ಕನ್ನಡಪ್ರಭ ವಾರ್ತೆ ಮಂಡ್ಯ
ಇವು ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಪ್ರಜಾಸೇವಾ ಅಭಿಯಾನ ವೇಳೆ ನಡೆದ ಪ್ರಮುಖ ಸಂಗತಿಗಳು. ಪ್ರಜಾಸೇವಾ ಅಭಿಯಾನವನ್ನು ನಾಲ್ಕನೇ ಶನಿವಾರ ಆಯೋಜಿಸಲಾಗಿತ್ತು. ನಾಲ್ಕನೇ ಶನಿವಾರ ಸರ್ಕಾರಿ ರಜೆ ದಿನ. ಎಷ್ಟೋ ಜನರಿಗೆ ಕಾರ್ಯಕ್ರಮವಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ.
ಅಭಿಯಾನ ನಡೆಸುವ ನಾಲ್ಕೈದು ದಿನಗಳ ಮುಂಚೆ ತಹಸೀಲ್ದಾರ್ ಯಾವುದೇ ಮಾಹಿತಿ, ಪ್ರಚಾರ ಮಾಡಿರಲಿಲ್ಲ. ಆದರೂ ಪ್ರಜಾಸೇವಾ ಆಭಿಯಾನವಿರುವ ವಿಷಯ ತಿಳಿದು ಹಲವು ಸಾರ್ವಜನಿಕರು ತಾಲೂಕು ಕಚೇರಿಗೆ ಆಗಮಿಸಿದ್ದರು. ಅಭಿಯಾನಕ್ಕೆ ಬಂದ ವಿವಿಧ ಇಲಾಖೆ ಅಧಿಕಾರಿಗಳು ಸಹಿ ಮಾಡಿ ತೆರಳುತ್ತಿದ್ದರು. ಅರ್ಜಿ ಸ್ವೀಕರಿಸುವ ಕೌಂಟರ್‌ನ್ನೂ ತೆರೆದಿರಲಿಲ್ಲ. ತಹಸೀಲ್ದಾರ್ ಕುರ್ಚಿ ಖಾಲಿ ಇತ್ತು. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಪ್ರಜಾಸೇವಾ ಅಭಿಯಾನ ಮಧ್ಯಾಹ್ನ 12 ಗಂಟೆಯಾದರೂ ಆರಂಭಗೊಳ್ಳಲೇ ಇಲ್ಲ. ಸಭೆಗೆ ಆಗಮಿಸಿದ್ದ ಹಲವು ಅಧಿಕಾರಿಗಳು ಅವರೇ ಸಾರ್ವಜನಿಕರು ಬರೆದುಕೊಟ್ಟಂತೆ ಅನಾಮಧೇಯರ ಹೆಸರಿನಲ್ಲಿ ಅವರೇ ಅರ್ಜಿಗಳನ್ನು ಬರೆದುಕೊಡುತ್ತಿದ್ದರು.ಅಭಿಯಾನಕ್ಕೆ ಕೆಲ ಅರ್ಜಿಗಳು ಮಾತ್ರ ಬಂದಿವೆ ಎಂಬುದನ್ನು ಬಿಂಬಿಸುವ ಪ್ರಯತ್ನ ಇದಾಗಿತ್ತು. ನಂತರ ಅಧಿಕಾರಿಗಳು ಸಹಿ ಮಾಡಿ ವಾಪಸ್ ತೆರಳುತ್ತಿರುವುದನ್ನು ಕಂಡ ಸ್ಥಳದಲ್ಲಿದ್ದ ರೈತ ಮುಖಂಡರು ಮತ್ತು ಸಾಮಾಜಿಕ ಹೋರಾಟಗಾರರು ಕೆಲವು ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆ ತೆಗೆದುಕೊಂಡರು.
