ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
2022-23ರಲ್ಲಿ ಮುದ್ದೇಬಿಹಾಳ, ತಾಳಿಕೋಟಿ ಹಾಗೂ ನಾಲತವಾಡದಲ್ಲಿ ನಗರೋತ್ಥಾನ ಯೋಜನೆಯಡಿ ಹಾಗೂ ಎಸ್‌ಎಫ್‌ಸಿ ವಿಶೇಷ ಅನುದಾದಡಿಯಲ್ಲಿ ಗುತ್ತಿಗೆದಾರರು ಅರ್ಧಂಬರ್ಧ ಕಾಮಗಾರಿ ಮಾಡಿ ಮುಂಗಡ ಹಣ ಪಾವತಿ ಮಾಡಿಕೊಂಡು ಕಾಮಗಾರಿ ನಿಗದಿತ ಅವಧಿ ಮುಗಿದರೂ ಇಲ್ಲಿತನಕವೂ ಪೂರ್ಣಗೊಳಿಸಿಲ್ಲ. ಅಲ್ಲದೇ, ಕಳಪೆ ಕಾಮಗಾರಿ ಮಾಡಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಂತಹ ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಜತೆಗೆ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಲೋಕಾಯುಕ್ತಕ್ಕೆ ಪತ್ರ ಬರೆಯಬೇಕಾಗುತ್ತದೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಎಚ್ಚರಿಕೆ ನೀಡಿದರು.ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿ.ಎಸ್.ಪಾಟೀಲ(ವನಿಕ್ಯಾಳ) ಎಂಬ ಗುತ್ತಿಗೆದಾರರು ₹ 7.93 ಕೋಟಿ ಅದರಲ್ಲಿ ₹ 90 ಲಕ್ಷ ಹಣವನ್ನು ಪಾವತಿ ಮಾಡಿಕೊಂಡಿದ್ದಾರೆ. ಅದರಂತೆ ನಗರೋತ್ಥಾನ ಯೋಜನೆಯಡಿಯಲ್ಲಿ ಆರ್.ಎಸ್.ಚೋರಗಿ ಎಂಬ ಗುತ್ತಿಗೆದಾರರು ಸುಮಾರು ₹ 3.75ಕೋಟಿಯಲ್ಲಿ ವಿವಿಧ ಕಾಮಗಾರಿ ನಿರ್ವಹಿಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಅದರಲ್ಲಿ ₹ 3.46 ಕೋಟಿ ಹಣ ಪಾವತಿ ಮಾಡಿಕೊಂಡಿದ್ದಾರೆ. ಇವರು ಬಿಜೆಪಿ ಸರ್ಕಾರದ ಪರವಾಗಿರುವ ಗುತ್ತಿಗೆದಾರರು ಮಾತ್ರವಲ್ಲದೇ ಕಾಮಗಾರಿ ನಿಲ್ಲಿಸಿ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರಲು ತರುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಗಳು ಹಳೆ ಕಾಮಗಾರಿಗಳನ್ನು 30 ತಿಂಗಳವರೆಗೆ ತಾತ್ಕಾಲಿಕವಾಗಿ ಪ್ರಾರಂಭಿಸದಂತೆ ಸೂಚಿಸಿದ್ದರು. ಆದರೇ 3 ತಿಂಗಳ ನಂತರ ಅರ್ಧಕ್ಕೆ ನಿಂತ ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸುವಂತೆ ಸೂಚಿಸಿದರು. ಈಗ 19 ತಿಂಗಳಾಯಿತಲ್ಲ ಯಾಕೇ ಈ ಗುತ್ತಿಗೆದಾರರು ಕಾಮಗಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.ಕೋಟ್‌ಇಲ್ಲಿಯತನಕ ನಾನು ಯಾವುದೇ ಗುತ್ತಿಗೆದಾರರನ್ನು ಕಾಮಗಾರಿ ನಿಲ್ಲಿಸಿ ಎಂದು ಹೇಳಿಲ್ಲ. ಮುಂದೆಯೂ ಹೇಳಲ್ಲ. ಸರ್ಕಾರಿ ನಿಯಮಾನುಸಾರ ಎಷ್ಟಿಮೇಟ್ ಪ್ರಕಾರ ಗುಣಮಟ್ಟ ಕಾಮಗಾರಿ ಮಾಡಿ, ಕಾಮಗಾರಿ ಪೂರ್ಣಗೊಳಿಸದೇ ಬಿಲ್ ಪಾವತಿ ಮಾಡಲು ಬರುವುದಿಲ್ಲ. ಅದನ್ನು ತಪ್ಪಿಸಿಕೊಳ್ಳಲು ಸರ್ಕಾರ ನಮಗೆ ಹಣ ಪಾವತಿ ಮಾಡುತ್ತಿಲ್ಲ ಎಂದು ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಡಬೇಕೆಂದೋ ಅಥವಾ ನಮ್ಮ ಸರ್ಕಾರಕ್ಕೆ ಕಟ್ಟ ಹೆಸರು ತರಬೇಕೇಂದೋ ಈ ರೀತಿ ಗುತ್ತಿಗೆದಾರರು ನಡೆದುಕೊಳ್ಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನಾವು ಕೂಡ ಇಷ್ಟು ದಿನ ತಾಳ್ಮೇಯಿಂದ ಇದ್ದೇವೆ. ಇನ್ನುಮುಂದೆ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ.ಸಿ.ಎಸ್.ನಾಡಗೌಡ, (ಅಪ್ಪಾಜಿ), ಶಾಸಕ