ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವಕನೊಬ್ಬ ಯುವತಿಯರ ಮುಂದೆ ಶರ್ಟ್‌ ಬಿಚ್ಚಿ ಹುಚ್ಚಾಟ ನಡೆಸಿರುವ ಘಟನೆ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯ ನಡೆದಿದೆ.

ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ತಾಲತಾಣದಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ:

ಶನಿವಾರ ರಾತ್ರಿ ಯುವತಿಯೊಬ್ಬಳು ತನ್ನ ಕುಟುಂಬ ಸಮೇತ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಬಂದಿದ್ದು, ಈ ವೇಳೆ ಯುವಕನೊಬ್ಬ ಶರ್ಟ್‌ ಬಿಚ್ಚಿಕೊಂಡು ರೆಸ್ಟೋರೆಂಟ್‌ ಒಳಗೆ ಬಂದಿದ್ದು, ಇದನ್ನು ಗಮನಿಸಿದ ಯುವತಿ, ಫ್ಯಾಮಿಲಿ ಇದೆ ಜತೆಗೆ ಮಹಿಳೆಯರು ಇದ್ದಾರೆ, ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಾದ ಯುವಕ ಮತ್ತು ಆತನ ಜನತೆಯಲ್ಲಿದ್ದ ಮತ್ತೊಬ್ಬ ಯುವಕ.ಎಲ್ಲಾ ಬಟ್ಟೆ ಬಿಚ್ಚುತ್ತೇನೆ ಏನ್ ಮಾಡ್ಕೋಳ್ತೀಯಾ ಎಂದು ಆವಾಜ್ ಹಾಕಿದ್ದಾನೆ. ನನ್ನ ಬಟ್ಟೆ ನನ್ನಿಷ್ಟ ನೀನು ಯಾರು ಕೇಳುವುದಕ್ಕೆ ಎಂದಿದ್ದಾನೆ. ಆ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.