ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಬುಧವಾರ ತಾಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಹುಲ್ಲಿಕೇರಿ ಜಿಪಂ ವ್ಯಾಪ್ತಿಯ ಗ್ರಾಮಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನನ್ನನ್ನು ಗೆಲ್ಲಿಸಿದರೆ, ನಿಮ್ಮ ಮನೆಮಗಳಾಗಿ ಸೇವೆ ಮಾಡುವೆ. ನನ್ನ ಹಲವಾರು ಕನಸುಗಳಿಗೆ ಸಾಕಾರ ಮಾಡುವ ಶಕ್ತಿ ತಮ್ಮಲ್ಲಿದೆ. ತಮ್ಮ ಒಂದು ಮತ ನನಗೆ ಆಶೀರ್ವಾದ ಇದ್ದಂತೆ. ಜಿಲ್ಲೆಗೆ ಬರಬೇಕಾದ ಎಲ್ಲ ಯೋಜನೆಗಳನ್ನು ತರುತ್ತೇನೆ. ಒಂದು ಬಾರಿ ಅವಕಾಶ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ದೇಶದಲ್ಲಿ ಮೋದಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ನಾಲ್ಕು ಅವಧಿ ಸಂಸದರಾಗಿದ್ದ ಪಿ.ಸಿ.ಗದ್ದಿಗೌಡರು ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ. ಈ ಬಾರಿ ಮತದಾರರು ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.ಈ ವೇಳೆ ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ, ಕಾರ್ಯಕರ್ತ ರಮೇಶ ಬೂದಿನಹಾಳ, ಗ್ರಾಮದ ಹಿರಿಯರು, ಗ್ರಾಪಂ ಸದಸ್ಯರು ಇದ್ದರು.