ಕನ್ನಡಪ್ರಭ ವಾರ್ತೆ ಹಾಸನ
ಈ ಜಡತ್ವ ಕಾರಣದಿಂದಲೇ ಯುವಕರಲ್ಲೇ ಹೆಚ್ಚಾಗಿ ಅನಾರೋಗ್ಯ ಮತ್ತು ಆಯಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಆತಂಕ ಹೊರ ಹಾಕಿದರು. ಇವತ್ತಿನ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿರುವುದಕ್ಕೆ ಕುಲ ಸಚಿವರು ಸಂತಸ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರೀಡೆಗೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದು, ಉತ್ತೇಜನ ಕಾರಣದಿಂದಲೇ ಕೆಲ ದಿನಗಳ ಹಿಂದೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ ಎಂದು ತಮ್ಮ ಸಂತಸ ಹಂಚಿಕೊಂಡರು.
ಗುಡ್ಡಗಾಡು ಓಟ ಸ್ಪರ್ಧೆಯ ಸಂಚಾಲಕರಾದ ಹಾಸನ ವಿವಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರ ನಾಯಕ್ ಸರ್ವರನ್ನೂ ವಂದಿಸಿದರು. ಚಾಂಪಿಯನ್‌ಶಿಪ್ ಪಡೆದವರು: ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಹಾಸನದ ಕಲಾ ಮತ್ತು ವಾಣಿಜ್ಯ ಕೇಂದ್ರ ಪಡೆದುಕೊಂಡಿತು. ಅದೇ ರೀತಿ ಮಹಿಳೆಯರ ವಿಭಾಗದ ಚಾಂಪಿಯನ್ ಶಿಪ್‌ನ್ನು ಹಾಸನದ ಎಂಜಿ ರಸ್ತೆಯ ಮಹಿಳಾ ಪ್ರಥಮ ದರ್ಜೆ ಕಾಲೇಜು ಪಡೆದುಕೊಂಡಿತು. ವೈಯಕ್ತಿಕ ಬಹುಮಾನ-ಪುರುಷರ ವಿಭಾಗ: ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಅರ್ಜುನ್ ಎಂ. ವೈ ಅವರು ೩೪:೫೦ ನಿಮಿಷದಲ್ಲಿ ಓಟ ಪೂರ್ಣಗೊಳಿಸಿ ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರು.ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯ ಎಚ್.ಡಿ.ದೇವೇಗೌಡ ಪ್ರಥಮ ದರ್ಜೆ ಕಾಲೇಜಿನ ಇಮ್ರಾನ್ ಬಿ.ಎಂ ಅವರು ೩೭:೫೯ ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ದ್ವಿತೀಯ ಬಹುಮಾನ ಪಡೆದುಕೊಂಡರೆ, ಹಾಸನದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕೇಂದ್ರದ ಧನರಾಜ್ ವೈ.ಕೆ ಅವರು ೩೮:೨೦ ನಿಮಿಷದಲ್ಲಿ ನಿಗದಿತ ಗುರಿ ಮುಟ್ಟುವ ಮೂಲಕ ತೃತೀಯ ಬಹುಮಾನ ಪಡೆದುಕೊಂಡರು. ಮಹಿಳೆಯರ ವಿಭಾಗ: ಹಾಸನದ ಎಂಜಿ ರಸ್ತೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪುಷ್ಪವಿ ಇವರು ೪೬:೨೭ ನಿಮಿಷದಲ್ಲಿ ಗುರಿ ಮುಟ್ಟಿ ಪ್ರಥಮ ಬಹುಮಾನ ಪಡೆದರು. ಹೊಳೆನರಸೀಪುರ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಅಂಕಿತಾ ಅವರು ೪೯:೩೬ ನಿಮಿಷದಲ್ಲಿ ಓಟ ಮುಗಿಸಿ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡರು. ಹಾಗೆಯೇ ಎಂಜಿ ರಸ್ತೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಚನಾ ಕಾರ್ಲೆ ಅವರು ೫೧:೫೭ ನಿಮಿಷ ಸಮಯ ತೆಗೆದುಕೊಂಡು ತೃತೀಯ ಬಹುಮಾನ ಪಡೆದುಕೊಂಡರು.ಬಹುಮಾನ ಪಡೆದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಹಾಸನ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಲಪ್ಪ ಏ.ಗಜೇರ ಅವರು ಶುಭಕೋರಿದರು.