ದೇಹದಾನಿ ಕುಟುಂಬಸ್ಥರಿಗೆ ಬಿಎಲ್ ಡಿಇ ಗೌರವ

KannadaprabhaNewsNetwork |  
Published : Sep 27, 2026, 03:00 AM IST
 | Kannada Prabha

ಸಾರಾಂಶ

ವಿಜಯಪುರ : ಸಾವಿನ ನಂತರವೂ ತಮ್ಮ ದೇಹವನ್ನು ವೈದ್ಯಕೀಯ ಅಧ್ಯಯನಕ್ಕೆ ದಾನ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ದೇಹದಾನಿಗಳ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ ಹಾಗೂ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ 14ನೇ ದೇಹದಾನ ಪ್ರೇರಣಾ ದಿನಾಚರಣೆ ಹಾಗೂ ದೇಹದಾನಿಗಳ ಸಾಮೂಹಿಕ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಾವಿನ ನಂತರವೂ ತಮ್ಮ ದೇಹವನ್ನು ವೈದ್ಯಕೀಯ ಅಧ್ಯಯನಕ್ಕೆ ದಾನ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ದೇಹದಾನಿಗಳ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಯಪುರ ಹಾಗೂ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ 14ನೇ ದೇಹದಾನ ಪ್ರೇರಣಾ ದಿನಾಚರಣೆ ಹಾಗೂ ದೇಹದಾನಿಗಳ ಸಾಮೂಹಿಕ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ದೇಹದಾನಿ ದಿ. ಎಂ.ಬಿ.ಹೂಗಾರ ಅವರ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮವನ್ನು ಬಿ.ಎಲ್.ಡಿ.ಇ. ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ, ಡೀನ್ ಹಾಗೂ ಪ್ರಾಂಶುಪಾಲೆ ಡಾ.ತೇಜಸ್ವಿನಿ ವಲ್ಲಭ ಉದ್ಘಾಟಿಸಿ ಮಾತನಾಡಿ, ದೇಹದಾನ ಸಾವಿನ ಅಂತ್ಯವಲ್ಲ. ಅದು ಜ್ಞಾನ ಮತ್ತು ಸೇವೆಯ ಮೂಲಕ ಮುಂದುವರಿಯುವ ಬದುಕಿನ ಮತ್ತೊಂದು ರೂಪ. ಒಬ್ಬ ವ್ಯಕ್ತಿ ತನ್ನ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡುವ ಮೂಲಕ ಭವಿಷ್ಯದ ವೈದ್ಯರ ಶಿಕ್ಷಣಕ್ಕೆ ನೆರವಾಗುತ್ತಾನೆ. ಈ ಮೂಲಕ ಅಸಂಖ್ಯಾತ ರೋಗಿಗಳ ಚಿಕಿತ್ಸೆಗೆ ಪರೋಕ್ಷವಾಗಿ ಕೊಡುಗೆ ನೀಡುತ್ತಾನೆ. ಇಂತಹ ದಾನಿಗಳ ತ್ಯಾಗಕ್ಕೆ ಸಮಾಜ ಸದಾ ಕೃತಜ್ಞವಾಗಿರಬೇಕು ಎಂದರು.

ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ನೋವಿನ ನಡುವೆಯೂ ಅವರ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದಾನ ಮಾಡುವ ಮಹತ್ವದ ನಿರ್ಧಾರ ಕೈಗೊಂಡ 85 ದೇಹದಾನಿ ಕುಟುಂಬಗಳ ಸದಸ್ಯರನ್ನು ಗೌರವಿಸಲಾಯಿತು.

ಬಿ.ಎಲ್.ಡಿ.ಇ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್. ಬಿ.ಪಾಟೀಲ, ವೈದ್ಯಕೀಯ ಮಹಾವಿದ್ಯಾಲಯದ ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ಎಸ್.ಬುಲಗೌಡ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ಅಧ್ಯಕ್ಷ ಶಿವಾನಂದ ಹೂಗಾರ, ಉಪಾಧ್ಯಕ್ಷೆ ಶಂಕ್ರಮ್ಮ ಹೂಗಾರ, ಬಸಂತಿ ಗುತ್ತೇದಾರ, ಡಾ.ಈಶ್ವರ ಬಾಗೋಜಿ, ಡಾ.ಸಂಧ್ಯಾ, ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿಯ ವಿಜಯಪುರ ಜಿಲ್ಲಾ ಸಂಚಾಲಕ ಪ್ರೀತು ದಶವಂತ, ಪೂಜಾ ಹೂಗಾರ, ವೈದ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಚ್‌ಐವಿ–ಏಡ್ಸ್‌ ಕುರಿತು ಬೀದಿ ನಾಟಕ
ಹೊರಗಿನವರ ಸ್ಪರ್ಧೆಗೆ ಸ್ಥಳೀಯರ ವಿರೋಧ