೆ ಮಾಡುವುದು ಸೇರಿದಂತೆ ದಲಿತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸಂವಿಧಾನ ಬದ್ಧವಾಗಿ ಪಡೆಯುವ ಉದ್ದೇಶದಿಂದ ತುಮಕೂರು ಜಿಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಗಣರಾಜ್ಯೋತ್ಸವದ ದಿನದಂದುಕಪ್ಪು ಪಟ್ಟಿ ಪ್ರದರ್ಶನದೊಂದಿಗೆ ಬೃಹತ್ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆಂದು ಮುಖಂಡರಾದ ರಾಜೇಶ್‌ ಎಚ್.ಬಿ. ರವರು ತಿಳಿಸಿದರು.ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರುಗಳು ಸಭೆ ಸೇರಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ, ಗಣತಂತ್ರವೂ ಆದರೂ ಸಹ ಇದುವರೆವಿಗೂ ಸರಿಯಾಗಿ ಸಂವಿಧಾನ ಆಶೋತ್ತರಗಳಿಗೆ ಯಾರೊಬ್ಬ ಅಧಿಕಾರಿ ವರ್ಗದವರೂ ದಲಿತರ ಪರ, ಶೋಷಿತರ ಪರ ಕೆಲಸ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ, ಕಾಡಲ್‌ಗಿಡದ ಕಾವಲ್ ಸ.ನಂ. 7ಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸವರ್ಣೀಯರಿಂದ ದೌರ್ಜನ್ಯೊಕ್ಕೊಳಪಟ್ಟು ಕಾರಣ ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಥಳೀಯ ವೃತ್ತ ನಿರೀಕ್ಷಕರಿಗೆ ದೂರು ಸಲ್ಲಿಸಲಾಗಿಚ್ಚುಯ ಸದರಿ ಅಧಿಕಾರಿಯವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸೇರಿದಂತೆ ಗೃಹ ಸಚಿವರಿಗೂ ಈ ಪ್ರಕರಣದ ಬಗ್ಗೆ ಮಾಹಿತಿ ಮತ್ತು ದೂರು ಸಲ್ಲಿಸಿದ್ದಾಗ್ಯೂ ಇದುವರೆವಿಗೂ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಇದೊಂದೇ ಅಲ್ಲದೇ ಎಷ್ಟೋ ಹಲವಾರು ಪ್ರಕರಣಗಳು ಮುಲ್ಕಿಯಲ್ಲಿ ಬಿದ್ದಿದ್ದು, ದಲಿತರಿಗೆ ಸೂಕ್ತ ನ್ಯಾಯ ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆಂದು ದಲಿತಪರ ಸಂಘಟನೆಗಳ ಮುಖಂಡರು ತಿಳಿಸಿದರು.ಅಖಿಲ ಡಾ. ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ ದಲಿತಪರ ಸಂಘಟನೆಯ ಮುಖಂಡರುಗಳಿಗೆ ಪ್ರಸ್ತುತದ ದಿನಗಳಲ್ಲಿ ನ್ಯಾಯ ಸಿಗುತ್ತಿಲ್ಲ, ಕಾರಣ ಸಂವಿಧಾನಬದ್ಧವಾಗಿ ಅಧಿಕಾರಿ ವರ್ಗದವರು ಕೆಲಸ ನಿರ್ವಹಿಸದೇ ಬರೀ ದಳ್ಳೂರಿತನದಿಂದ ಕೆಲಸ ಮಾಡುತ್ತಿರುವುದಕ್ಕೆ ದಲಿತರಿಗೆ ಸಾಮಾಜಿಕ ನ್ಯಾಯ ಸಿಗದೇ ಪರದಾಡುವಂತಹ ಸ್ಥಿತಿ ಬಂದಿದೆ ಎಂದರು.ಸಭೆಯಲ್ಲಿ ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಅಪ್ಪಾಜಯ್ಯ, ಕರ್ನಾಟಕ ರಾಜ್ಯ ಮಾದಿಗ ಸಮಾಜದ ಗೌರವಾಧ್ಯಕ್ಷ ಟಿ.ಆರ್.ಗುರುಪ್ರಸಾದ್, ಅಂಬೇಡ್ಕರ್ ಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಸುಮಾ, ದಲಿತಪರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ಗೋಪಾಲ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಎಸ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎನ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮ್ಮದ್, ಮುಖಂಡರುಗಳಾದ ಸಿದ್ಧಮ್ಮ ಕೆಸರಮಡು, ಶೋಭ, ಆಂಜಿನಮ್ಮ, ನಿರಂಜನ್, ಮಂಜುನಾಥ್, ರಂಗಸ್ವಾಮಿ, ಟಿ.ಎನ್.ನರಸಿಂಹಮೂರ್ತಿ, ಕಿರಣ್ ವೈ.ಎಸ್, ಮನು ಟಿ, ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