ತಹಸೀಲ್ದಾರ್ ವಿಶ್ವನಾಥ್ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಜಾನಪದ ಅಕಾಡೆಮಿ ಸಮಾರಂಭದಲ್ಲಿದ್ದರು. ಪ್ರಜಾಸೇವಾ ಅಭಿಯಾನದ ಸಭೆ ಕರೆದು ನೀವು ಅಂಬೇಡ್ಕರ್ ಭವನದಲ್ಲಿ ಕುಳಿತರೆ ಹೇಗೆ. ಅಧಿಕಾರಿಗಳು ಬಂದು ಬಂದು ಸಹಿ ಮಾಡಿ ವಾಪಸ್ ಹೋಗುತ್ತಿದ್ದಾರೆ. ಸಾರ್ವಜನಿಕರ ಅರ್ಜಿಗಳನ್ನು ಯಾರೂ ಸ್ವೀಕರಿಸುತ್ತಿಲ್ಲ. ಯಾರೂ ಇಲ್ಲದಿದ್ದ ಮೇಲೆ ಅಭಿಯಾನವನ್ನು ನಡೆಸುವ ಅಗತ್ಯವೇನಿತ್ತು ಎಂದು ಖಾರವಾಗಿ ರೈತ ಮುಖಂಡರು ಪ್ರಶ್ನಿಸಿದರು.
---
ಪ್ರಜಾಸೇವಾ ಅಭಿಯಾನದ ಅಂಗವಾಗಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಕೌಂಟರ್‌ಗಳ ಕೊರತೆ ಎದ್ದು ಕಾಣುತ್ತಿತ್ತು. ತಾಲೂಕು ಕಚೇರಿಯಲ್ಲಿ ಸಿಬ್ಬಂದಿಯಿದ್ದರೂ ಕಂಪ್ಯೂಟರ್‌ಗಳನ್ನಿಟ್ಟು ಅರ್ಜಿ ಸ್ವೀಕರಿಸುವುದಕ್ಕೆ ಬೇಜವಾಬ್ದಾರಿತನ ಎದ್ದು ಕಾಣುತ್ತಿತ್ತು. ಅರ್ಜಿ ಸ್ವೀಕರಿಸುವ ಸಿಬ್ಬಂದಿಗೆ ಸರಿಯಾದ ತರಬೇತಿ ಇಲ್ಲ. ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳು ಯಾವ ಇಲಾಖೆ ವ್ಯಾಪ್ತಿಗೆ ಬರುತ್ತವೆ, ಯಾವ ಅಧಿಕಾರಿಗಳಿಗೆ ಅದನ್ನು ನೀಡಬೇಕು ಎಂಬ ಮಾಹಿತಿಯೇ ಸಿಬ್ಬಂದಿಗೆ ನೀಡದಿರುವುದರಿಂದ ಸಾರ್ವಜನಿಕರು ಪೇಚಿಗೆ ಸಿಲುಕುವಂತಾಗಿತ್ತು. ಅರ್ಜಿ
--------------
- ಅಣ್ಣಯ್ಯ, ರೈತ ಮುಖಂಡ
ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ. ದುಡ್ಡು ಮಾಡೋದೇ ಅವರ ಮುಖ್ಯ ಗುರಿ. ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಬಗ್ಗೆ ಕಿಂಚಿತ್ತೂ ಆಸಕ್ತಿ ಇಲ್ಲ. ದೂರು ಸ್ವೀಕರಿಸುವ ಸಿಬ್ಬಂದಿಗೆ ಸರಿಯಾದ ತರಬೇತಿ ಕೊಟ್ಟಿಲ್ಲ. ಸಾರ್ವಜನಿಕರನ್ನು ಅಲೆದಾಡಿಸುವುದೇ ಇವರ ಕೆಲಸವಾಗಿದೆ. ಈ ಪುರುಷಾರ್ಥಕ್ಕೆ ಪ್ರಜಾಸೇವೆ ಅಭಿಯಾನ ಬೇರೆ ಕೇಡು. ಇವೆಲ್ಲಾ ಜನರ ಕಣ್ಣೊರೆಸಲು ಮಾಡುವ ನಾಟಕವಷ್ಟೇ.
- ಜಯರಾಂ, ಗೊರವಾಲೆ.